ಬೆಂಗಳೂರು(ಫೆ.19): ಕಾರು ಬಾಡಿಗೆಗೆ ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡುತ್ತಿದ್ದ ಖದೀಮರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್ ಉಲ್ಲಾ, ಅಕ್ಷಯ್ ಬಂಧಿತ ಆರೋಪಿಗಳಾಗಿದ್ದಾರೆ. 

ಬಂಧಿತ ಆರೋಪಿಗಳು ಸಿನಿಮೀಯ ರೀತಿಯಲ್ಲಿ ಕಾರು ಮಾಲೀಕರನ್ನ ಪರಿಚಯ ಮಾಡಿಕೊಳ್ಳುತಿದ್ದರು. ಬಳಿಕ  ಪರಿಚಯಸ್ಥರಿಗೆ ಕಾರು ಬಾಡಿಗೆ ಬೇಕು, ಹೆಚ್ಚು ಹಣ ನೀಡುತ್ತಾರೆ ಅಂತ ಸುಳ್ಳು ಕಥೆ ಹೇಳಿ ಮಧ್ಯವರ್ತಿಯಾಗಿ ಕೆಲಸ ಮಾಡುತಿದ್ದರು. ಈ ಬಗ್ಗೆ ಬಂಧಿತ ಆರೋಪಿ ಅಕ್ಷಯ್‌ನನ್ನ ಪೊಲೀಸರು ವಿಚಾರಣೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.  

ಸಿರಾಜ್ ಆದ ಸಿದ್ದಹನುಮಯ್ಯ: 25 ವರ್ಷದ ನಂತ್ರ ಸಿಕ್ಕ ಅತ್ಯಾಚಾರಿ

ಈ ಖದೀಮರು ನೀಡುತ್ತಿದ್ದ ಕೆಲ ದಾಖಲೆಗಳನ್ನು ಪಡೆದು ಕಾರು ಮಾಲೀಕರು ಬಾಡಿಗೆಗೆ ನೀಡುತ್ತಿದ್ದರು. ಬಾಡಿಗೆ ಪಡೆದ ಕಾರ್‌ಗೆ ತಿಂಗಳಿಗೆ ಇಂತಿಷ್ಟು ಹಣ ಎಂದು ನೀಡುತ್ತಿದ್ದರು. ಹೀಗೆ ಹಲವು ಬಾರಿ ಕಾರ್ ಪಡೆದು ಸರಿಯಾಗಿ ಹಣ ನೀಡಿ ಕಾರು ಮಾಲೀಕನಿಗೆ ಹತ್ತಿರವಾಗುತಿದ್ದರು. ಹತ್ತಿರವಾದ ಬಳಿಕ ಯಾವುದೇ ದಾಖಲೆ ನೀಡದೆ ಕಾರು ಬಾಡಿಗೆಗೆ ಪಡೆಯುತ್ತಿದ್ದರು. ಬಳಿಕ ಈ ಖದೀಮರು ಕಾರು ಕದ್ದು ಪರಾರಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ. 

ಮೊಬೈಲ್ ಕಳೆದಿದ್ದಕ್ಕೆ ಬೈದ ಪೋಷಕರು: ಬಾಲಕ ಆತ್ಮಹತ್ಯೆ

ನಂತರ ಕದ್ದ ಕಾರನ್ನು ಈ ಗ್ಯಾಂಗ್‌ ಬೇರೊಬ್ಬರಿಗೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಜಯ್ ಗೌಡ ಎಂಬುವವರು ದೂರು ದಾಖಲಿಸಿದ್ದರು. 
ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ 10 ಕಾರುಗಳನ್ನು ಇದೇ ಮಾದರಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 8 ವಿವಿಧ ಮಾದರಿಯ ಕಾರುಗಳನ್ನ  ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಪ್ರಮುಖ ಆರೋಪಿ ನಿರಂಜನ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"