ತಮಿಳುನಾಡಿನಲ್ಲಿ 79 ವರ್ಷದ ವ್ಯಕ್ತಿಯೊಬ್ಬ ಸಮಯಕ್ಕೆ ಸರಿಯಾಗಿ ಊಟ ನೀಡದ ಕಾರಣಕ್ಕೆ ತನ್ನ ಪತ್ನಿಯನ್ನು ಕೊಂದಿದ್ದಾನೆ. ಮಧುಮೇಹಿಯಾಗಿದ್ದ ವಿನಾಯಗಂಗೆ ಆತನ ಪತ್ನಿ ಧನಲಕ್ಷ್ಮಿ ಊಟ ಬಡಿಸಲು ವಿಳಂಬಿಸಿದ್ದರಿಂದ ಈ ಕೊಲೆ ನಡೆದಿದೆ.
ಚೆನ್ನೈ (ಫೆ.21): ಸಮಯಕ್ಕೆ ಸರಿಯಾಗಿ ಊಟ ನೀಡದ ಕಾರಣಕ್ಕಾಗಿ 79 ವರ್ಷದ ವ್ಯಕ್ತಿ ತನ್ನ ಪತ್ನಿಯನ್ನು ಕೊಂದಿರುವ ಘಟನೆ ತಮಿಳುನಾಡಿನ ತಿರುಮುಲ್ಲೈವೊಯಲ್‌ನಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಆರೋಪಿಯಾಗಿರುವ ವಿನಾಯಗಂ ಮಧುಮೇಹಿಯಾಗಿದ್ದು, ತನ್ನ ಹೆಂಡತಿ ತನಗೆ ಸೂಕ್ತವಾಗಿ ಆರೈಕೆ ಮಾಡುತ್ತಿಲ್ಲ ಎಂದು ಭಾವಿಸಿದ್ದ. ಇದು ವಿನಾಯಗಂ ಮತ್ತು ಆತನ ಕೊಲೆಯಾದ ಪತ್ನಿ ಧನಲಕ್ಷ್ಮಿ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಔಷಧಿ ತೆಗೆದುಕೊಳ್ಳಬೇಕಿದ್ದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಎಂದು ವಿನಾಯಗಂ ಪ್ರತಿ ಬಾರಿ ಹೆಂಡತಿಗೆ ಹೇಳುತ್ತಿದ್ದ. ಆದರೆ, 65 ವರ್ಷದ ಧನಲಕ್ಷ್ಮಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ನೀಡಲು ಸಾಧ್ಯವಾಗುತ್ತಿರಲಿಲ್ಲ.
ಗಣಪತಿ ಮತ್ತು ಮಣಿಕಂದನ್ ಎಂಬ ಇಬ್ಬರು ಗಂಡು ಮಕ್ಕಳಿರುವ ದಂಪತಿ ತಿರುಮುಲ್ಲೈವೊಯಲ್‌ನ ಕಮಲನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಊಟ ಬಡಿಸಲು ವಿಳಂಬ ಮಾಡಿದ್ದಕ್ಕಾಗಿ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಕೋಪದ ಭರದಲ್ಲಿ, ವಿನಯಾಗಂ ಅಡುಗೆಮನೆಯಿಂದ ಚಾಕು ತೆಗೆದುಕೊಂಡು ತನ್ನ ಹೆಂಡತಿಯ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಗಣಪತಿ ಮತ್ತು ಮಣಿಕಂದನ್ ಇಬ್ಬರೂ ಕೆಲಸಕ್ಕೆ ಹೋದ ನಂತರ ಈ ಘಟನೆ ನಡೆದಿದೆ.
ಪುತ್ರರು ಕೆಲಸದಿಂದ ಹಿಂತಿರುಗಿದ ತಕ್ಷಣ, ಅವರ ತಾಯಿ ಸತ್ತಿದ್ದು ಮತ್ತು ಅವರ ತಂದೆ ಹತ್ತಿರದಲ್ಲಿ ಬಿದ್ದಿರುವುದು ಕಂಡುಬಂದಿದೆ. ಏನಾಯಿತು ಎಂದು ಅವರ ತಂದೆಯನ್ನು ಕೇಳಿದಾಗ, ವಿನಯಾಗಂ ಉತ್ತರಿಸಲಿಲ್ಲ ಮತ್ತು ಏನೂ ತಿಳಿದಿಲ್ಲ ಎಂದು ಹೇಳಿದ್ದರು. ಏನೋ ಅನುಮಾನಾಸ್ಪದ ಸಂಗತಿಯನ್ನು ಕಂಡುಕೊಂಡ ಪುತ್ರರು ತಿರುಮುಲ್ಲೈವೊಯಲ್ ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರಣೆಯ ಸಮಯದಲ್ಲಿ, ವಿನಯಾಗಂ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ವಿನಯಾಗಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಈ ದೇಶದಲ್ಲಿ ಕ್ರೈಮ್ ರೇಟ್ ಝೀರೋ… ಜೈಲುಗಳೆಲ್ಲಾ ಖಾಲಿ ಖಾಲಿ
ಇದೇ ರೀತಿಯ ಘಟನೆಯಲ್ಲಿ, ಮಧ್ಯಪ್ರದೇಶದ ಕಟ್ಟಡ ಕಾರ್ಮಿಕನೊಬ್ಬ ಅಡುಗೆ ಮಾಡಲು ವಿಳಂಬ ಮಾಡಿದ್ದಕ್ಕಾಗಿ ತನ್ನ ಹೆಂಡತಿಯನ್ನು ಸಾಯಿಸಿದ್ದ. ಆ ವ್ಯಕ್ತಿ ತನ್ನ ಹೆಂಡತಿಯ ತಲೆಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದರಿಂದ ಆಕೆ ಸಾವು ಕಂಡಿದ್ದಳು.
ಪಾಳುಮನೆಯಲ್ಲಿ ಪ್ರಿಯಕರನೊಂದಿಗೆ ಪತ್ನಿ ಸರಸ; ಸ್ಥಳಕ್ಕೆ ಬಂದ ಪತಿ, ಮುಂದೇನಾಯ್ತು ನೋಡಿ!
