ಮದುವೆಯಾದ ವಧು ಆಭರಣ ಮತ್ತು ನಗದಿನೊಂದಿಗೆ ಪರಾರಿ/ ಮದುವೆಯಾಗಲು ಹೆಣ್ಣು ಹುಡುಕಿ ಸೋತಿದ್ದ ವರ/ ಅತ್ತಿಗೆ ಸಲಹೆ ನೀಡಿದಳೆಂದು ಬಡ ಕುಟುಂಬದ ಹೆಣ್ಣನ್ನು ಮದುವೆಯಾದ
ಬರೇಲಿ(ಮಾ. 15) ಇದು ಯಾವ ಸಿನಿಮಾ ಕತೆ ಅಲ್ಲ.. ಮದುವೆಯಾದ ವಧು ತನ್ನ ಗಂಡ ಮತ್ತು ಅತ್ತೆ ಮಾವನಿಗೆ ಸೇರಿದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಉತ್ತರ ಪ್ರದೇಶದ ಶಹಜಹಾನ್ಪುರದಿಂದ ಘಟನೆ ವರದಿಯಾಗಿದೆ. ಮದುವೆಯಾದ 5 ಗಂಟೆಗಳಲ್ಲಿ ನಗದು ಮತ್ತು ಆಭರಣಗಳೊಂದಿಗೆ ಕಣ್ಮರೆಯಾಗಿದ್ದಾಳೆ.
ಮದುವೆಯಾಗಲು ಹೆಣ್ಣು ಸಿಗದೆ ಗಂಡು ಪರದಾಡುತ್ತಿದ್ದ. ಈ ವೇಳೆ ಯುವಕನ ಅತ್ತಿಗೆ ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ಇದ್ದಾಳೆ ಎಂದು ಸಲಹೆ ಕೊಟ್ಟಿದ್ದಾರೆ.
ಫಾರೂಖಾಬಾದ್‌ನ ಬಡ ಕುಟುಂಬದ ಹೆಣ್ಣನ್ನು ಅದೆ ಊರಿನ ದೇವಸ್ಥಾನದಲ್ಲಿ ಮದುವೆಯಾಗುತ್ತಾನೆ.
ತಾಳಿ ಕಟ್ಟುವ ವೇಳೆ ವಧು ನಾಪತ್ತೆ, ಕಂಗಾಲಾದ ಕುಟುಂಬ
ಗಂಡಿನ ಮನೆಗೆ ಪರಿಚಯವಿದ್ದ ಎರಡು ವ್ಯಕ್ತಿಗಳು ಹೆಣ್ಣಿನ ಪರಿಚಯ ಹೇಳಿದ್ದಕ್ಕೆ ಮದುವೆ ನೆರವೇರುತ್ತದೆ. ಮದುವೆಯ ಸಿದ್ಧತೆ ಮಾಡಿಕೊಳ್ಳಲು ವರನ ಕುಟುಂಬದ ಬಳಿ 30,000 ರೂ. ಪಡೆದುಕೊಳ್ಳಲಾಗುತ್ತದೆ.
ಮದುವೆಯಾದ ಮೇಲೆ ವಧುವನ್ನು ಪೊವಾಯನ್ ನಲ್ಲಿರುವ ತನ್ನ ಗಂಡನ ಮನೆಗೆ ಕರೆದೊಯ್ಯಲಾಗುತ್ತದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಸಲಹೆ ನೀಡಿದ್ದ ಇಬ್ಬರು ಮತ್ತು ವಧು ನಾಪತ್ತೆಯಾಗುತ್ತಾರೆ.
ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಈ ಪ್ರಕರಣದ ಹಿನ್ನೆಲೆ ಪರಿಶೀಲನೆ ನಡೆಸಿ ದೂರು ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸುತ್ತಾರೆ.
ನಾವು ದೂರಿನಲ್ಲಿ ಉಲ್ಲೇಖಿಸಿರುವ ಸಂಗತಿಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ. ವಧು ಸೇರಿದಂತೆ ಶಂಕಿತರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ವರ ಮತ್ತು ಅವರ ಅತ್ತಿಗೆಯ ಹೇಳಿಕೆಯನ್ನು ನಾವು ದಾಖಲಿಸಿದ್ದೇವೆ ಪೊವಯನ್ ಪೊಲೀಸ್ ಅಧಿಕಾರಿ ರವಿ ಕುಮಾರ್ ಸಿಂಗ್ ತಿಳಿಸಿದ್ದಾರೆ.
Last Updated Mar 15, 2021, 4:43 PM IST