ಬೆಂಗಳೂರು(ಜು. 29)  ನಾಯಿಮರಿ ಆಸೆ ತೋರಿಸಿ ಆನ್ಲೈನ್‌ ವಂಚನೆ‌ ಮಾಡಲಾಗಿದೆ!  ಬೆಂಗಳೂರಿನ ನಿಖಿಲ್ ಕುಮಾರ್ ವಂಚನೆಗೊಳಗಾದ ವ್ಯಕ್ತಿ. ಫೇಸ್‌ಬುಕ್‌ ನಲ್ಲಿ ಒಳ್ಳೆ ತಳಿಯ ನಾಯಿ ಮಾರಾಟಕ್ಕಿವೆ ಅಂತ ಪೋಸ್ಟ್ ಹಾಕಲಾಗಿತ್ತು.  ಇದನ್ನು ಗಮನಿಸಿದ ನಿಖಿಲ್ ಮೆಸೇಜ್ ಮಾಡಿ ನಾಯಿ ಮರಿಯ ಬಗ್ಗೆ ವಿಚಾರಿಸಿದ್ದಾರೆ. 

ಶ್ವಾನದ ಮರಿ ಖರೀದಿಗೆ ಮಾತುಕತೆ ನಡೆಸಿದ್ದ ನಿಖಿಲ್ ಕುಮಾರ್ ಗೆ  ವಂಚಕರು ಗೋಲ್ಡನ್ ರಿಟ್ರೈವರ್ ನಾಯಿ ಮರಿ ತೋರಿಸಿದ್ದರು ಆರೋಪಿಗಳು ಕಳಿಸಿದ್ದ ಅಕೌಂಟ್ ಗೆ ಮೊದಲು ನಿಖಿಲ್ 20 ಸಾವಿರ  ರೂ. ಹಾಕಿದ್ದಾರೆ.

ನೀವು ಗೂಗಲ್ ಪೇ ಬಳಕೆದಾರರಾ.. ಈ ವಂಚನೆ ಸುದ್ದಿ ಓದಿ

ಬಳಿಕ ಅನ್ಯರಾಜ್ಯದಿಂದ ನಾಯಿ ಮರಿ ಕಳಿಸಲು 11 ಸಾವಿರ ಹಣ ಹೆಚ್ಚುವರಿಯಾಗಿ ಕಳಿಸುವಂತೆ  ವಂಚಕರು ಕೇಳಿದ್ದಾರೆ. ಅದರಂತೆ ಆ ಹಣವನ್ನು ಸಹ ಬ್ಯಾಂಕ್ ಖಾತೆಗೆ ನಿಖಿಲ್ ಕುಮಾರ್  ಹಾಕಿದ್ದಾರೆ.

ಇದಾದ ಬಳಿಕ ಸಂಪರ್ಕ ಮಾಡುತ್ತಿದ್ದ ಮೊಬೈಲ್  ಸ್ವಿಚ್ ಆಫ್ ಆಗಿದ್ದು ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಲಾಗಿದೆ.