Asianet Suvarna News Asianet Suvarna News

ಜನರು, ಮಕ್ಕಳು ನೋಡುತ್ತಿರುವಾಗಲೇ ಕಲ್ಲು, ಟೈಲ್ಸ್‌, ಚೂರಿಯಿಂದ ವ್ಯಕ್ತಿಯ ಮೇಲೆ ಹಲ್ಲೆ!

ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿಯನ್ನು ಇಬ್ಬರು ವ್ಯಕ್ತಿಗಳು ಅಟ್ಟಾಡಿಸಿಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮನೆಯ ಎದುರು ಆತ ಬಿದ್ದಾಗ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

CCTV footage  Viral Delhi Man Beaten With Stones Tiles And Knife As Children Watch san
Author
First Published Dec 2, 2023, 10:04 PM IST

ನವದೆಹಲಿ (ಡಿ.2): ದೆಹಲಿಯ ಆದರ್ಶ ನಗರದಲ್ಲಿ ಇಬ್ಬರು ವ್ಯಕ್ತಿಗಳು ಕಲ್ಲು ಮತ್ತು ಚಾಕುವಿನಿಂದ ವ್ಯಕ್ತಿಯನ್ನು ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿಯನ್ನು ಇಬ್ಬರು ವ್ಯಕ್ತಿಗಳು ಬೆನ್ನಟ್ಟಿ ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆ ವ್ಯಕ್ತಿ ಮನೆಯ ಎದುರು ಬಿದ್ದಾಗ ದಾಳಿಕೋರರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬ, ಆತನನ್ನು ಒದ್ದು, ಹೊಡೆಯಲು ಆರಂಭ ಮಾಡುತ್ತಾರೆ. ಇನ್ನೊಬ್ಬ ದಾಳಿಕೋರ, ಚಾಕುವನ್ನು ತೆಗೆದು ಆತನನ್ನು ಇರಿಯಲು ಪ್ರಯತ್ನ ಮಾಡುತ್ತಾನೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ಆತನನ್ನು ತಡೆಯುತ್ತಾನೆ. ನಂತರ ಇಬ್ಬರೂ ಪಕ್ಕದಲ್ಲಿ ಬಿದ್ದಿರುವ ಕಲ್ಲುಗಳು ಮತ್ತು ಹೆಂಚುಗಳನ್ನು ಎತ್ತಿಕೊಂಡು ಆತನ ಮೇಲೆ ಹಲ್ಲೆ ಮಾಡಲು ಆರಂಭಿಸುತ್ತಾರೆ. ಶಾಲೆಯ ಬಳಿ ಈ ಘಟನೆ ನಡೆದ ಕಾರಣ, ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಮನೆಗೆ ತೆರಳುತ್ತಿದದ ವೇಳೆ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಹೊಡೆಯುತ್ತಿರುವಾಗ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸುತ್ತಲೂ ಸೇರುತ್ತಾರೆ. ಆದರೆ ಯಾರೊಬ್ಬರೂ ಆತನಿಗೆ ಸಹಾಯ ಮಾಡೋದಿಲ್ಲ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಇನ್ನು ದೂರು ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ಥನ ಕುಟುಂಬದಿಂದ ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮೀನಾ ತಿಳಿಸಿದ್ದಾರೆ.

Follow Us:
Download App:
  • android
  • ios