ಬೆಂಗಳೂರು(ನ. 16)  ನ್ಯಾಯಾಧೀಶರ ಮನೆಯಲ್ಲಿ ಮದುವೆಯಿದೆ ಎಂದು ಸೀರೆ ಖರೀದಿಸಿ ಹಣ ನೀಡದೆ ಎಸ್ಕೇಪ್ ಆದ ಚಾಲಾಕಿ ಚೋರಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ನ್ಯಾಯಾದೀಶರ ಮನೆಯಲ್ಲಿ ಮದುವೆಯಿದೆ ಎಂದು  ಪಾಟೂರು ಪಟ್ಟು ಸೀರೆ ಬೇಕೆಂದು ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದ ಶಶಿಕಲಾ ಸೀರೆ ತರಿಸಿಕೊಂಡಿದ್ದರು. ಪೆಂಡಮ್ ಅನ್ನೋರಿಗೆ ಕರೆ ಮಾಡಿ ಸೀರಿ 3 ಲಕ್ಷ ಬೆಲೆ ಬಾಳುವ 120 ಸೀರೆ ಖರೀದಿಸಿ ಹಣ ನೀಡದೆ ಎಸ್ಕೇಪ್ ಆಗಿದ್ದಳು.

ಮೇಕಪ್ ರಾಣಿ ಪೂಜಾ ಆಂಟಿ.. ಮಂಡ್ಯದಲ್ಲಿ ಮಾಡಿದ್ದ ಚಮತ್ಕಾರ

ಸಂಪಿಗೆಹಳ್ಳಿಯ ಯುನಿಷೇರ್ ಪನಮೆರಾ ಅಪಾರ್ಟ್ ಮೆಂಟ್ ಗೆ ಸೀರೆ ತರೆಸಿಕೊಂಡಿದ್ದಳು. ಸೀರೆಯನ್ನ ನ್ಯಾಯಾಧೀಶರಿಗೆ ತೋರಿಸಿ ಬಳಿಕ ಹಣ ನೀಡುವುದಾಗಿ ಹೇಳಿ ಎಸ್ಕೇಪ್ ಆಗಿದ್ದಳು. ಸದ್ಯ ಆರೋಪಿತೆಯನ್ನ ಬಂಧಿಸಿ 120 ಸೀರೆ ಜಪ್ತಿ  ಮಾಡಲಾಗಿದೆ.