ಗುಂಡ್ಲುಪೇಟೆ: ಕಾಡಂದಿ ಮಾಂಸ ಬೇಯಿಸುತ್ತಿದ್ದ ಕೇರಳಿಗರ ಬಂಧನ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಚನ್ನಮಲ್ಲೀಪುರ ಗ್ರಾಮದ ಜಾಕೋಬ್ ಫಾರಂನದಲ್ಲಿ ಇಬ್ಬರು ರುಂಡ ರಹಿತ ಪ್ರಾಣಿಯನ್ನು ಮಾಂಸಕ್ಕಾಗಿ ಸುಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್ ಮತ್ತವರ ಸಿಬ್ಬಂದಿ
ಗುಂಡ್ಲುಪೇಟೆ(ಜು.11): ಬೆಳೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿದ್ದ ತಂತಿಗೆ ಸಿಲುಕಿ ಮೃತಪಟ್ಟಿದ್ದ ಕಾಡಂದಿಯನ್ನು ರೈತನೊಬ್ಬ ಕೇರಳಿಗರಿಗೆ ನೀಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಚನ್ನಮಲ್ಲೀಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚನ್ನಮಲ್ಲಿಪುರ ಗ್ರಾಮದ ಬಸಪ್ಪ ಆಲಿಯಾಸ್ ದೊಡ್ಡ ಬಸಪ್ಪಗೆ ಸೇರಿದ ಸ.ನಂ. 99 ರಲ್ಲಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ಗೆ ಬಲಿಯಾಗಿತ್ತು. ಸತ್ತ ಕಾಡಂದಿಯನ್ನು ಬಸಪ್ಪ ಆಲಿಯಾಸ್ ದೊಡ್ಡಬಸಪ್ಪ ಮಾಂಸಕ್ಕಾಗಿ ನಮಗೆ ನೀಡಿದ್ದಾರೆ ಎಂದು ಬಂಧಿತ ಕೇರಳ ಮೂಲದ ಆರೋಪಿಗಳು ಹೇಳಿದ್ದಾರೆ.
ಈ ಸಂಬಂಧ ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ 9,39,59 ಆರ್/ಡಬ್ಲೂತ್ರ್ಯ 2/16 ಸಿ,2/36,51,55 ತ ಪ್ರಕಾರ ಅಪರಾಧ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಚನ್ನಮಲ್ಲೀಪುರ ಗ್ರಾಮದ ಜಾಕೋಬ್ ಫಾರಂನದಲ್ಲಿ ಇಬ್ಬರು ರುಂಡ ರಹಿತ ಪ್ರಾಣಿಯನ್ನು ಮಾಂಸಕ್ಕಾಗಿ ಸುಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್ ಮತ್ತವರ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಕನಕಗಿರಿಯಲ್ಲಿ ಮತ್ತೆ ಅಶ್ಲೀಲ ಗೋಡೆ ಬರಹ; ಪೊಲೀಸ್ ಇಲಾಖೆಗೆ ತಲೆನೋವು
ಆರೋಪಿಗಳ ವಿಚಾರಣೆ ಸಮಯದಲ್ಲಿ ಸುಡುತ್ತಿರುವ ಮಾಂಸ ಕಾಡಂದಿಯದಾಗಿತ್ತು. ಮಾಂಸ ಸುಡುತ್ತಿದ್ದ ಕೇರಳ ಮೂಲದ ಎಂ.ವಿ. ಥಾಮಸ್, ಶಿಜು ಜಾಕೋಬ್ ಬಾಯಿ ಬಿಟ್ಟಿದ್ದಾರೆ. ಬಂಧಿತ ಇಬ್ಬರು ಆರೋಪಿಗಳನ್ನು ವಿಚಾರಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರೈತ ಬಸಪ್ಪ ಆಲಿಯಾಸ್ ದೊಡ್ಡ ಬಸಪ್ಪ ತಲೆಮರೆಸಿಕೊಂಡಿದ್ದು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಮಾಹಿತಿ ಒದಗಿಸಿದ್ದಾರೆ.
ಎಸಿಎಫ್ ಜಿ.ರವೀಂದ್ರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಬಿ.ಎಂ. ಮಲ್ಲೇಶ್, ಉಪ ವಲಯ ಅರಣ್ಯಾಕಾರಿ ಪ್ರವೀನ್ ಹಂಚಿನಾಳ್,ಗಸ್ತು ವನ ಪಾಲಕ ದೇವಿಂದ್ರ ಯರಗಲ್ಲ, ನವೀನ ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.