ಕೆ.ಆರ್‌.ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಬಸ್ ತೋರಿಸುವುದಾಗಿ ಕರೆದೊಯ್ದು ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು (ಜ.21): ಕೆ.ಆರ್‌.ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುವಾಗ ಬಸ್‌ ತೋರಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸೆಗಿ ಮೊಬೈಲ್‌, ನಗದು ಹಾಗೂ ಚಿನ್ನಾಭರಣ ದೋಚಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿದ್ದಾರೆ ನೋಡಿ ಕಾಮ ಪಿಪಾಸುಗಳು..

ಆರೋಪಿಗಳನ್ನು ಸರವಣ ಮತ್ತು ಗಣೇಶ ಎಂದು ಗುರುತಿಸಲಾಗಿದೆ. ಇಬ್ಬರೂ ಆರೋಪಿಗಳು ಕೆ.ಆರ್. ಮಾರುಕಟ್ಟೆಯ ಬಳಿ ಮಹಿಳೆ ಕೆಲಸ ಮಾಡುವುದು ಹಾಗೂ ಭಿಕ್ಷೆ ಬೇಡುವುದನ್ನು ಮಾಡಿದ್ದಾಳೆ. ಇದನ್ನು ನೋಡಿಕೊಂಡಿದ್ದ ಆರೋಪಿಗಳು, ರಾತ್ರಿ ವೇಳೆ ಅಣ್ಣನ ಮನೆಗೆ ಹೋಗುವುದಕ್ಕಾಗಿ ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಮಹಿಳೆಗೆ ಬಸ್ ತೋರಿಸುವುದಾಗಿ ನಿರ್ಜನ ಪ್ರದೇಶವಾದ ಗೋಡೌನ್ ಸ್ಟ್ರೀಟ್‌ಗೆ ಕರೆದುಕೊಂಡು ಹೋಗಿ, ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ಮಹಿಳೆಯನ್ನು ಬೆದರಿಸಿ ಮೊಬೈಲ್, ಹಣ, ಚಿನ್ನಾಭರಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಯ ನಂತರ, ಸಂತ್ರಸ್ತ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಭಾನುವಾರ ರಾತ್ರಿ ಸುಮಾರು 11.30ಕ್ಕೆ ಕೆ.ಆರ್‌.ಮಾರ್ಕೆಟ್‌ ಬಳಿಯ ಗೋಡೌನ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಇದೀಗ ಸಿಸಿಟಿವಿ ಮತ್ತು ಇತರೆ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಮಂಗಳವಾರ ಮಧ್ಯಾಹ್ನದ ವೇಳೆಗೆ ಅತ್ಯಾಚಾರ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಬಲಾತ್ಕಾರ!

ಚಿಂತಾಜನಕವಾಗಿದೆ ಸಂತ್ರಸ್ತ ಮಹಿಳೆ ಜೀವನದ ಕಥೆ: ತನಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದ ಕಾರಣ, ಆಕೆಯ ಗಂಡ ಎರಡನೇ ಮದುವೆಯಾಗಿದ್ದನು. ಗಂಡನ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದಳು. ಚಿಕ್ಕ ವಯಸ್ಸಿನಿಂದಲೂ ಆಶ್ರಮದಲ್ಲಿ ಬೆಳೆದಿದ್ದ ಮಹಿಳೆ, ಎರಡನೇ ಮದುವೆಯಾದ ಗಂಡ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕೆ ಯಾರಿಗೂ ಹೇಳದೇ ಮನೆ ಬಿಟ್ಟು ಬಂದಿದ್ದಳು. ಆದರೆ, ಮನೆ ಬಿಟ್ಟು ಹೊರಬಂದರೂ ಆಕೆ ಅನುಭವಿಸಿದ್ದು ಮಾತ್ರ ನರಕ ಯಾತನೆ. ಮನೆ ಬಿಟ್ಟು ಬಂದ ನಂತರ ಇರಲು ನೆಲೆ ಸಿಗದೇ ಬೆಂಗಳೂರು ಸುತ್ತಾಡಿದ್ದಾಳೆ.

ಮೊದಲ ದಿನ ತಾನು ಬೆಳೆದಿದ್ದ ಆಶ್ರಮಕ್ಕೆ ಹೋಗಿದ್ದ ಮಹಿಳೆ, ನಂತರ ಅಲ್ಲಿಂದ ಒಂದು ದಿನ ತನ್ನ ಅಕ್ಕನ ಮನೆಯಲ್ಲಿ ಕಾಲ ಕಳೆದಿದ್ದಾಳೆ. ಅಲ್ಲಿಯೂ ಹೊರೆ ಆಗುತ್ತೇನೆಂದು ಕೆ.ಆರ್.ಮಾರ್ಕೆಟ್‌ಗೆ ಕೆಲಸ ಹುಡುಕಿಕೊಂಡು ಬಂದಿದ್ದಳು. ಒಂದು ದಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮಲಗಿದ್ದಳು. ನಂತರ ಹೇಗೋ ಗಿಳಿ ಶಾಸ್ತ್ರ ಹೇಳುವ ವ್ಯಕ್ತಿ ಸಹಾಯದಿಂದ ಅಶ್ರಮವೊಂದನ್ನ ಸೇರಿದ್ದಳು. ನಂತರ ಪಿಜಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿದ್ದಳು. ಅಲ್ಲಿಯೂ ವಿಪರೀತ ಕೆಲಸ ಮಾಡುತ್ತಾ ಸರಿಯಾಗಿ ಊಟ ಸಿಗದೇ ಬೇಸತ್ತಿದ್ದಳು. ಆಗ ಆಕೆಗೆ ಅಣ್ಣನ ಮನೆ ನೆನಪಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಕಳ್ಳ ಸ್ವಾಮಿ ಬಂಧನ; ಮಾಟಮಂತ್ರ ಮಾಡಿಸಿದ್ದಾರೆಂದು ಪೂಜೆ ನೆಪದಲ್ಲಿ ಮನೆ ಕಳ್ಳತನ!

ಅಣ್ಣನ ಮನೆಯಲ್ಲಿ ಸೂರು ಸಿಗುತ್ತದೆ ಎಂದು ಹೋಗಲು ನಿರ್ಧಾರ ಮಾಡಿದ್ದಳು. ಆದರೆ, ಆಕೆಯ ಬಳಿ ಆಧಾರ್ ಕಾರ್ಡೂ ಇಲ್ಲ, ಹಣವೂ ಇರಲಿಲ್ಲ. ಹೀಗಾಗಿ, ಅಣ್ಣ ಮನೆಗೆ ಹೋಗಲು ಬಸ್‌ ಚಾರ್ಜ್‌ಗಾದರೂ ಹಣದ ಹೊಂದಿಸಲು ಮಾರ್ಕೆಟ್‌ ಬಳಿ ಭಿಕ್ಷೆ ಬೇಡಿದ್ದಾಳೆ. ಆಗ ಒಂದು ದಿನದಲ್ಲಿ 650 ರೂ. ಸಂಪಾದನೆ ಮಾಡಿ ರಾತ್ರಿ ಅಣ್ಣ ಮನೆಗೆ ಹೋಗಿದ್ದಾಳೆ. ಇನ್ನೇನು ಅಣ್ಣನ ಮನೆ ಸೇರುತ್ತಿನಿ ಅನ್ನೋವಷ್ಟರಲ್ಲಿ ಮಹಿಳೆ ಕಾಮುಕರ ಕೈಗೆ ಸಿಕ್ಕಿ ನಲುಗಿ ಹೋಗಿದ್ದಾಳೆ. ಈ ವಿಚಾರ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡೋದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದರು.