Asianet Suvarna News Asianet Suvarna News

ಬೆಂಗಳೂರು ರೇವ್ ಪಾರ್ಟಿ: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ವೈದ್ಯ ತಪಾಸಣೆ ಯಲ್ಲಿ ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಮೇ 27ರಂದು ಸೋಮವಾರ ವಿಚಾ ರಣೆಗೆ ಬರುವಂತೆ ಎಂಟು ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದ ವರನ್ನು ಮುಂದಿನ ಹಂತದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

CCB Notice to 8 people including actress Hema on Bengaluru Rave Party Case grg
Author
First Published May 26, 2024, 5:30 AM IST

ಬೆಂಗಳೂರು(ಮೇ.26):  ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ಪ್ರಕರಣ ಸಂಬಂಧ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ವಾಟ್ಸಪ್‌ನಲ್ಲಿ ನೋಟಿಸ್‌ ಜಾರಿಗೊಳಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ವೈದ್ಯ ತಪಾಸಣೆ ಯಲ್ಲಿ ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಮೇ 27ರಂದು ಸೋಮವಾರ ವಿಚಾ ರಣೆಗೆ ಬರುವಂತೆ ಎಂಟು ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದ ವರನ್ನು ಮುಂದಿನ ಹಂತದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಿನಿಮಾ ನಟಿ ಹೇಮಾ ಇಷ್ಟು ದೊಡ್ಡ ಮಾದಕ ವ್ಯಸನಿಯಾ? ಆಕೆ ತೆಗೆದುಕೊಂಡಿದ್ದ ಡೇಂಜರಸ್ ಡ್ರಗ್ಸ್ ಇಲ್ಲಿದೆ ನೋಡಿ..

ದಾಳಿ ನಡೆದ ದಿನ ತಾನು ಪಾರ್ಟಿ ಯಲ್ಲಿರಲಿಲ್ಲ ಎಂದು ಫಾರ್ಮ್ ಹೌಸ್‌ ನಿಂದ ಲ ವಿಡಿಯೋ ಹೇಳಿಕೆ ಬಿಡು ಗಡೆಗೊಳಿಸಿ ನಾಟಕವಾ ಡಿದ್ದ ಹೇಮಾ ಅವರಿಗೆ ಸಿಸಿಬಿ ತಟ್ಟಿದೆ. ತನಿಖೆ ಎಲೆಕ್ಟ್ರಾನಿಕ್ ಸಿಟಿ ಸಮೀಪ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ಆಂಧ್ರಪ್ರದೇಶ ರಾಜ್ಯ ವಿಜಯ ವಾಡ ಮೂಲದ ವಾಸು ಎಂಬಾತನ ಹುಟ್ಟುಹಬ್ಬದ ನಿಮಿತ್ತ ಮೇ 19ರಂದು ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿತ್ತು. ಇದೇ ಪ್ರಕರಣದಲ್ಲಿ ವಾಸು ಹಾಗೂ ನಾಲ್ವರು ಸ್ನೇಹಿತರನ್ನು ಸಿಸಿಬಿ ಬಂಧಿಸಿತ್ತು.

Latest Videos
Follow Us:
Download App:
  • android
  • ios