ಒರಿಸ್ಸಾ(ಫೆ.  19)  ಅಂತೂ ಇಂತೂ ಮದುವೆಗೆ ಯೋಗ ಕೂಡಿ ಬಂದಿತ್ತು. ಆದರೆ ವರನ ಅದೃಷ್ಟ ಸರಿ ಇರಲಿಲ್ಲ.  ಹಸೆಮಣೆ ಏರಬೇಕಿದ್ದ ಹುಡುಗಿ ತನ್ನ ಬಾಯ್ ಫ್ರೆಂಡ್ ಜತೆ ಓಡಿಹೋಗಿದ್ದಳು. ಹೆಣ್ಣಿನ ಮನೆಯವರು ತಮ್ಮ ಮರ್ಯಾದಿ ಹೋಗುತ್ತದೆ ಎಂದು ಅಕ್ಕನ ಬದಲು ತಂಗಿ ಕೊಟ್ಟು ಮದುವೆ ಮಾಡಿದ್ದರು.

ಆದರೆ ಈ ವಿಚಿತ್ರ ಪ್ರಕರಣ ಇಲ್ಲಿಗೆ ಅಂತ್ಯವಾಗಲಿಲ್ಲ. ಒರಿಸ್ಸಾದ  ಕಾಳಹಂಡಿ ಜಿಲ್ಲೆಯ ಮದುವೆ ವರನ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ.  ಮಾಲ್ಪಡ ಗ್ರಾಮದ ಯುವತಿ ಮದುವೆಗೆ ಕೆಲವೇ ಕ್ಷಣಗಳಿದ್ದಾಗ ಬಾಯ್ ಫ್ರೆಂಡ್ ಜತೆ ಓಡಿಹೋಗಿದ್ದಾಳೆ. ಇನ್ನೇನು ಮಾಡುವುದು ಎಂದು ಆಕೆಯ  15  ವರ್ಷದ ತಂಗಿ ಕಿರಿಮಗಳನ್ನು ಕೊಟ್ಟು ಮದುವೆ ಮಾಡಲಾಗಿದೆ.

ಹಾಸನ; ಮ್ಯಾಟ್ರಿಮೋನಿ ಹುಷಾರು..ಮದುವೆಯಾಗುವುದಾಗಿ ಉಂಡು ಹೋದ..ಕೊಂಡು ಹೋದ!

ಮದುವೆ ಮಾಡಿಕೊಂಡ ಸಮಾಧಾನದಿಂದ ಮನೆಗೆ ತೆರಳಿದ ವರನಿಗೆ ಅಸಲಿ ಶಾಕ್ ಈಗ ಎದುರಾಗಿದೆ.  ಮೊದಲ ರಾತ್ರಿಯ ಸಿದ್ಧತೆಯಲ್ಲಿದ್ದಾಗ ಮನೆಗೆ ಅಧಿಕಾರಿಗಳ ದಂಡು  ಬಂದಿದೆ. ಹುಡುಗಿಗೆ ಹದಿನೈದು ವರ್ಷವಾಗಿರುವ ಕಾರಣ ಮದುವೆ ಮಾಡಲು ಸಿದ್ಧವಿಲ್ಲ. ಇದು ಬಾಲ್ಯ ವಿವಾಹ ಎಂದಾಗುತ್ತದೆ ಎಂದಿರುವ ಅಧಿಕಾರಿಗಳು ಮದುವೆ ರದ್ದು ಮಾಡಿ ಬಾಲಕಿಯನ್ನು ವಾಪಸ್ ತವರು ಮನೆಗೆ ಕಳಿಸಿದ್ದಾರೆ.

ಎರಡು ಕುಟುಂಬಕ್ಕೂ ಬಾಲ್ಯವಿವಾಹ ಕಾನೂನು ಬಾಹಿರ ಎಂಬ ಸಂಗತಿ ಗೊತ್ತಿರಲಿಲ್ಲ ಎಂದಿರುವ ಅಧಿಕಾರಿಗಳು ತಿಳಿವಳಿಕೆ ನೀಡಿದ್ದು ಕೌನ್ಸೆಲಿಂಗ್ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.