Asianet Suvarna News Asianet Suvarna News

ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್, 5 ಗಂಟೆಗೆ ವಾಕಿಂಗ್ ಹೊರಟಾಕೆಗೆ ಮುತ್ತಿಟ್ಟು ಕಿರುಕುಳ!

ಬೆಂಗಳೂರಿನಲ್ಲಿ  ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದ ಕೋಣನಕುಂಟೆ ವ್ಯಾಪ್ತಿಯ ಕೃಷ್ಣ ನಗರದಲ್ಲಿ ಬೆಳಗಿನ ವಾಕಿಂಗ್‌ಗೆ ಹೊರಟಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ದುಷ್ಕರ್ಮಿಗಳು ಕಿರುಕುಳ ನೀಡಿದ್ದಾನೆ.

Bengaluru man gropes molests woman on morning walk flees scene Caught on camera gow
Author
First Published Aug 5, 2024, 12:37 PM IST | Last Updated Aug 5, 2024, 1:03 PM IST

ಬೆಂಗಳೂರು (ಆ.5): ಬೆಂಗಳೂರಿನಲ್ಲಿ  ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದ ಕೋಣನಕುಂಟೆ ವ್ಯಾಪ್ತಿಯ ಕೃಷ್ಣ ನಗರದಲ್ಲಿ ಬೆಳಗಿನ ವಾಕಿಂಗ್‌ಗೆ ಹೊರಟಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ದುಷ್ಕರ್ಮಿಗಳು ಕಿರುಕುಳ ನೀಡಿದ್ದಾನೆ. ಆಗಸ್ಟ್ 2 ರಂದು ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಸಂತ್ರಸ್ತೆ ಮನೆಯ ಹೊರಗೆ ನಿಂತಾಗ ಹಿಂದಿನಿಂದ ಬಂದ ಕಾಮುಕ ಮಹಿಳೆಯನ್ನು ತಬ್ಬಿಕೊಂಡು ಕಿರುಕುಳ ನೀಡಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ಮುಂದೆ ಒಡಿಕೊಂಡು ಬರುವಾಗ ಆತನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಮಹಿಳೆ ಬೊಬ್ಬೆ ಹೊಡೆಯಲು ಆರಂಭಿಸಿದಾಗ ಮಹಿಳೆಯ ಬಾಯಿಯನ್ನು ತನ್ನ  ಕೈನಿಂದ ಮುಚ್ಚಿದ್ದಾನೆ. ನಂತರ ಬಿಳಿ ಅಂಗಿ ಮತ್ತು ಪ್ಯಾಂಟ್ ಧರಿಸಿದ್ದ  ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ.

ಮಾತ್ರೆ ಸೇವಿಸಿ ಬ್ರಿಟನ್‌ ವ್ಯಕ್ತಿ ಬೆಂಗಳೂರಿನಲ್ಲಿ ಸಾವಿಗೆ ಶರಣು!

ಪೊಲೀಸರ ಮಾಹಿತಿ ಪ್ರಕಾರ ಸಂತ್ರಸ್ತೆ, ಮೂಲತಃ ರಾಜಸ್ಥಾನದವಳು, ಪ್ರತೀ ದಿನದಂತೆ ಅಂದು ಕೂಡ ವಾಕಿಂಗ್ ಹೋಗಲು ತನ್ನ ಸ್ನೇಹಿತೆಗಾಗಿ ಕಾಯುತ್ತಿದ್ದಳು. ಈ ವೇಳೆ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಮಹಿಳೆಯ ಪತಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕದ್ದ ಬೈಕ್‌ ತೆಗೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದರೂ ನೆರವಿಗೆ ಬಂದಿಲ್ಲವೆಂದು ಸ್ನೇಹಿತನಿಗೆ ಚಾಕು ಇರಿತ!

ಬೆಂಗಳೂರು ಪೊಲೀಸರು ಅಪರಾಧಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 76, 78 ಮತ್ತು 79 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಶಂಕಿತನ ಬಂಧನಕ್ಕೆ ಬಲೆ ಬೀಸಿದ್ದಾರೆ. ದಕ್ಷಿಣ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಲೋಕೇಶ್ ಜಗಲಾಸರ್ ಅವರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಮಹಿಳೆಯರ ಸುರಕ್ಷತೆ  ನಮ್ಮ ಮೊದಲ ಆದ್ಯತೆಯಾಗಿದೆ.  ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗುವುದು ಎಂದಿದ್ದಾರೆ.

Latest Videos
Follow Us:
Download App:
  • android
  • ios