Asianet Suvarna News Asianet Suvarna News

ರೋಡ್‌ನಲ್ಲಿ ಅಪ್ರಾಪ್ತೆಗೆ ಕಿಸ್‌ ಕೊಟ್ಟು ಲೈಂಗಿಕ ಕಿರುಕುಳ ಕೊಟ್ಟ ಚಾಲಕ

*   ಪ್ರೀತಿಸುವಂತೆ ಕಾಟ ಕೊಟ್ಟವನ ಬಂಧಿಸಿದ ಪೊಲೀಸರು
*  ಪಾಗಲ್ ಪ್ರೇಮಿ ಥಿ ಪ್ರೀತಿಸುವಂತೆ ಅಪ್ರಾಪ್ತೆ ಹಿಂದೆ ಬಿದ್ದಿದ್ದ ಆಟೋ ಚಾಲಕ
*  ಪ್ರೀತಿ ನಿರಾಕರಿಸಿದ್ದ ಬಾಲಕಿ
 

Auto Driver Sexual Harassment to Minor Girl in Bengaluru grg
Author
Bengaluru, First Published Aug 30, 2021, 9:21 AM IST
  • Facebook
  • Twitter
  • Whatsapp

ಬೆಂಗಳೂರು(ಆ.30):  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಚುಂಬಿಸಿ ಪ್ರೀತಿಸುವಂತೆ ಹೇಳಿದ ಆಟೋ ಚಾಲಕ ಇದೀಗ ಪೀಣ್ಯ ಪೊಲೀಸರ ಅತಿಥಿಯಾಗಿದ್ದಾನೆ. 16 ವರ್ಷದ ಬಾಲಕಿ ತಾಯಿ ಕೊಟ್ಟ ದೂರಿನ ಮೇರೆಗೆ ಆರೋಪಿ ಆಟೋ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಚಿಕ್ಕದೊಡ್ಡ ಬಿದರಕಲ್ಲು ನಿವಾಸಿಯಾಗಿದ್ದು, ಇದೇ ಪ್ರದೇಶದಲ್ಲಿ ಆರೋಪಿ ವಾಸವಾಗಿದ್ದ. ಬಾಲಕಿಯನ್ನು ಪ್ರೀತಿಸುತ್ತಿದ್ದ, ಒಮ್ಮೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇದಕ್ಕೆ ಯುವತಿ ಸೊಪ್ಪು ಹಾಕಿರಲಿಲ್ಲ. ಶನಿವಾರ ಸಂಜೆ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಅದೇ ರಸ್ತೆಯಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದಿದ್ದ ಆರೋಪಿ, ಬಾಲಕಿಯನ್ನು ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಬಾಲಕಿಯನ್ನು ಹಿಡಿದು ಚುಂಬಿಸಿದ್ದ. ಆರೋಪಿ ವರ್ತನೆಯಿಂದ ಹೆದರಿದ ಬಾಲಕಿ ಸಹಾಯಕ್ಕಾಗಿ ಚೀರಿಕೊಂಡಾಗ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ಆರೋಪಿ ಬಾಲಕಿಗೆ ಚುಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬಾಲಕಿ ಮೇಲೆ ದೌರ್ಜನ್ಯ ಎಸಗಿದ 16ರ ಪೋರ್ನ್ ದಾಸ!

ಈ ಸಂಬಂಧ ಬಾಲಕಿ ತಾಯಿ ಪೀಣ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. 
 

Follow Us:
Download App:
  • android
  • ios