ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿ ಯುವತಿಯೊಬ್ಬಳಿಗೆ ಸ್ನೇಹಿತ ಮತ್ತು ಆತನ ತಂದೆಯಿಂದ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಬ್ಲ್ಯಾಕ್‌ಮೇಲ್, ವೀಡಿಯೊ ಚಿತ್ರೀಕರಣ ಮತ್ತು ಬೆದರಿಕೆಗಳನ್ನು ಒಳಗೊಂಡ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು(ಆ.30): ಯುವತಿಯೊಬ್ಬಳಿಗೆ ತನ್ನ ಸ್ನೇಹಿತನಿಂದಲೇ ಲೈಂ೧ಗಿಕ ದೌರ್ಜನ್ಯ ಮತ್ತು ಕಿರುಕುಳವೆಸಗಿದ ಘಟನೆ ಸುಬ್ರಹ್ಮಣ್ಯನಗರದಲ್ಲಿ ನಡೆದಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ ಈ ಪ್ರಕರಣದಲ್ಲೇ ಬುದ್ಧಿ ಹೇಳಬೇಕಾದ ತಂದೆಯೇ ಮಗನೊಂದಿಗೆ ಸೇರಿ ಯುವತಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಯುವತಿಗೆ ಕಿರುಕುಳ ಲೈಂ೧ಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ನಿರಂಜನ್ ಮತ್ತು ಅವನ ತಂದೆ ರಾಜಶೇಖರ್ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಕೊಟ್ಟ ದೂರಿನಲ್ಲಿ ಏನಿದೆ?

2020ರಲ್ಲಿ ಯುವತಿಗೆ ಪರಿಚಯವಾದ ಬಂಧಿತ ಆರೋಪಿ ನಿರಂಜನ್, ಬಳಿಕ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿರಂಜನ್ ಯುವತಿಯನ್ನು ತಾನು ಹೋಗುವೆಡೆಗೆಲ್ಲ ಕರೆದೊಯ್ದು, ಆಕೆಯ ವಾಹನಕ್ಕೆ ಜಿಪಿಎಸ್ ಅಳವಡಿಸಿ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಷಯ ಯುವತಿಯ ಕುಟುಂಬಕ್ಕೆ ಗೊತ್ತಾಗಿ, ನಿರಂಜನ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಆರೋಪಿ ಕ್ಷಮಾಪಣೆ ಪತ್ರ ಬರೆದುಕೊಟ್ಟು, ಮುಂದೆ ಇಂತಹ ಕೃತ್ಯವನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ. ಆದರೆ, ಆರೋಪಿಯು ತನ್ನ ಕೃತ್ಯವನ್ನು ಮುಂದುವರೆಸಿದ್ದಾನೆ.

ಕಾಲೇಜ್ ಬಳಿಯೇ ಟಾರ್ಚರ್, ಹೋಟೆಲ್‌ಗೆ ಕರೆದೊಯ್ದು ದೌರ್ಜನ್ಯ!

ನಿರಂಜನ್ ಯುವತಿಯ ಕಾಲೇಜ್ ಬಳಿಯೇ ಆಕೆಯನ್ನು ಕಾಡುತ್ತಿದ್ದ. ಮಾತನಾಡುವ ನೆಪದಲ್ಲಿ ಆಕೆಯನ್ನು ಒಪ್ಪಿಸಿ, ಶಾಂಗ್ರೀಲಾ ಹೋಟೆಲ್‌ಗೆ ಕರೆದೊಯ್ದು ಲೈ೧ಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ವೀಡಿಯೊ ಚಿತ್ರೀಕರಿಸಿದ ಆರೋಪಿಯು, ಆ ವೀಡಿಯೊವನ್ನು ಬಳಸಿಕೊಂಡು ಯುವತಿಯನ್ನು ಬೆದರಿಸಿದ್ದಾನೆ.

ಆರೋಪಿಯ ತಂದೆಯಿಂದಲೂ ಕಿರುಕುಳ

ಆರೋಪಿಯ ತಂದೆ ರಾಜಶೇಖರ್ ಕೂಡ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ನಿನ್ನ ಫೋಟೋ, ವೀಡಿಯೊಗಳನ್ನು ನೋಡಿದ್ದೇನೆ, ನನ್ನ ಜೊತೆ ಮಲಗಬೇಕು ಎಂದು ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಯುವತಿಯು, 'ನಾನು ನಿಮ್ಮ ಮಗಳ ಸಮಾನ, ದಯವಿಟ್ಟು ವೀಡಿಯೊ ಡಿಲೀಟ್ ಮಾಡಿ' ಎಂದು ಮನವಿ ಮಾಡಿದ್ದಾಳೆ. ಆದರೆ, ರಾಜಶೇಖರ್ ಅಷ್ಟಕ್ಕೂ ಸುಮ್ಮನಾಗದೆ ನಾನು ಕಳುಹಿಸುವ ವ್ಯಕ್ತಿಗಳ ಜೊತೆ ನೀನು ಮಲಗಬೇಕು, ಇಲ್ಲವಾದರೆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನಿರಂಜನ್, ರಾಜಶೇಖರ್ ವಿರುದ್ಧ ಪ್ರಕರಣ ದಾಖಲು:

ಈ ಎಲ್ಲಾ ಆರೋಪಗಳ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ನಿರಂಜನ್ ಮತ್ತು ರಾಜಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆಯು ಯುವತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕಾನೂನಿನ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಯುವತಿಯ ಕುಟುಂಬ ಒತ್ತಾಯಿಸಿದೆ.