Asianet Suvarna News Asianet Suvarna News

ವಲಸೆ ಕಾರ್ಮಿರನ್ನ ಒದೆಯಲು ಹೋಗಿ ಸಸ್ಪೆಂಡ್ ಆದ ಬೆಂಗಳೂರಿನ ASI: ಇದು ಬೇಕಿತ್ತಾ..?

ಬೆಂಗಳೂರಿನ ಎಎಸ್‌ಐ ಒಬ್ಬ ವಲಸೆ ಕಾರ್ಮಿಕರ ತಂಟೆಗೆ ಹೋಗಿ ಕೆಲಸ ಕಳೆದುಕೊಂಡು ಸ್ವಲ್ಪದಿನ ಮನೆಯಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.
 

bengaluru asi suspended for Assult on UP migrant- Workers
Author
Bengaluru, First Published May 11, 2020, 10:37 PM IST

ಬೆಂಗಳೂರು (ಮೇ 11): ಊರಿಗೆ ತೆರಳಲು ಪೊಲೀಸ್ ಸ್ಟೇಷನ್​ನಲ್ಲಿ ನೋಂದಣಿ ಮಾಡಿಸಲು ಬಂದ ಉತ್ತರಪ್ರದೇಶದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ASI ನನ್ನು ಅಮಾನತು ಮಾಡಲಾಗಿದೆ. 

ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ASI ರಾಜಾಸಾಬ್​ ಅವರನ್ನು ಅಮಾನತು ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಆದೇಶ ಹೊರಡಿಸಿದ್ದಾರೆ. 

ರೇಪ್ ಕತೆ ಹಿಂದೆ ಹುಡ್ಗಿಯ ಕರಾಮತ್ತು, ಒಗ್ಗಟ್ಟಿಗಾಗಿ ಕಾಂಗ್ರೆಸ್ ಕಸರತ್ತು; ಮೇ.11ರ ಟಾಪ್ 10 ಸುದ್ದಿ!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಹೊರ ರಾಜ್ಯದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವಿಶೇಷ ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ರೈಲಿನಲ್ಲಿ ಸಂಚರಿಸಲು ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ. 

ಈ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಸಲುವಾಗಿ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಈ ವೇಳೆ ಸಿಟ್ಟಿನಿಂದ ಎಎಸ್​ಐ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಬೂಟುಕಾಲಿನಿಂದ ಒದೆಯಲು ಮುಂದಾದ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್‌ ಆಗುತ್ತಿದ್ದಂತೆಯೇ ಮೇಲಧಿಕಾರಿಗಳು ಎಚ್ಚೆತ್ತಿಕೊಂಡು  ASI ರಾಜಾಸಾಬ್‌ನನ್ನು ಸಸ್ಪೆಂಡ್ ಮಾಡಿದ್ದಾರೆ.

Follow Us:
Download App:
  • android
  • ios