ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಬಲಿ!
ಸ್ಕೂಟರ್‌ನಲ್ಲಿ ಕಾಲೇಜಿಗೆ ಹೊರಟಿದ್ದ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಕುಸುಮಿತಾ(22) ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಸಮೀಪ ಹರಿಶ್ಚಂದ್ರ ಘಾಟ್ ಬಳಿ ನಡೆದಿದೆ. ತಿಂಗಳಿಗೊಂದರಂತೆ ಬಲಿಪಡೆಯುತ್ತಿರುವ ಬಿಎಂಟಿಸಿ ರಕ್ತದಾಹಕ್ಕೆ ಕೊನೆಯಿಲ್ಲವೇ?
ಬೆಂಗಳೂರು (ಫೆ.2): ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ದೇಶದಲ್ಲೇ ಖ್ಯಾತಿ ಪಡೆದಿದೆ. ಹಾಗೆಯೇ ತಿಂಗಳಿಗೊಬ್ಬರಂತೆ ಸಾರ್ವಜನಿಕರನ್ನು ಬಲಿ ಪಡೆಯುವ ಮೂಲಕ ಕುಖ್ಯಾತಿಯೂ ಗಳಿಸಿದೆ. ಹೌದು ತಿಂಗಳಿಗೊಮ್ಮೆಯಾದರೂ ಬಿಎಂಟಿಸಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಬಲಿಯಾದ ವರದಿ ಓದಿಯೇ ಇರುತ್ತೀರಿ. ಕಳೆದ ತಿಂಗಳು ಬಿಎಂಟಿಸಿಗೆ ಬಲಿಯಾದ ಘಟನೆ ಮಾಸುವ ಮುನ್ನವೆ ಇದೀಗ ಕಿಲ್ಲರ್ ಬಿಎಂಟಿಸಿಗೆ 22 ವರ್ಷದ ಕಾಲೇಜು ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.
ಇಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಕುಸುಮಿತಾ(22) ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಸಮೀಪ ಹರಿಶ್ಚಂದ್ರ ಘಾಟ್ ಬಳಿ ನಡೆದಿದೆ.
ಬೆಂಗಳೂರಿನ ಜನರೇ ಹುಷಾರ್, ಕಿಲ್ಲರ್ ಬಿಎಂಟಿಸಿ ನಿಮ್ಮ ಪ್ರಾಣವನ್ನೂ ಹೊತ್ತೊಯ್ಯಬಹುದು!
ಬೆಳಗ್ಗೆ 9.30ರ ಸುಮಾರಿಗೆ ನಡೆದಿರೋ ಘಟನೆ. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿ ಕುಸುಮಿತಾ. ಇಂದು ಎಂದಿನಂತೆ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತಿದ್ದ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ ಘಟನೆ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆ ಪ್ರಕರಣ ದಾಖಲು. ವಿದ್ಯಾರ್ಥಿನಿ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಬಿಎಂಟಿಸಿ ಬಸ್ ನಿಂದಾಗಿ ನಮ್ಮ ಮಗಳನ್ನ ಕಳೆದುಕೊಂಡೆವು ಅಂತಾ ಗೋಳಿಡುತ್ತಿರುವ ವಿದ್ಯಾರ್ಥಿನಿ ಪೋಷಕರು.
ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ; ವೊಲ್ವೋ ಬಸ್. ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ!
ಕುಸುಮಿತಾ 20 ವರ್ಷದ ಹುಡುಗಿ. ಜೈನ್ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಬೆಳಗ್ಗೆ 8.30ಕ್ಕೆ ಕಾಲೇಜಿಗೆ ಹೋಗುವ ವೇಳೆ ಬಸ್ ಟಚ್ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ರಸ್ತೆಯ ಎಡಗಡೆ ಹುಡುಗಿ ಬೈಕ್ ನಲ್ಲಿ ಬರ್ತಿದ್ಳು. ಇದನ್ನ ಬಸ್ ಚಾಲಕ ನೋಡಿಲ್ಲ ಅನ್ಸುತ್ತೆ. ಬಸ್ ಚಾಲಕನ ನಿರ್ಲಕ್ಷ್ಯ ಕಾಣಿಸುತ್ತಿದೆ. ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರಿದಿದೆ
ಸಿರಿ ಗೌರಿ ಡಿ.ಆರ್ ಉತ್ತರ ವಿಭಾಗ ಸಂಚಾರ ಡಿಸಿಪಿ