ವೈದ್ಯಕೀಯ ಸೀಟು ಕೊಡಿಸೋದಾಗಿ 8 ವಿದ್ಯಾರ್ಥಿಗಳಿಗೆ ಬರೋಬ್ಬರಿ ₹6.38 ಕೋಟಿ ವಂಚನೆ!

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ಬರೋಬ್ಬರಿ ₹6.38 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆಯೊಬ್ಬಳ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ

Chennai woman defrauded 8 students of 6.38 crore by giving them medical seats rav

ಬೆಂಗಳೂರು (ಅ.29): ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ಬರೋಬ್ಬರಿ ₹6.38 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆಯೊಬ್ಬಳ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವೈಟ್‌ಫೀಲ್ಡ್‌ ನಿವಾಸಿ ದೀಪ್ತಿ ಕೆ.ಸಿಂಹ ಎಂಬುವವರು ನೀಡಿದ ದೂರಿನ ಮೇರೆಗೆ ಚೆನ್ನೈ ಮೂಲದ ಅನ್ನಾ ಜೇಕಬ್‌ ಎಂಬಾಕೆ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ: ದೂರುದಾರರಾದ ದೀಪ್ತಿ ಅವರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸದ್ಯ ಮನೆ ಪಾಠ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವಸುಂಧರ ಎಂಬುವವರ ಮುಖಾಂತರ ಅನ್ನಾ ಜೇಕಬ್‌ ಪರಿಚಯವಾಗಿದೆ. ಈ ವೇಳೆ ಅನ್ನಾ ಜೇಕಬ್‌, ತಾನು ಕೋರಮಂಗಲದ ಸೇಂಟ್‌ ಜಾನ್ ಮೆಡಿಕಲ್ ಕಾಲೇಜು ಹಾಗೂ ವೆಲ್ಲೂರಿನ ಸಿಎಂಸಿ ಮೆಡಿಕಲ್ ಕಾಲೇಜುಗಳಲ್ಲಿ ಟ್ರಸ್ಟಿ ಆಗಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಈ ಎರಡೂ ಕಾಲೇಜುಗಳಲ್ಲಿ ಎಂಬಿಬಿಎಸ್‌ ಮತ್ತು ಎಂಡಿ ಮ್ಯಾನೇಜ್‌ಮೆಂಟ್‌ ಸೀಟುಗಳು ಖಾಲಿ ಇದ್ದು, ಕೊಡಿಸುವುದಾಗಿ ಹೇಳಿದ್ದಾರೆ. 

ವಿಜಯಪುರ ಬಳಿಕ ಮತ್ತೆರಡು ಜಿಲ್ಲೆಗೆ ವಕ್ಫ್ ಶಾಕ್! ರೈತರ ಭೂಮಿಯಲ್ಲಿ 'ವಕ್ಫ್ ಆಸ್ತಿ' ಹೆಸರು!

ಯಾರಿಗಾದರೂ ಸೀಟುಗಳು ಬೇಕಿದ್ದಲ್ಲಿ ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಬಳಿಕ ದೀಪ್ತಿ ಅವರು ಈ ವಿಚಾರವನ್ನು ಕೆಲ ಪರಿಚಿತ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಎಂಟು ವಿದ್ಯಾರ್ಥಿಗಳ ಪೋಷಕರು ನಗರದ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಆರೋಪಿ ಅನ್ನಾ ಜೇಕಬ್‌ಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಣ ಕೊಟ್ಟರೆ ಸೀಟು ಕೊಡಿಸುವುದಾಗಿ ಅನ್ನಾ ಜೇಕಬ್‌ ಭರವಸೆ ನೀಡಿದ್ದಾರೆ.

ಏನಾಗ್ತಿದೆ ಬೆಂಗಳೂರಲ್ಲಿ? ರಸ್ತೆಯಲ್ಲಿ ಮದ್ಯ ಸೇವನೆ ಮಾಡಿದ್ದನ್ನು ಪ್ರಶ್ನಿಸಿದ ದಂಪತಿಗೆ ಚಾಕು ಇರಿದ ಪುಂಡರು!

ಬಳಿಕ ಐದು ವಿದ್ಯಾರ್ಥಿಗಳ ಪೋಷಕರು ದೀಪ್ತಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆ ಹಣವನ್ನು ದೀಪ್ತಿ ಅವರು ಚೆನ್ನೈನ ಬ್ಯಾಂಕ್‌ವೊಂದರ ಆರೋಪಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳ ಪೋಷಕರು ನೇರವಾಗಿ ಅನ್ನಾ ಜೇಕಬ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಒಟ್ಟು 8 ಮಂದಿಯಿಂದ ₹6.38 ಕೋಟಿ ಹಣ ಪಡೆದಿರುವ ಆರೋಪಿ ಅನ್ನಾ ಜೇಕಬ್‌ ಯಾವುದೇ ಸೀಟು ಕೊಡಿಸದೆ ವಂಚಿಸಿದ್ದಾರೆ. ಈ ಸಂಬಂಧ ದೀಪ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios