ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ ರಾಮನಗರ ಜಿಪಂ ಮಾಜಿ ಸದಸ್ಯೆ ಮಗನ ಅವಾಂತರಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಇಸ್ರೋ ಜಂಕ್ಷನಲ್ಲಿ ಅವಘಡ ನಡೆದಿದ್ದು ಮೊದಲು ಆಟೋಗೆ ಗುದ್ದಿದ ಕಾರು ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿಯಾಗಿ ಈ ದುರಂತ ನಡೆದಿದೆ. 

ಬೆಂಗಳೂರು (ಆ.8): ಮದ್ಯ ಸೇವಿಸಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ ಮಾಡಿ ಬೈಕ್‌ನಲ್ಲಿ ಹೊರಟಿದ್ದ ಪುಸಕ್ತದ ವ್ಯಾಪಾರಿ ಹಾಗೂ ಅವರ ಪುತ್ರನ ಸಾವಿಗೆ ರಾಮನಗರ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆಯೊಬ್ಬರ ಪುತ್ರ ಕಾರಣವಾಗಿರುವ ಘಟನೆ ಸದಾಶಿವನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಂಗಾಪುರ ಲೇಔಟ್‌ ಸಮೀಪ ಕುವೆಂಪುರ ನಗರದ ನಿವಾಸಿಗಳಾದ ರಘು ನಾಯಕ್‌ (65) ಹಾಗೂ ಅವರ ಪುತ್ರ ಚಿರಂಜೀವಿ (25) ಮೃತರು. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತ ನಾಯಕ್‌ ಅವರ ಅಳಿಯ ವಾಸುದೇವ ನಾಯಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಜಿಪಂ ಮಾಜಿ ಸದಸ್ಯೆ ಪುತ್ರ ಆಕಾಶ್‌ ಹಾಗೂ ಆತನ ಸ್ನೇಹಿತ ನಿಖಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಪಾನಮತ್ತರಾಗಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್‌ ಬರ್ಬ

ವ್ಯಾಪಾರ ಮುಗಿಸಿಕೊಂಡು ಭಾನುವಾರ ರಾತ್ರಿ ತಮ್ಮ ಸಂಬಂಧಿ ವಾಸುದೇವ್‌ ಅವರ ಬೈಕ್‌ನಲ್ಲಿ ತಂದೆ-ಮಗ ಮನೆಗೆ ತೆರಳುತ್ತಿದ್ದರು. ಆಗ ನ್ಯೂ ಬಿಇಎಲ್‌ ಲೇಔಟ್‌ನಲ್ಲಿ ಅವರ ಬೈಕ್‌ಗೆ ನಿತಿನ್‌ ಕಾರು ಗುದ್ದಿಸಿದ್ದಾನೆ. ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ನಾಯಕ್‌ ಹಾಗೂ ಅವರ ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ರಘುನಾಯಕ್‌ ಅವರು, ತಮ್ಮ ಕುಟುಂಬದವರ ಜೊತೆ ಕುವೆಂಪುನಗರದಲ್ಲಿ ವಾಸವಿದ್ದರು. ಅವಿನ್ಯೂ ರಸ್ತೆಯಲ್ಲಿ ನಾಯಕ್‌ ಪುಸಕ್ತದ ಅಂಗಡಿ ಇಟ್ಟಿದ್ದರು. ಎಂದಿನಂತೆ ಭಾನುವಾರ ರಾತ್ರಿ ವ್ಯಾಪಾರ ಮುಗಿಸಿದ ಬಳಿಕ ತಂದೆ-ಮಗ, ಅಂಗಡಿಗೆ ಬಂದಿದ್ದ ಅಳಿಯ ವಾಸುದೇವ್‌ ಅವರ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಾತ್ರಿ ಮದ್ಯದ ಪಾರ್ಟಿ ಮುಗಿಸಿಕೊಂಡು ಜಿಪಂ ಮಾಜಿ ಸದಸ್ಯರ ಪುತ್ರ ಆಕಾಶ್‌, ತನ್ನ ಕಾರಿನಲ್ಲಿ ಮೂವರು ಗೆಳೆಯರ ಜತೆ ನ್ಯೂ ಬಿಇಎಲ್‌ ರಸ್ತೆಯಲ್ಲಿ ತೆರಳುತ್ತಿದ್ದ. ಆಗ ಪಾನಮತ್ತನಾಗಿದ್ದ ಆಕಾಶ್‌, ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾನೆ. ಆಗ ಇಸ್ರೋ ಜಂಕ್ಷನ್‌ನಲ್ಲಿ ಆಟೋಗೆ ಕಾರು ಗುದ್ದಿದೆ. ಅಲ್ಲದೆ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಕಾರು ಅಪ್ಪಳಿಸಿದೆ. ಆಗ ಗಂಭೀರ ಸ್ವರೂಪದ ಪೆಟ್ಟಾಗಿ ಬೈಕ್‌ನಲ್ಲಿದ್ದ ರಘು ನಾಯಕ್‌ ಹಾಗೂ ಅವರ ಪುತ್ರ ಚಿರಂಜೀವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅವರ ಅಳಿಯ ವಾಸುದೇವ ನಾಯಕ್‌ ಅವರನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಾಡಹಗಲೇ ಮಾರ್ಕೆಟ್‌ನಲ್ಲಿ ಕೊಡಲಿಯಿಂದ ಪತ್ನಿ ಕೊಲೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್‌

ಜಿಪಂ ಸದಸ್ಯೆ ಪುತ್ರನ ಜನರೇ ಹಿಡಿದರು: ಸರಣಿ ಅಪಘಾತ ಎಸಗಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಆಕಾಶ್‌ ಹಾಗೂ ಆತ ಸ್ನೇಹಿತ ನಿಖಿತ್‌ನನ್ನು ಬೆನ್ನಟ್ಟಿಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ವೇಳೆ ಆತನ ಮೂವರು ಸ್ನೇಹಿತರು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ನ್ಯೂ ಬಿಇಎಲ್‌ ರಸ್ತೆಯ ಇಸ್ರೋ ಜಂಕ್ಷನ್‌ನಲ್ಲಿ ಬೈಕ್‌ ಕಾರು ಗುದ್ದಿಸಿದ ಆಕಾಶ್‌, ಕೂಡಲೇ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಆತನ ಕಾರನ್ನು ಬೆನ್ನಟ್ಟಿಜನರು ಹಿಡಿದಿದ್ದಾರೆ. ಬಳಿಕ ಐಪಿಸಿ 304ರ (ಉದ್ದೇಶ ಪೂರ್ವಕವಲ್ಲದ ಕೊಲೆ) ಅಡಿ ಆಕಾಶ್‌ ಹಾಗೂ ಐಪಿಸಿ 201 (ಸಾಕ್ಷ್ಯ ನಾಶ) ಆರೋಪದಡಿ ನಿಖಿತ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಿಕೆರೆಯಲ್ಲಿ ನೆಲೆಸಿದ್ದ ಆಕಾಶ್‌: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಆಕಾಶ್‌, ಯಶವಂತಪುರ ಸಮೀಪದ ಮತ್ತಿಕೆರೆಯಲ್ಲಿ ನೆಲೆಸಿದ್ದ. ಮಾಗಡಿ ತಾಲೂಕಿನಿಂದ ರಾಮನಗರ ಜಿಪಂಗೆ ಆತನ ತಾಯಿ ಒಂದು ಬಾರಿ ಆಯ್ಕೆಯಾಗಿದ್ದರು. ತಂದೆ ನಂಜಯ್ಯ ಗುತ್ತಿಗೆದಾರರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿಖಿತ್‌ ಕೂಡ ಮಾಗಡಿ ತಾಲೂಕಿನವನಾಗಿದ್ದು, ಬಸವೇಶ್ವರನಗರ ಕಡೆ ಹೋಟೆಲ್‌ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.