ಡಾಕ್ಟರ್ ಬ್ರೋ ರೀತಿ ಬೆಂಗಳೂರಿಗೆ ಬಂದಿದ್ದ ನೆದರ್‌ಲ್ಯಾಂಡ್ ಯೂಟ್ಯೂಬರ್ ಮೇಲೆ ಹಲ್ಲೆ
ಡಾಕ್ಟರ್ ಬ್ರೋ ರೀತಿಯಲ್ಲಿ ನೆದರ್‌ಲ್ಯಾಂಡ್‌ನಿಂದ ಬೆಂಗಳೂರಿನ ಚಿಕ್ಕಪೇಟೆಗೆ ಬಂದಿದ್ದ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಜೂ.12): ಕರ್ನಾಟಕದ ಡಾಕ್ಟರ್ ಬ್ರೋ ರೀತಿಯಲ್ಲಿ ನೆದರ್‌ಲ್ಯಾಂಡ್‌ನಿಂದ ಬೆಂಗಳೂರಿನ ಚಿಕ್ಕಪೇಟೆಗೆ ಬಂದಿದ್ದ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತಕ್ಕೆ ಬಂದ ವಿದೇಶಿ ಪ್ರಜೆಗೆ ಸ್ಥಳೀಯನಿಂದ ಹಲ್ಲೆಗೆ ಯತ್ನ ನಡೆದಿದೆ. ಈ ಮೂಲಕ ಬೆಂಗಳೂರಿನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜು ಆದಂತಾಗಿದೆ. ನಗರದ ಚಿಕ್ಕ ಚಿಕ್ಕಪೇಟೆಯಲ್ಲಿ ಘಟನೆ ನಡೆದಿದೆ. ನೆದರ್‌ಲ್ಯಾಂಡ್ ನ ಪೆಡ್ರೊ ಮೋಟೋ ಎಂಬ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ ನಡೆಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಂಡ ಯೂಟ್ಯೂಬರ್ ಅವರಿಂದ ತಪ್ಪಿಸಿಕೊಂಡು ಪರಾರಿ ಆಗಿ ನಿಟ್ಟುಸಿರು ಬಿಟ್ಟಿದ್ದಾರೆ. ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಚಿಕ್ಕಪೇಟೆ ಎಕ್ಸ್ ಪ್ಲೋರ್ ಮಾಡಲು ಬಂದಿದ್ದ ವೇಳೆ ಎಳೆದಾಡಿ ಹಲ್ಲೆಗೆ ಯತ್ನಿಸಿರೊ ಸ್ಥಳೀಯ ವರ್ತಕನನ್ನು ಈಗ ಸ್ವಯಂ ಕೇಸ್ ದಾಖಲಿಸಿಕೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
BENGALURU: ಡಬಲ್ ಚಾರ್ಜ್ ಕೊಡದ ಅಸ್ಸಾಂ ಸಹೋದರರಿಗೆ ಚಾಕು ಚುಚ್ಚಿದ ಆಟೋ ಚಾಲಕ: ದಾರುಣ ಸಾವು
ಭಾರತವೆಂದರೆ ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ನಮ್ಮ ದೇಶದಲ್ಲಿ ವಿದೇಶಿಗನ ಮೃಲೆ ದರ್ಪ ತೋರಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ವಿದೇಶಿ ಪ್ರಜೆಯ ಮೇಲಿನ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಸುಮೋಟೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸೆಕ್ಷನ್- 92 ಕೆಪಿ ಕಾಯ್ದೆ ಅಡಿಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರಿಂದ ದೂರ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಆರೋಪಿ ಆಯುಬ್ ನನ್ನ ವಶಕ್ಕೆ ಪಡೆದಿರುವ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಅದರಲ್ಲಿ ವಿನಯ್ ಎಂಬುವವರು "ಇಂಥವರಿಂದಲೇ ಬೆಂಗಳೂರಿನ ಘನತೆಗೆ ಚ್ಯುತಿ... ಗಡಿ ದಾಟಿ ವಿಶ್ವದ ಮೂಲೆ ಮೂಲೆ ಪರಿಚಯಿಸುತ್ತಿರುವ ನಮ್ಮ ಕನ್ನಡದ ಯೂಟ್ಯೂಬರ್'ಗಳಿಗೆ ಆಯಾ ಭಾಗದ ಜನ ಕೊಡುವ ಗೌರವವನ್ನಾದರೂ ನೋಡಿ ಇಂಥವರು ಸ್ವಲ್ಪ ಬುದ್ಧಿ ಕಲಿಯಲಿ" ಎಂದು ಹೇಳಿದ್ದಾರೆ.
ಹಳೆ ಬಟ್ಟೆ ವ್ಯಾಪಾರಕ್ಕೆ ತೊಂದರೆ ಆಗುತ್ತೆಂದು ವೀಡಿಯೋ ತಡೆಯಲು ಯತ್ನ: ನೆದರ್‌ಲ್ಯಾಂಡ್ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನಿಸಿದ ನಾವಾಬ್ ಬಿನ್ ಹಯಾತ್ ಷರೀಫ್, 58 ವರ್ಷ, ಹಳೇ ಗುಡ್ಡದಹಳ್ಳಿ ಇತನು ಆಟೋ ಡ್ರೈವರ್ ಆಗಿದ್ದು, ಜೊತೆಗೆ ಹಳೇ ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾನೆ. ಈತನು ಈಗ್ಗೆ ಸುಮಾರು 2 ತಿಂಗಳ ಹಿಂದೆ ಸುಲ್ತಾನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿರುವಾಗ ವಿದೇಶಿ ವ್ಯಕ್ತಿ, Pedro moto ರಸ್ತೆಯಲ್ಲಿ ವಿಡಿಯೋ ಮಾಡುತ್ತಿರುವಾಗತನ್ನ ಹಳೇ ಬಟ್ಟೆ ವ್ಯಾಪಾರಕ್ಕೆ ತೊಂದರೆಯಾಗುತ್ತಾದೆಂದು ಅಥವಾ ಪೊಲೀಸ್ ನವರಿಗೆ ಏನಾದರೂ ಮಾಹಿತಿ ನೀಡಬಹುದೆಂದು ವಿಡಿಯೋ ಮಾಡದಂತೆ ತಡೆದು ಅಡ್ಡಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡುತ್ತಿದ್ದ ವಿದೇಶಿಗನಿಗೆ ತೊಂದರೆ ಮಾಡಿರುತ್ತಾನೆ. ಈ ಸಂಬಂಧ ಮುದಸ್ಸಿರ್ ಅಹಮದ್ ರವರು Twitter ನಲ್ಲಿ ದೂರು ದಾಖಲಿಸಿದ್ದು, ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಯಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.