ಬೆಂಗಳೂರಿನ ಕೋರಮಂಗಲದಲ್ಲಿ ಖಾಸಗಿ ಹೋಟೆಲ್ ಟೆರೇಸ್ ಮೇಲೆ ಮಹಿಳೆಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪರಿಚಿತ ವ್ಯಕ್ತಿಯೊಂದಿಗೆ ಹೋದಾಗ ಈ ಘಟನೆ ನಡೆದಿದೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು (ಫೆ.21): ಸಿಲಿಕಾನ್ ಸಿಟಿ ಬೆಂಗಳೂರಿ ಕೋರಮಂಗಲದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಮಾಡಿರುವುದು ವರದಿಯಾಗಿದೆ. ಮಹಿಳೆಗೆ ಪರಿಚಿತವಿರುವ ವ್ಯಕ್ತಿಯೊಂದಿಗೆ ಖಾಸಗಿ ಹೋಟೆಲ್‌ನ ಟೆರೇಸ್ ಮೇಲೆ ಹೋದಾಗ ಮೂವರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಬಸ್ ತೋರಿಸುವುದಾಗಿ ಹೇಳಿ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ಮಾಸುವ ಮುನ್ನವೇ ಇದೀಗ ಕೋರಮಂಗಲದಲ್ಲಿ ಪರಿಚಿತ ಮಹಿಳೆಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಈ ಘಟನೆ ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್ ಬಳಿ ನಿನ್ನೆ ಮಧ್ಯರಾತ್ರಿ 1.30ರ ವೇಳೆಗೆ ನಡೆದಿದೆ. ಮೂವರು ಸೇರಿಕೊಂಡು ಮಹಿಳೆಯನ್ನು ಹಿರಿದು ಮುಕ್ಕಿದ್ದಾರೆ ಎಂದು ತಿಳಿದುಬಂದಿದೆ.

ಕೋರಮಂಗಲದ ಖಾಸಗಿ ಹೊಟೆಲ್‌ನ ಟೆರೆಸ್‌ನಲ್ಲಿ ಕೃತ್ಯ ಎಸಗಿದ್ದಾರೆ. ಪರಿಚಯಸ್ಥ ಮಹಿಳೆಯನ್ನು ಒಬ್ಬ ಟೆರೇಸ್ ಮೇಲೆ ಕರೆದಿಕೊಂಡು ಹೋಗಿದ್ದಾರೆ. ಈ ವೇಳೆ ಇನ್ನಿಬ್ಬರು ಅಲ್ಲೇ ಕಾದು ಕುಳಿತು ಆತನೊಂದಿಗೆ ಸೇರಿಕೊಂಡು ಮೂವರು ಸೇರಿ ಸಾಮೂಹಿಕ ಆತ್ಯಾಚಾರ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗ್ಗೆ 5 ಗಂಟೆಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ, ಮಹಿಳೆಯ ದೂರನ್ನು ಆಧರಿಸಿ ಕೋರಮಂಗಲ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲು ಆಗಿದೆ. ಈ ಪ್ರಕರಣದ ಕುರಿತಂತೆ ಕೋರಮಂಗಲ ಪೊಲೀಸರು ಸದ್ಯ ಮೂವರನ್ನು ಅರೆಸ್ಟ್ ಮಾಡಿದ್ದಾರೆ.