ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿ ಜೀವನದಲ್ಲಿ ಕಷ್ಟಸುಖದಲ್ಲಿ ಜೊತೆಯಾಗಿರುತ್ತೇನೆ ಎಂದು ಮದುವೆ ಮಾಡಿಕೊಂಡಿದ್ದ ಪಾಪಿ ಪತಿ, ತನಗೆ ಕುಡಿಯಲು ಹಣ ಕೊಡಲಿಲ್ಲವೆಂದು ತನ್ನ ಪತ್ನಿಗೆ ಚಾಕುವನ್ನು ಇರಿದಿದ್ದಾನೆ. 

ಬೆಂಗಳೂರು (ಜ.30): ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿ ಜೀವನದಲ್ಲಿ ಕಷ್ಟಸುಖದಲ್ಲಿ ಜೊತೆಯಾಗಿರುತ್ತೇನೆ ಎಂದು ಮದುವೆ ಮಾಡಿಕೊಂಡಿದ್ದ ಪಾಪಿ ಪತಿ, ತನಗೆ ಕುಡಿಯಲು ಹಣ ಕೊಡಲಿಲ್ಲವೆಂದು ತನ್ನ ಪತ್ನಿಗೆ ಚಾಕುವನ್ನು ಇರಿದಿದ್ದಾನೆ. 

ಕುಡಿತ ಚಟವೇ ಅಂತಹದು. ಹೀಗಾಗಿ, ಎಲ್ಲ ಮಹಿಳೆಯರು ಕುಡುಕ ಗಂಡ ಸಿಗಬಾರದು ಎಂದು ದೇವರಲ್ಲಿ ಅದೆಷ್ಟು ಹರಕೆ ಹೊತ್ತು ಬೇಡಿಕೊಂಡಿರುತ್ತಾರೆಯೋ ಅವರಿಗೇ ಗೊತ್ತು. ಇನ್ನು ಮದ್ಯಪಾನದ ಚಟಕ್ಕೆ ಒಳಗಾಗಿ ಮನೆ, ಮಠ, ಆಸ್ತಿಯನ್ನೆಲ್ಲ ಕಳೆದುಕೊಮಡವರೂ ಇದ್ದಾರೆ. ಆದರೆ, ಬೆಂಗಳೂರಿನ ಜಕ್ಕೂರು ಸಮೀಪದ ಮುನೇಶ್ವರ ಬೀದಿಯಲ್ಲಿ ಕುಡಿತಕ್ಕೆ ಹಣವನ್ನು ಕೊಡಲಿಲ್ಲವೆಂದು ತನ್ನ ಪತ್ನಿಯನ್ನು ಅಮಾನುಷವಾಗಿ ಚಾಕುವಿನಿಂದ ಚುಚ್ಚಿದ್ದಾನೆ. ಇನ್ನು ವಿವಿಧ ಕಚೇರಿಗಳು ಹಾಗೂ ಮನೆಗಳಲ್ಲಿ ಆಯಾ ಕೆಲಸ ಮಾಡಿಕೊಂಡು, ಕುಡುಕ ಪತಿಯೊಂದಿಗೆ ಜೀವನ ಸಾಗಿಸುತ್ತಿದ್ದ ಗೃಹಿಣಿ ಮೇಲೆ ಹಲ್ಲೆಯಾಗಿದೆ. 

ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಯ ಮುಖಕ್ಕೆ ಚಾಕುವಿನಿಂದ ಇರಿದ ಪಾಪಿ

ಗುಲ್ಬರ್ಗ ಮೂಲದ ದಂಪತಿ: ಜಯಶ್ರೀ (33) ಎಂಬಾಕೆಗೆ ಚಾಕು ಇರಿತಕ್ಕೊಳಗಾದ ದುರ್ದೈವಿ ಆಗಿದ್ದಾಳೆ. ಅವಳ ಪತಿ ನಾಗರಾಜ (45) ಎಂಬಾತನಿಂದ ಕೃತ್ಯ ನಡೆದಿದೆ. ಇವರಿಬ್ಬರಿಗೆ ಕಳೆದ 15 ವರ್ಷದ ಹಿಂದೆ ವಿವಾಹವಾಗಿದ್ದು, ದುಡಿಮೆಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈ ದಂಪತಿಗೆ ಮುದ್ದಾಗಿರುವ ಇಬ್ಬರು ಮಕ್ಕಳಿದ್ದಾರೆ. ಆದರೆ, ದುಡಿದು ಸಾಕುತ್ತೇನೆ ಎಂದು ಬೆಂಗಳೂರಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದಿದ್ದ ನಾಗರಾಜ್‌ ತಾನು ದುಡಿಯದೇ ಕುಡಿತದ ದಾಸನಾಗಿ ಅಮಲೇರಿಸಿಕೊಂಡು ಮಲಗಲು ಆರಂಭಿಸಿದ್ದಾನೆ. ಇನ್ನು ಮಕ್ಕಳನ್ನು ಸಾಕುವ ಹೊಣೆ ಹೊತ್ತ ಜಯಶ್ರೀ ಮನೆಗಳಲ್ಲಿ ಕಸ, ಪಾತ್ರೆ, ಬಟ್ಟೆಯನ್ನು ತೊಳೆದುಕೊಂಡು ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಇದರಿಂದ ಬರುವ ಅಲ್ಪಸ್ವಲ್ಪ ಹಣದಲ್ಲಿ ಕುಟುಂಬ ಸಾಗಿಸುತ್ತಿದ್ದಳು. ಈಗ ಗಂಡನ ಕ್ರೌರ್ಯಕ್ಕೆ ಒಳಗಾಗಿದ್ದಾಳೆ. 

ಚನ್ನಪಟ್ಟಣ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಓರ್ವ ಬಂಧನ, ನಾಲ್ವರು ಪರಾರಿ

ಜನವರಿ 28 ತಡರಾತ್ರಿ ನಡೆದಿರುವ ಘಟನೆ: ನಾಗರಾಜ್‌ ಕುಡಿಯುವುದಕ್ಕಾಗಿ ತನ್ನ ಪತ್ನಿ ಜಯಶ್ರೀ ಬಳಿ ಪದೇ ಪದೇ ಹಣ ನೀಡುವಂತೆ ಪೀಡಿಸುತ್ತಿದ್ದನು. ಜ.28 ರಂದು ಕೂಡ ಇದೇ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಆದರೆ, ನಂತರ ನೆರೆಹೊರೆ ಮನೆಯವರು ಗಾಯಾಳು ಜಯಶ್ರೀಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲು ಆಗಿದೆ. ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ನಾಗರಾಜ್ ಬಂಧಿಸಿದ್ದಾರೆ.