160 ವರ್ಷದ ನೀಲಗಿರಿ ಲೈಬ್ರರಿಯಿಂದ 116 ವರ್ಷ ಹಳೇ ಪುಸ್ತಕ ಕದ್ದ ಬೆಂಗಳೂರಿಗ ಆರೆಸ್ಟ್!

ಊಟಿಯಲ್ಲಿರುವ ನೀಲ್ಗಿರಿ ಲೈಬ್ರರಿ ಬ್ರಿಟಿಷರ ಕಾಲದಲ್ಲಿ ಆರಂಭಗೊಂಡಿದೆ. ಈಗಲೂ ಅತ್ಯಂತ ಹಳೇ ಪುಸ್ತಕ ಬಂಡಾರ ಹೊಂದಿರುವ ನೀಲ್ಗಿರಿ ಲೈಬ್ರರಿಯಲ್ಲಿ ವಿಚಿತ್ರ ಘಟನೆ ನಡೆದಿದೆ. 160 ವರ್ಷ ಇತಿಹಾಸದ ಲೈಬ್ರರಿಯಿಂದ 116 ವರ್ಷ ಹಳೇ ಪುಸ್ತಕ ಕದ್ದ ಬೆಂಗಳೂರಿಗ ಇದೀಗ ಅರೆಸ್ಟ್ ಆಗಿದ್ದಾನೆ.

Bengaluru Man arrest after steal 116 year old book from 160 year old nilgiri Library ckm

ಊಟಿ(ಡಿ.22) ಊಟಿಯಲ್ಲಿರುವ ನೀಲ್ಗಿರಿ ಲೈಬ್ರರಿ ಭಾರತದ ಅತ್ಯಂತ ಹಳೇ ಗ್ರಂಥಾಲಾಯದ ಪೈಕಿ ಒಂದಾಗಿದೆ. ಈ ಗ್ರಂಥಾಲಯಕ್ಕೆ 160 ವರ್ಷದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಈ ಗ್ರಂಥಾಲಯ ಆರಂಭಗೊಂಡಿತ್ತು. ಹೀಗಾಗಿ ಬ್ರಿಟಿಷರ ಕಾಲದ ಪುಸ್ತಕಗಳು ಈ ಗ್ರಂಥಾಲಯದಲ್ಲಿದೆ. ಅತ್ಯಮ್ಯೂಲ ಪುಸ್ತಕ, ಗ್ರಂಥಗಳು ಇಲ್ಲಿ ಲಭ್ಯವಿದೆ. ಆದರೆ ಇದೇ ಲೈಬ್ರರಿಯಿಂದ 116 ವರ್ಷ ಹಳೇ ಮಹತ್ವದ ಪುಸ್ತಕವೊಂದು ಕಳುವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತಿಖೆ ಆರಂಭಿಸಿದ ಪೊಲೀಸರು ಇನ್‌ಸ್ಟಾಗ್ರಾಂ ಮೂಲಕ ಸಿಕ್ಕ ಸಣ್ಣ ಸುಳಿವು ಹಿಡಿದು ಆರೋಪಿಯನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಈ ಆರೋಪಿ ಬೆಂಗಳೂರಿನ ಕೋರಮಂಗಲ ನಿವಾಸಿ ಕಾತಿಟ್ರ ದೇಬನಾಥ್.

ಅಕ್ಟೋಬರ್ ತಿಂಗಳಲ್ಲಿ ನೀಲ್ಗಿರಿ ಲೈಬ್ರರಿ ಸಹಯೋಗದಲ್ಲಿ ಊಟಿ ಲಿಟರೇಚರ್ ಫೆಸ್ಟ್ ಆಯೋಜಿಸಲಾಗಿತ್ತು. ದೇಶಾದ್ಯಂತದಿಂದ ಹಲವರು ಸಾಹಿತಿಗಳು, ಪುಸ್ತಕ ಪ್ರೇಮಿಗಳು, ಸಾಹಿತ್ಯ ವಿದ್ಯಾರ್ಥಿಗಳು ಈ ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು. ಲಿಟರೇಚರ್ ಫೆಸ್ಟ್‌ಗೆ ನೀಲ್ಗಿರಿ ಲೈಬ್ರರಿಯ ಕೆಲ ವಿಶೇಷ ಹಾಗೂ ಅತ್ಯಮ್ಯೂಲ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 

ಪ್ರಣಬ್ ಮುಖರ್ಜಿ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್ ನಾಯಕರು ಗೈರು, ಚಿದಂಬರಂ ಮಾತ್ರ ಹಾಜರ್!

ಸಾಹಿತ್ಯ ಉತ್ಸವ ಮುಗಿದ ಬಳಿಕ ಎಲ್ಲಾ ಪುಸ್ತಕಗಳನ್ನು ಲೈಬ್ರರಿಯಲ್ಲಿ ಜೋಡಿಸಲಾಗಿತ್ತು. ಈ ವೇಳೆ ಪೈರೇಟ್ಸ್ ಆಫ್ ಮಲಬಾರ್ ಆ್ಯಂಡ್ ಎನ ಇಂಗ್ಲೀಷ್ ವುವೆನ್ ಇನ್ ಇಂಡಿಯಾ 200 ಇಯರ್ಸ್ ಎಗೋ(ಮಲಬಾರ್ ಕಡಲ್ಗಳ್ಳರು ಮತ್ತು 200 ವರ್ಷಗಳ ಹಿಂದೆ ಭಾರತದಲ್ಲಿ ಇಂಗ್ಲಿಷ್ ಮಹಿಳೆಯರು) ಈ ಪುಸ್ತಕ ಕಾಣೆಯಾಗಿತ್ತು. 116 ವರ್ಷಗಳ ಹಿಂದೆ ಮುದ್ರಣಗೊಂಡಿರುವ ಈ ಪುಸ್ತಕ ಭಾರತದಲ್ಲಿನ ಬ್ರಿಟಿಷ್ ಆಡಳಿತ, ಭಾರತದಲ್ಲಿನ ವ್ಯವಸ್ಥೆಗಳ ಕುರಿತು ಬೆಳಕು ಚೆಲ್ಲುತ್ತದೆ. ಅಂದಿನ ಸಾಮಾಜಿಕ ಹಾಗೂ ಶೈಕ್ಷಣಿ ಪದ್ಧತಿ, ಸ್ಥಾನಮಾನ ಸೇರಿದಂತೆ ಹಲವು ವಿಚಾರಗಳ ಕುರಿತು ದಾಖಲಾಗಿರುವ ಈ ಪುಸ್ತಕ ಕಾಣೆಯಾಗಿರುವುದು ನೀಲ್ಗಿರಿ ಲೈಬ್ರರಿ ಸಿಬ್ಬಂದಿಗಳ ನಿದ್ದೆಗೆಡಿಸಿತು.

ಸಂಪೂರ್ಣ ಲೈಬ್ರರಿ ಹುಡುಕಿದರೂ ಪುಸ್ತಕದ ಸುಳಿವಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಇದೇ ಹೆಸರಿನ ಪುಸ್ತಕವೊಂದು ಇನ್‌ಸ್ಟಾಗ್ರಾಂ ಮೂಲಕ ಮಾರಾಟಕ್ಕಿರುವು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಕ್ಷಣವೇ ಸೈಬರ್ ಕ್ರೈಂ ಪೊಲೀಸರ ನೆರವು ಪಡೆಯಲಾಗಿದೆ.

ಸಡನ್ನಾಗಿ ರಜನಿಕಾಂತ್‌ ಲೈಫ್ ಟರ್ನಿಂಗ್; 25 ವರ್ಷ ಓದದೇ ಇಟ್ಟಿದ್ದ ಪುಸ್ತಕದಲ್ಲಿ ಅಂಥದ್ದೇನಿತ್ತು?

ಪುಸ್ತಕ ಮಾರಾಟಕ್ಕಿಟ್ಟ ವ್ಯಕ್ತಿಯ ಫೋನ್ ನಂಬರ್ ಸೇರಿದಂತೆ ಇತರ ಮಾಹಿತಿ ಪಡೆದುಕೊಂಡ ಪೊಲೀಸರು ಟ್ರೇಸ್ ಮಾಡಿದ್ದಾರೆ. ಈ ವೇಳೆ ಈ ಮೊಬೈಲ್ ನಂಬರ್ ಬೆಂಗಳೂರಿನ ಕೊರಮಂಗಲದಲ್ಲಿರುವುದು ಪತ್ತೆಯಾಗಿದೆ. ಊಟಿಯಿಂದ ಬೆಂಗಳೂರಿಗೆ ಆಗಮಿಸಿದ ಪೊಲೀಸರು 34 ವರ್ಷದ ದೇಬನಾಥ್ ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ. ಈತ ದೇಶದ ವಿವಿದ ಲೈಬ್ರರಿ, ಸಾಹಿತ್ಯ ಉತ್ಸವದಲ್ಲಿ ಅತ್ಯಂತ ಹಳೇ ಪುಸ್ತಕ, ಗ್ರಂಥಗಳನ್ನು ಕದಿಯುತ್ತಿದ್ದ. ಬಳಿಕ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ  ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ದೇಬನಾಥ್‌ನನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest Videos
Follow Us:
Download App:
  • android
  • ios