ಸುದ್ದಿ ಪ್ರಸಾರಕ್ಕೆ ನಿರ್ಬಂಧ ಕೋರಿ ಕೋರ್ಟ್ ಮೊರೆ ಹೋಗಿದ್ದ ಸಚಿವರು/ ಅರ್ಜಿ ವಿಚಾರಣೆಯನ್ನು ಮೇ. 29 ಕ್ಕೆ ಮುಂದೂಡಿದ ಕೋರ್ಟ್/ ಆರು ಸಚಿವರು ತಮ್ಮ ವಿರುದ್ಧ ಷಡ್ಯಂತ್ರ ನಡೆದಿರುವ ಗುಮಾನಿ ಇದೆ ಎಂದಿದ್ದರು
ಬೆಂಗಳೂರು (ಮಾ 31) ತಮ್ಮ ವಿರುದ್ಧ ಕೆಲ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಕೋರಿ ಆರು ಸಚಿವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮೇ. 29 ಕ್ಕೆ ಮುಂದೂಡಲಾಗಿದೆ.
ಮೆಯೋ ಹಾಲ್ ಕೋರ್ಟ್ ಈ ಆದೇಶ ನೀಡಿದೆ. ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಸಚಿವರಾದ ಶಿವರಾಮ್ ಹೆಬ್ಬಾರ್, ಬಿಸಿ ಪಾಟೀಲ್, ಎಸ್‌ಟಿ ಸೋಮಶೇಖರ್, ಕೆ. ಸುಧಾಕರ್, ನಾರಾಯಣ ಗೌಡ, ಬೈರತಿ ಬಸವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು.
ನಮ್ಮ ವಿರುದ್ಧ ರಾಜಕಾರಣದ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದ್ದು ವಿರುದ್ಧದ ಸುದ್ದಿ ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಷಡ್ಯಂತ್ರ ರೂಪಿಸಿರುವ ಸಾಧ್ಯತೆ ಇದೆ ಎಂದಿದ್ದರು.
ನಮ್ಮ ಜನಪ್ರಿಯತೆ ಸಹಿಸದೆ ತೇಜೋವಧೆ ಮಾಡಿಸುವ ಹುನ್ನಾರ ಇದೆ. ನ್ಯಾಯಾಲಯದ ಮೇಲೆ ವಿಶ್ವಾಸ ಇದ್ದು ಮೊರೆ ಹೋಗಿದ್ದೇವೆ ಎಂದಿದ್ದರು. ವಿಧಾನಸಭೆಯಲ್ಲಿಯೂ ಈ ವಿಚಾರ ಚರ್ಚೆ ಆಗಿತ್ತು.
