Asianet Suvarna News Asianet Suvarna News

Bengaluru- ನಂದಿ ಬೆಟ್ಟಕ್ಕೆ ಹೋದ ಸ್ನೇಹಿತರು ಜಲಸಮಾಧಿಯಾದರು: ಕೈ-ಕೈ ಹಿಡಿದು ಕೆರೆಯಲ್ಲಿ ಮುಳುಗಿದರು

ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋದ ನಾಲ್ವರು ಸ್ನೇಹಿತರು ಬಿಸಿಲ ಬೇಗೆಯಿಂದ ತಾಳಲಾರದೇ ರಾಮನಾಥಪುದರಲ್ಲಿನ ಕೆರೆಗೆ ಈಜಲು ಹೋಗಿ ಸಾವನ್ನಪ್ಪಿದ್ದಾರೆ.

Bengaluru youths went on a trip to Nandi Hill died after swimming in the lake sat
Author
First Published May 28, 2023, 10:32 PM IST | Last Updated May 28, 2023, 10:37 PM IST

ಬೆಂಗಳೂರು (ಮೇ 28): ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋದ ನಾಲ್ವರು ಸ್ನೇಹಿತರು ಬಿಸಿಲ ಬೇಗೆಯಿಂದ ತಾಳಲಾರದೇ ರಾಮನಾಥಪುದರಲ್ಲಿನ ಕೆರೆಗೆ ಈಜಲು ಹೋಗಿದ್ದಾರೆ. ಆದರೆ, ಎಷ್ಟು ಆಳವಿದೆ ಎಂಬ ಪರಿಜ್ಞಾನವಿಲ್ಲದೇ ನೀರಿಗಿಳಿದು ಮುಳುಗುತ್ತಿದ್ದ ಒಬ್ಬ ಯುವಕನ್ನು ರಕ್ಷಣೆ ಮಾಡಲು ಹೋಗಿ ಉಳಿದ ಮೂವರು ಕೂಡ ಸಾವನ್ನಪ್ಪಿದ್ದಾರೆ. ಒಟ್ಟಾರೆ ಮರತ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಮೋಜು ಮಸ್ತಿ ಮಾಡಲು ಸೂಕ್ತ ಸ್ಥಳವಿಲ್ಲವೆಂದು ಬೆಂಗಳೂರು ಗ್ರಾಮೀಣ ಪ್ರದೇಶಗಳಿಗೆ ಹೋಗಿ, ಕೆರೆ-ಕಟ್ಟೆ, ಬೆಟ್ಟ - ಗುಡ್ಡಗಳ ಕರೆಗೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇಲ್ಲಿ ನಾಲ್ವರು ಸ್ನೇಹಿತರು ಮೋಜಿ ಮಸ್ತಿ ಮಾಡಲೆಂದು ಕೆರೆಯ ಬಳಿ ಹೋದವರು ಈಜಾಡುತ್ತಲೇ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿದ್ದಾರೆ. ಇನ್ನು ನೀರಿನಲ್ಲಿ ಮುಳುಗುವ ವೇಳೆ ರಕ್ಷಣೆಗೆಂದು ಹೋಗುವವರು ಪುನಃ ತಾವು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯವೇ ಎನ್ನುವುದನ್ನು ನೋಡದೇ ರಕ್ಷಣೆಗೆ ಹೋಗುತ್ತಾರೆ. 

Bengaluru- ಕಣ್ಣಮುಂದೆಯೇ ಕೆರೆಯಲ್ಲಿ ಮುಳುಗಿದ ಸ್ನೇಹಿತ: ಅಸಹಾಯಕತೆ ತೋರಿದ ಗೆಳೆಯರು

ಆಳ ಗೊತ್ತಿಲ್ಲದ ಕೆರೆಯಲ್ಲಿ ಈಜಲು ತೆರಳಿ ಸಾವು: ಭಾನುವಾರ ರಜಾದಿನವಾದ್ದರಿಂದ ಬೆಳಗ್ಗೆ ನಂದಿಬೆಟ್ಟಕ್ಕೆ ಬಂದ ನಾಲ್ವರು ಸ್ನೇಹಿತರು, ಮಧ್ಯಾಹ್ನ ವಾಪಸ್‌ ಬರುವಾಗ ಎಹಚ್ಚಿನ ಬಿಸಿಲು ಇದ್ದುದರಿಂದ 3 ಗಂಟೆ ವೇಳೆಗೆ ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರನ್ನ ರಕ್ಷಿಸಲು ಹೋಗಿ ನಾಲ್ವರು ನೀರುಪಾಲು ಆಗಿದ್ದಾರೆ. ಕೆರೆ ಮೇಲೆ ಬಟ್ಟೆಗಳನ್ನ ಕಂಡು ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ಮಾಡಲಾಗಿದೆ.

ಇಬ್ಬರ ಮೃತದೇಹ ಪತ್ತೆ: ಪೊಲೀಸರ ನೇತೃತ್ವದಲ್ಲಿ ಆಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಮೃತದೇಹಗಳಿಗಾಗಿ ಶೋಧ ಕಾರ್ಯ. ಶೋಧ ಕಾರ್ಯದ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದ್ದು, ದೇವನಹಳ್ಳಿ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ಸಾಗಿದೆ.

Bengaluru youths went on a trip to Nandi Hill died after swimming in the lake sat

ಕೋಲಾರದಲ್ಲಿ ಈಜಲು ಹೋಗಿ ವ್ಯಕ್ತಿ ಸಾವು:  ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಖಾಸಗಿ ಸುದ್ದಿ ವಾಹಿನಿ ವಾಹನ ಚಾಲಕ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಕೋಲಾರ ತಾಲ್ಲೂಕಿನ ಮಲ್ಲಂಡಹಳ್ಳಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳ ಮೂಲದ ಖಾಸಗಿ ವಾಹಿನಿ ಚಾಲಕ ಶಿವಕುಮಾರ್ (35) ಸಾವನ್ನಪ್ಪಿರುವ ದುರ್ದೈವಿ ಆಗಿದ್ದಾನೆ. ಕಳೆದ ರಾತ್ರಿ ಮೂವರು ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮಾಡಿದ್ದರು. ಬೆಳಗಿನ ಜಾವ ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಶಿವಕುಮಾರ್ ಪೋಷಕರಿಂದ‌ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಎಣ್ಣೆ ಪಾರ್ಟಿಗೆಂದು ಕರೆದುಕೊಂಡು ಹೋಗಿದ್ದ ಜೊತೆಯಲ್ಲಿದ್ದವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ. 

ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್‌ ಸ್ಪೋಟಗೊಂಡು ಲಾರಿಗೆ ಗುದ್ದಿದ ಇಂಡಿಕಾ ಕಾರು, 6 ಮಂದಿ ಸಾವು

ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವು:  ಹಾಸನ ಜಿಲ್ಲೆಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಖುಷಿ (12) ಸಾವನ್ನಪ್ಪಿದ ಬಾಲಕಿ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಿಕ್ಕೋಡು ಬಳಿ ಘಟನೆ ನಡೆದಿದೆ. ಧನರಾಜ್-ವೀಣಾ ದಂಪತಿ ಪುತ್ರಿ ಖುಷಿ. ಪ್ರವಾಸ ವೇಳೆ ಗ್ರೀನ್ ಪಾಸ್ಟೋ ರೆಸಾರ್ಟ್‌‌ಗೆ ಕುಟುಂಬ ಸದಸ್ಯರು ಆಗಮಿಸಿದ್ದರು. ಊಟ ಮಾಡುವ ವೇಳೆ ಪೋಷಕರಿಗೆ ತಿಳಿಯದಂತೆ ಬಾಲಕಿ ಖುಷಿ ಈಜಲು ತೆರಳಿದ್ದಳು. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಮಗಳನ್ನು ಹುಡುಕಿದಾಗ ಈಜುಕೊಳದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios