ಹುಬ್ಬಳ್ಳಿ ನಗರದಲ್ಲಿ ನಡೆದ ಘಟನೆ| ಪಿ.ಕೆ. ರವಿಚಂದ್ರನ್ ಮೋಸ ಹೋದ ವ್ಯಕ್ತಿ| ವಾಟ್ಸಾಪ್ ಮೂಲಕ ಸಂಪರ್ಕಿಸಿದ ಖದೀಮ| ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು| ತನಿಖೆ ಕೈಗೊಂಡ ಪೊಲೀಸರು|
ಹುಬ್ಬಳ್ಳಿ(ಮಾ.26): ಸ್ನೇಹಿತನ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವಿದೇಶದಲ್ಲಿ ಇರುವ ತನ್ನ ಸಂಬಂಧಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಬೇಕೆಂದು 4ಲಕ್ಷ ರು. ಪಡೆದು ವಂಚನೆ ಮಾಡಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗೋಕುಲ ರಸ್ತೆ ನಿವಾಸಿ ಪಿ.ಕೆ. ರವಿಚಂದ್ರನ್ ಅವರು ಮೋಸ ಹೋಗಿದ್ದಾರೆ. ವಾಟ್ಸಾಪ್ ಮೂಲಕ ಸಂಪರ್ಕಿಸಿದ ಅಪರಿಚಿತ ತಾನು ನಿಮ್ಮ ಸ್ನೇಹಿತ ಚಂದ್ರಶೇಖರ್ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ.
ರಿಸರ್ವ್ ಬ್ಯಾಂಕಿನ ನೌಕರರೆಂದು ವಂಚನೆ : ಹುಷಾರ್!
ಬಳಿಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇರುವ ಸಂಬಂಧಿಕರಿಗೆ ಅರಾಮಿಲ್ಲ ಎಂದು ಹಂತ ಹಂತವಾಗಿ ಹಣ ಪಡೆದಿದ್ದಾನೆ. ಮೂರ್ನಾಲ್ಕು ದಿನಗಳಲ್ಲಿ ವಾಪಸ್ ನೀಡುವುದಾಗಿ ಹೇಳಿ ಬಳಿಕ ವಂಚಿಸಿದ್ದಾನೆ. ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
