Asianet Suvarna News Asianet Suvarna News

ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಬರುವಾಗ ಬೈಕ್ ಅಪಘಾತ; ಪೊಲೀಸ್ ಪೇದೆ ಸೇರಿ ಇಬ್ಬರ ಸಾವು!

ಸಂಬಂಧಿಗಳ ಮದುವೆ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಬೈಕ್ ಅಪಘಾತವಾಗಿ ಪೊಲಿಸ್ ಪೇದೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಬಳಿ ನಡೆದಿದೆ.

Bike accident 2  people died including a police constable at tumakuru rav
Author
First Published Nov 30, 2023, 11:53 AM IST

ತುಮಕೂರು (ನ.30): ಸಂಬಂಧಿಗಳ ಮದುವೆ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಬೈಕ್ ಅಪಘಾತವಾಗಿ ಪೊಲಿಸ್ ಪೇದೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಬಳಿ ನಡೆದಿದೆ.

ಮಹೇಶ್,ಚಂದ್ರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಮೃತ ಮಹೇಶ್,ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಮೂವರು ತಡರಾತ್ರಿ ಒಂದೇ ಬೈಕ್‌ನಲ್ಲಿ ಸಂಬಂಧಿಗಳ ಮದುವೆಗೆ ಬಂದಿದ್ದರು.  

ಮದುವೆ ಮುಗಿಸಿ ವಾಪಸ್ ಊರಿನತ್ತ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ವೇಗದಲ್ಲಿದ್ದಾಗಲೇ ರಸ್ತೆ ಮೇಲೆ ಬಿದ್ದು ನಡೆದಿರುವ ಅಪಘಾತ. ಬೈಕ್‌ನಲ್ಲಿದ್ದ ಇನ್ನೊಬ್ಬ ತೀವ್ರ ಗಾಯಗೊಂಡಿದ್ದ ಭರತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ತುಮಕೂರು: ಬೆಂಗಳೂರು ಕಂಬಳ‌ ನೋಡಿ ವಾಪಸ್‌ ಬರೋವಾಗ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು

ಕಾರು ಡಿಕ್ಕಿ;ಬೈಕ್ ಸವಾರ ಸಾವು::

ಚನ್ನಪಟ್ಟಣ: ಕಾರು ಮತ್ತು ಬೈಕ್‌ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನಕೆರೆ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೃತ ದುರ್ದೈವಿ ತಿಟ್ಟಮಾರನಹಳ್ಳಿಯ ಶಿವರಾಮು ಗ್ರಾಪಂ ಸದಸ್ಯೆ ರೇಖಾ ಅವರ ಪತಿ. ನಗರದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ಶಿವರಾಮು ಅವರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಕಲ್ಲೂಡಿ ಬಳಿ ಭೀಕರ ಅಪಘಾತ, 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ತಿಟ್ಟಮಾರನಹಳ್ಳಿಯಿಂದ ನಗರಕ್ಕೆ ಹೋಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ, ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಘಟನೆಯಲ್ಲಿ ತಲೆಗೆ ಗಂಭೀರ ಗಾಯವಾಗಿ ಶಿವರಾಮು ಅವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios