Asianet Suvarna News Asianet Suvarna News

₹ 1 ಕೋಟಿಯಲ್ಲಿ ಮಗಳ ಮದುವೆ ಮಾಡಿ ಎಂದು ಗುಂಡು ಹಾರಿಸಿಕೊಂಡ ಉದ್ಯಮಿ, ಪತ್ನಿ..!

ದಯವಿಟ್ಟು ನನ್ನ ಮಕ್ಕಳಿಗಾಗಿ, ನನ್ನ ಮಗಳ ಮದುವೆಗಾಗಿ ನನ್ನ ಹಣವನ್ನು ಹಿಂತಿರುಗಿಸಿ. ಅವಳ ಮದುವೆಯನ್ನು ₹ 50 ಲಕ್ಷದಿಂದ 1 ಕೋಟಿ ರೂಪಾಯಿಯಲ್ಲಿ ಮಾಡಿ ಎಮದು ಹೇಳಿದ್ದಾರೆ. 

arrange daughters wedding in 1 crore man before shooting himself ash
Author
First Published Jan 29, 2023, 5:00 PM IST

ಭೋಪಾಲ್ (ಜನವರಿ 29,2023): ಪ್ರಮುಖ ಜವಳಿ ಉದ್ಯಮಿಯೊಬ್ಬರು ಪತ್ನಿಯನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ಶನಿವಾರ ನಡೆದಿದೆ. ಈ ಸುದ್ದಿ ಇಡೀ ನಗರದಲ್ಲಿ ಸಂಚಲನ ಮೂಡಿಸಿದ್ದು, ಇನ್ನು ಪೊಲೀಸರು ಸ್ಥಳದಲ್ಲಿ ಸೂಸೈಡ್‌ ನೋಟ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ಶವದಲ್ಲಿ ಗುಂಡಿನೇಟಿನ ಗಾಯದ ಗುರುತು ಪತ್ತೆಯಾಗಿದ್ದು, ಜತೆಗೆ ಘಟನಾ ಸ್ಥಳದಲ್ಲಿ ಸೂಸೈಡ್‌ ನೋಟ್‌ ಸಹ ಸಿಕ್ಕಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಗೇಶ್ವರ ಧಾಮದ ಭಕ್ತರಾಗಿದ್ದ ಉದ್ಯಮಿ ಸಂಜಯ್ ಸೇಠ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಹೆಸರಿನ ಸೂಸೈಡ್‌ ನೋಟ್‌ ಸಹ ಪತ್ತೆಯಾಗಿದೆ.

ಈ ಸೂಸೈಡ್‌ ನೋಟ್‌ನಲ್ಲಿ (Suicide Note) , ಗುರೂಜಿ (Guruji), ನನ್ನನ್ನು ಕ್ಷಮಿಸಿ, ನನಗೆ ಮತ್ತೊಂದು ಜನ್ಮ (Birth) ಸಿಕ್ಕರೆ, ನಾನು ಅದನ್ನು ನಿಮ್ಮ ನಿಷ್ಠಾವಂತ ಭಕ್ತನಾಗಿ ಮಾತ್ರ ಪಡೆಯುತ್ತೇನೆ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ, ಘಟನೆಗೂ ಮುನ್ನ ಸಂಜಯ್ ಸೇಠ್ (Sanjay Seth) ಅವರು ಅಳುತ್ತಿರುವ ವಿಡಿಯೋವನ್ನು (Video) ಸಹ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಬಳಿ ಸಾಲ (Debt) ಪಡೆದ ಹಣವನ್ನು (Money) ಮರುಪಾವತಿ ಮಾಡದವರ ಹೆಸರನ್ನು ಸಹ ಹೇಳಿದ್ದಾರೆ.

ಇದನ್ನು ಓದಿ: ಮಗಳ ಕೈಯಲ್ಲಿ ಡೆತ್‌ನೋಟ್‌ ಬರೆಸಿ ಕೊಲೆ ಮಾಡಿದ ತಂದೆ..!

ಅಲ್ಲದೆ, ದಯವಿಟ್ಟು ನನ್ನ ಮಕ್ಕಳಿಗಾಗಿ, ನನ್ನ ಮಗಳ ಮದುವೆಗಾಗಿ ನನ್ನ ಹಣವನ್ನು ಹಿಂತಿರುಗಿಸಿ. ಅವಳ ಮದುವೆಯನ್ನು ₹ 50 ಲಕ್ಷದಿಂದ 1 ಕೋಟಿ ರೂಪಾಯಿಯಲ್ಲಿ ಮಾಡಿ. ನನ್ನ ಮಗಳ ಖಾತೆಯಲ್ಲಿ ಹಣವಿದೆ. 29 ಲಕ್ಷ ರೂಪಾಯಿಯನ್ನು ಲಾಕರ್‌ನಲ್ಲಿ ಇರಿಸಲಾಗಿದೆ. ನನ್ನ ಹೆಂಡತಿ ಮತ್ತು ನಾನು ಇಬ್ಬರೂ ದೂರ ಹೋಗುತ್ತಿದ್ದೇವೆ, ಬದುಕಲು ಸಾಧ್ಯವಾಗುತ್ತಿಲ್ಲ ಮಗಳಿಗೆ ಸಾಕಷ್ಟು ಆಭರಣಗಳಿವೆ ... ನನ್ನ ಮಕ್ಕಳೇ, ನನ್ನನ್ನು ಕ್ಷಮಿಸಿ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಸಂಜಯ್ ಸೇಠ್ ಅವರು ತಮ್ಮ ಪತ್ನಿ ಮೀನು ಜೊತೆ ಮಧ್ಯ ಪ್ರದೇಶದ ಪನ್ನಾ ನಗರದ ಹೃದಯ ಭಾಗದಲ್ಲಿರುವ ಕಿಶೋರ್ ಗಂಜ್ ಪ್ರದೇಶದಲ್ಲಿ ವಾಸವಾಗಿದ್ದರು. ಘಟನೆಯ ವೇಳೆ ಸಂಜಯ್ ಮತ್ತು ಮೀನು ಇಬ್ಬರೂ ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿದ್ದರು. ಗುಂಡಿನ ಸದ್ದು ಕೇಳಿದ ನಂತರ ಕುಟುಂಬದ ಇತರ ಸದಸ್ಯರು ಮಹಡಿಗೆ ಬಂದರು ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಸ್ಥಳಕ್ಕೆ ಬಂದಾಗ ಮಹಿಳೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಆದರೆ ಉದ್ಯಮಿ ಸಂಜಯ್ ಸೇಠ್‌ ಇನ್ನೂ ಉಸಿರಾಡುತ್ತಿದ್ದರು. ಆದರೆ, ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರೂ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೇರಳದ ಒಂದು ಮೊಟ್ಟೆಯ ಕಥೆ: ಕೂದಲು ಬರಲಿಲ್ಲವೆಂದು ವೈದ್ಯನ ಹೆಸರು ಬರೆದಿಟ್ಟು ಸೂಸೈಡ್‌..!

ಇನ್ನು, ಈ ಘಟನೆ ಬಗ್ಗೆ ಪನ್ನಾ ಪೊಲೀಸ್ ಅಧೀಕ್ಷಕ ಧರ್ಮರಾಜ್ ಮೀನಾ ಮಾತನಾಡಿದ್ದು, ಪ್ರಾಥಮಿಕ ದೃಷ್ಟಿಯಲ್ಲಿ ಈ ವಿಷಯವು ಕೌಟುಂಬಿಕ ಕಲಹ ಎಂದು ತೋರುತ್ತದೆ. ಇದು ಅತ್ಯಂತ ದುಃಖಕರ ಘಟನೆ, ನಮ್ಮ ತನಿಖೆ ನಡೆಯುತ್ತಿದೆ. ಪ್ರಸ್ತುತ, ಯಾವುದೇ ಹೊರಗಿನವರು ಭಾಗಿಯಾಗಿರುವಂತೆ ತೋರುತ್ತಿಲ್ಲ, ದಂಪತಿ ಆ ಕೋಣೆಯಲ್ಲಿ ಇಬ್ಬರೇ ಇದ್ದರು. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: TRS MLA's Son Arrested: ಆತ್ಮಹತ್ಯೆಗೆ ಕುಮ್ಮಕ್ಕು, ಪ್ರಭಾವಿ ನಾಯಕನ ಪುತ್ರ ಅರೆಸ್ಟ್!

Follow Us:
Download App:
  • android
  • ios