ಬೆಂಗಳೂರಿನ ಮತ್ತೊಂದು ಹೋಟೆಲ್ ಗೆ ಬಾಂಬ್ ಬೆದರಿಕೆ ಇಮೇಲ್!
ನಗರದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯ ವೆಬ್ ಸೈಟ್ ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಇದೀಗ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‌ಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ನ.11) ನಗರದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯ ವೆಬ್ ಸೈಟ್ ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಇದೀಗ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‌ಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಸಂಜೆ 7 ಗಂಟೆ ಸುಮಾರಿಗೆ ಸಂಪಂಗಿರಾಮ ನಗರದ ಐಬಿಎಸ್ ಹೋಟೆಲ್‌ಗೆ ಬೆದರಿಕೆ ಇಮೇಲ್ ಕಳಿಸಿರುವ ಆಗಂತುಕರು. ಹೋಟೆಲ್‌ನಲ್ಲಿ ಎರಡು ಇಡಿ ಗಳನ್ನು ಇಟ್ಟಿದ್ದೇವೆ. ಅದು ಯಾವುದೇ ಸಮಯದಲ್ಲಾದ್ರೂ ಸ್ಫೋಟಗೊಳ್ಳಬಹುದು ಎಂದು ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ಬರುತ್ತಿದ್ದಂತೆ ಎಚ್ಚೆತ್ತ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್ ಜೊತೆಗೆ ಸಂಪಂಗಿ ರಾಮನಗರ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ನಿವೃತ್ತಿ ಹೊಂದಿದ ಶ್ವಾನ ಪೃಥ್ವಿಗೆ ಗೌರವಯುತ ಬೀಳ್ಕೊಡುಗೆ
ಬೆದರಿಕೆ ಸಂದೇಶದಲ್ಲಿ ಯಾವ ಸ್ಥಳದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸ್ಥಳದ ಮಾಹಿತಿ ಉಲ್ಲೇಖಿಸದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೋಟೆಲ್ ಎಲ್ಲ ಗ್ರಾಹಕರು, ಸಿಬ್ಬಂದಿ ಖಾಲಿ ಮಾಡಿಸಿದ ಹೋಟೆಲ್ ಸಿಬ್ಬಂದಿ. ಕೆಲಕಾಲ ಆತಂಕ ಸೃಷ್ಟಿಸಿತು. ಪರಿಶೀಲನೆ ಬಳಿಕ ಇದೊಂದು ಹುಸಿಬಾಂಬ್ ಕರೆ ಎಂಬುದು ಪೊಲೀಸ್ ಮೂಲಗಳಿಂದ ಮಾಹಿತಿ. ಒಟ್ಟಿನಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು.
ಆಂಟಿ ಮೇಲಿನ ದ್ವೇಷಕ್ಕೆ ಏರ್‌ಪೋರ್ಟ್‌ಗೆ ಹುಸಿಬಾಂಬ್ ಕರೆ ಮಾಡಿದ ವ್ಯಕ್ತಿ
ಪ್ರತಿಷ್ಠಿತ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು:
ನಗರದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯ ವೆಬ್ ಸೈಟ್ ಗೆ ಗುರುವಾರ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದರಿಂದ ಶಾಲೆಯ ಆಡಳಿತ ಮಂಡಳಿ,ವಿದ್ಯಾರ್ಥಿಗಳು ಹಾಗೂ ಪೋಷಕರು ಬೆಚ್ಚಿಬಿದ್ದಿದ್ದರು. ಅಲ್ಲಿಯೂ ಸಹ ಸಂಜೆ ಸಮಯದಲ್ಲೇ ಇ-ಮೇಲ್ ಪರಿಶೀಲನೆ ವೇಳೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ಆಡಳಿತ ಮಂಡಳಿ ಗಮನಕ್ಕೆ ಬಂದಿತ್ತು. ಕೂಡಲೇ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊರಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ಬಳಿಕ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಅಂತಹದ್ದೇ ಘಟನೆ ಇದೀಗ ಹೋಟೆಲ್‌ಗೆ ಬೆದರಿಕೆಯೊಡ್ಡುವ ಮೂಲಕ ಮರುಕಳಿಸಿದೆ.