ಬೆಂಗಳೂರು(ಅ.04): ಮಾದಕ ವಸ್ತು ಪ್ರಕರಣದ ಪ್ರಮುಖ ಆರೋಪಿ, ಪೇಜ್‌ ತ್ರಿ ಪಾರ್ಟಿ ಆಯೋಜನೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ ಗ್ರಾಹಕರನ್ನು ಸೆಳೆಯಲು ಒಂಬತ್ತು ಇ-ಮೇಲ್‌ ಐಡಿಗಳನ್ನು ಬಳಸುತ್ತಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

"

ವೀರೇನ್‌ ಪಬ್‌, ಕ್ಲಬ್‌, ಹೋಟೆಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳನ್ನು ರಂಗೇರಿಸಲು ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರು ಬರುತ್ತಿದ್ದರು. ಪ್ರತೀಕ್‌ ಶೆಟ್ಟಿ, ರವಿಶಂಕರ್‌ ಹಾಗೂ ರಾಹುಲ್‌ ಅವರಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ಎಂದು ಆರೋಪ ಬಂದಿದೆ.

ಮಾದಕ ವಸ್ತು ಮಾರಾಟ ಜಾಲ: ಖನ್ನಾ ಮಂಪರು ಪರೀಕ್ಷೆಗೆ ಕೋರ್ಟ್‌ ಸಮ್ಮತಿ

ಇಂತಹ ಪಾರ್ಟಿಗಳಿಗೆ ಗ್ರಾಹಕರ ಸಂಘಟಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ವೀರೇನ್‌ ಪ್ರಚಾರ ನಡೆಸುತ್ತಿದ್ದ. ಇದಕ್ಕಾಗಿ ಒಂಬತ್ತು ಇ-ಮೇಲ್‌ ಐಡಿಗಳನ್ನು ಆತ ಬಳಸುತ್ತಿದ್ದಾನೆ. ಇದರಲ್ಲಿ ಡ್ರಗ್ಸ್‌ ಪಾರ್ಟಿಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಅಡಕವಾಗಿದೆ. ಈ ಪೈಕಿ ಕೇವಲ ಐದು ಇ-ಮೇಲ್‌ ಐಡಿ ಬಗ್ಗೆ ಮಾತ್ರ ವೀರೇನ್‌ ಬಾಯ್ಬಿಟ್ಟಿದ್ದಾನೆ. ಉಳಿದವುಗಳ ಇ-ಮೇಲ್‌ಗಳ ಬಗ್ಗೆ ಆತ ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಸೈಬರ್‌ ತಜ್ಞರ ಮೂಲಕ ಇ-ಮೇಲ್‌ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ.