ಕನ್ಯತ್ವ ಪರೀಕ್ಷೆ ನವವಧುಗಳನ್ನು ತವರಿಗೆ ಕಳಿಸಿದ ಗಂಡನ ಮನೆ!

ಹೊಸದಾಗಿ ಮದುವೆಯಾದ ಯುವತಿಯರಿಗೆ ಕನ್ಯತ್ವ  ಪರೀಕ್ಷೆ/ ಒಬ್ಬಳು ವಿಫಲವಾದಳೆಂದು ತವರಿಗೆ ಕಳಿಸಿದ ಗಂಡನ ಮನೆಯವರು/ ನಿಮಗೂ ಮದುವೆಗೆ ಸಂಬಂಧ ಇಲ್ಲ ಎಂದ ಸರ್ ಪಂಚರು

caste-panchayat-test-of-virginity-for-brides-case-register-against-groom mah

ಕೊಲ್ಹಾಪುರ (ಏ. 09) ಸಹೋದರಿಯರನ್ನು ಮದುವೆ ಮಾಡಿದ ಕುಟುಂಬಕ್ಕೆ ಮೂರೇ ದಿನದಲ್ಲಿ ದೊಡ್ಡದೊಂದು ಆಘಾತ ಎದುರಾಗುತ್ತದೆ ಎಂದು ಗೊತ್ತಿರಲಿಲ್ಲ.  ಇಬ್ಬರು ಸಹೋದರಿಯರ ಪೈಕಿ ಒಬ್ಬರ ಕನ್ಯತ್ವ ಪರೀಕ್ಷೆ ವಿಫಲವಾಯಿತೆಂದು ಇಬ್ಬರನ್ನೂ  ವಾಪಸ್ ತವರು ಮನೆಗೆ ಕಳಿಸಲಾಗಿದೆ.

2020 ರ ನವೆಂಬರ್ 27 ರಂದು ಮಹಾರಾಷ್ಟ್ರದ ಕೊಲ್ಹಾಪುರದಿಂದ ಇಬ್ಬರು ಸಹೋದರಿಯರನ್ನು  ಸಾಸರ್‌ವಾಡಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ಮೂರನೇ ದಿನದಂದು ಅತ್ತೆ ಮನೆಯವರು ಇಬ್ಬರು ಸೊಸೆಯಂದಿರನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ.

ಇವರಲ್ಲಿ ಒಬ್ಬ ಸೊಸೆಯ ಕನ್ಯತ್ವ ಪರೀಕ್ಷೆ ವಿಫಲವಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಅತ್ತೆ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.  ಕೆಲ ದಿನಗಳ ನಂತರ ಪತಿರಾಯರು ಹಾಗೂ ಅತ್ತೆ ಸೇರಿಕೊಂಡು ಇಬ್ಬರನ್ನೂ ಕೊಲ್ಹಾಪುರದಲ್ಲಿರುವ ಅವರ ತವರು ಮನೆಗೆ ಕಳುಹಿಸಿದ್ದಾರೆ.

ಕನ್ಯತ್ವ ಪರೀಕ್ಷೆ ಎಂಬ ವಿಕೃತಿ

ಇನ್ನೊಂದು ಕಡೆ ಇದೇ ಪ್ರಕರಣವನ್ನು ಸರ್ ಪಂಚ್ ರು ವಿಚಾರಣೆ ಮಾಡಿದ್ದಾರೆ.  ಈ ಇಬ್ಬರು ಸಹೋದರಿಯರಿಗೂ ಅವರ ಪತಿಯರಿಗೂ ಇನ್ಮುಂದೆ ಯಾವುದೇ ಸಂಬಂಧವಿಲ್ಲ ಎಂಬ ಆಘಾತಕಾರಿ ತೀರ್ಪನ್ನೂ ನೀಡಲಾಗಿದೆ.

 ಇಬ್ಬರು ಸಹೋದರರಲ್ಲಿ ಓರ್ವ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮನೆಗೆ ಮರಳಿ ಬಂದರೆ ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದೀಗ ಸಂತ್ರಸ್ತೆಯರು ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮೂಢನಂಬಿಕೆ ನಿರ್ಮೂಲನಾ ಸಮಿತಿಗೆ ಪತ್ರ ಬರೆದಿದ್ದಾರೆ.  

ಇಬ್ಬರು ಯುವತಿಯರನ್ನು ಇಬ್ಬರನ್ನು ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರ ಕನ್ಯತ್ವವನ್ನು ಪರೀಕ್ಷಿಸಿ ಕಿರುಕುಳ ನೀಡಲಾಗಿದೆ. ವಿಫಲವಾದ ಕಾರಣ  'ನೀವು ಆತ್ಮಹತ್ಯೆ ಮಾಡಿಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು  ಬೆದರಿಕೆ ಹಾಕಿದ್ದಾರೆ.  ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಇಂಥ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದ ಘಟನೆಗಳು ವರದಿಯಾಗಿದ್ದವು. 

 

Latest Videos
Follow Us:
Download App:
  • android
  • ios