ಇಡೀ ಕುಟುಂಬ ಮದುವೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ದೋಚಿದ್ದ ಪ್ರಕರಣ. ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ ತಿಲಕನಗರ ಠಾಣೆ ಪೊಲೀಸರು.
ಬೆಂಗಳೂರು (ಅ.3) ಇಡೀ ಕುಟುಂಬ ಮದುವೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ದೋಚಿದ್ದ ಪ್ರಕರಣ. ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ ತಿಲಕನಗರ ಠಾಣೆ ಪೊಲೀಸರು.
ಸೆ.23 ರಂದು ನಡೆದಿದ್ದ ಮನೆಗಳ್ಳತನ. ಮೊಮ್ಮಗಳ ಮದುವೆಗಾಗಿ ಖರೀದಿ ಮಾಡಿದ್ದ ಚಿನ್ನಾಭರಣ. ಸುಮಾರು ಎರಡೂಕಾಲು ಕೆಜಿ ಚಿನ್ನಾಭರಣ ಖರೀದಿಸಿ ಇಟ್ಟಿದ್ದ ಕುಟುಂಬ. ಇದೇ ವೇಳೆ ಇಡೀ ಕುಟುಂಬ ಮದುವೆ ಕಾರ್ಯಕ್ರಮಕ್ಕೆ ಹೋಗಿತ್ತು. ಮನೆಯಲ್ಲಿ ಯಾರೂ ಇಲ್ಲದ್ದು ಗಮನಿಸಿ ಹತ್ತಿರದ ಸಂಬಂಧಿಯೇ ಮನೆ ನುಗ್ಗಿ ಕಳ್ಳತನ ಮಾಡಿದ್ದ. ಸುಮಾರು ಎರಡು ಕಾಲು ಕೆಜಿ ಚಿನ್ನಾಭರಣ, 8-10 ಲಕ್ಷ ನಗದು ಕಳ್ಳತನ. ವೈಯಕ್ತಿಕ ದ್ವೇಷದಿಂದ ನಡೆದಿದ್ದ ಕಳ್ಳತನ.
ಒಂದೇ ವಾರದ ಕಾರ್ಯಚರಣೆ: ಆಂಧ್ರ ಮೂಲದ ಬೈಕ್ ಕಳ್ಳರ ಗ್ಯಾಂಗ್‌ನಿಂದ 43 ಲಕ್ಷದ 62 ಬೈಕ್ ಜಪ್ತಿ ಮಾಡಿದ ಪೊಲೀಸರು!
ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾದ ಕುಟುಂಬಸ್ಥರು ಶಾಕ್ ಆಗಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಕುಟುಂಬ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ತಿಲಕನಗರ ಪೊಲೀಸರು. ಆರೋಪಿ ಬಂಧಿಸಿ 1ಕೆಜಿ 800 ಗ್ರಾಂ ಚಿನ್ನಾಭರಣ ಮತ್ತು 74 ಸಾವಿರ ರೂ.ನಗದು ವಶಕ್ಕೆ ಪಡೆದ ಪೊಲೀಸರು. ಆರೋಪಿ ಕದ್ದ ಹಣದಿಂದ ಆನ್‌ಲೈನ್ ಆಪ್‌ನಿಂದ ಮಾಡಿಕೊಂಡಿದ್ದ ಸಾಲ ತೀರಿಸಿದ್ದ. ಸದ್ಯ ಆರೋಪಿಯನ್ನು ಇನ್ನಷ್ಟು ವಿಚಾರಣೆಗೊಳಪಡಿಸಿರುವ ಪೊಲೀಸರು. ಬೇರೆಡೆ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ.
ಸಾಲ ತೀರಿಸಲು ಮೊಬೈಲ್ ಶಾಪ್ ಕಳ್ಳತನ:
ಸಾಲ ತೀರಿಸುವ ಸಲುವಾಗಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಮುತೈದೆ ಪೂಜೆ ಹೆಸರಲ್ಲಿ ಮಾಂಗಲ್ಯ ಸರ ಕಳ್ಳತನ: ಚಿನ್ನ ಕಳ್ಕೊಂಡು ಕಂಗಾಲಾದ ಮಹಿಳೆಯರು..!
ಆನ್‌ಲೈನ್ ಆಪ್‌ನಿಂದ ಸಾಲ ಮಾಡಿಕೊಂಡಿದ್ದ ಖದೀಮರು ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದರು. ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಮೊಬೈಲ್ ದೋಚಿದ್ದ ಆರೋಪಿಗಳು.ಅದರಲ್ಲಿ ಮೊಬೈಲ್ ಮಾರಾಟ ಮಾಡಿ ಸಾಲ ತೀರಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯನಗರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ 50ಲಕ್ಷ ಮೌಲ್ಯದ ವಿವಿಧ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
