Asianet Suvarna News Asianet Suvarna News

ಸಾರಿಗೆ ಬಸ್ ಹರಿದು ತುಂಡಾದ ವೃದ್ಧೆಯ ಕಾಲು! ಸಹಾಯಕ್ಕೆ ಬಾರದೆ ವಿಡಿಯೋ ಮಾಡುತ್ತಾ ನಿಂತ ಸಾರ್ವಜನಿಕರು!

ಚಾಲಕನ ನಿರ್ಲಕ್ಷ್ಯದಿಂದ ಸಾರಿಗೆ ಇಲಾಖೆಯ ಬಸ್ ಹರಿದು ವೃದ್ಧೆ ಕಾಲು ತುಂಡಾದ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಪಘಾತ ನಡೆದು ಅರ್ಧಗಂಟೆ ಕಳೆದರೂ ಸ್ಥಳಕ್ಕೆ ಬಾರದ ಸಾರಿಗೆ ಅಧಿಕಾರಿಗಳು ಇತ್ತ ಸಾರ್ವಜನಿಕರು ಸಹ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವುದರಲ್ಲಿ ಮಗ್ನರಾಗಿದ್ದರು.

An old woman run over by bus loses legs at ranebennur haveri district rav
Author
First Published Apr 21, 2024, 4:27 PM IST

ಹಾವೇರಿ (ಏ.21): ಸಾರಿಗೆ ಇಲಾಖೆಯ ಬಸ್ ಹರಿದು ವೃದ್ಧೆ ಕಾಲು ತುಂಡಾದ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ.

ರಾಣೇಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದವರೆನ್ನಲಾದ 65 ವರ್ಷ ವೃದ್ಧೆಯ ಕಾಲಿನ ಮೇಲೆ  ಹರಿದಿರುವ ಬಸ್. ಮೊಣಕಾಲಿನ ಕೆಳಭಾಗ, ಪಾದವರೆಗೆ ಎಲುಬು, ಕೀಲುಗಳು ಕಟ್ ಆಗಿ ಹೊರಗೆ ಬಂದಿವೆ. ವೃದ್ಧೆ ರಕ್ತ ಮಡುವಿನಲ್ಲಿ ನರಳುತ್ತಾ ಕುಳಿತರೂ ಸಹಾಯಕ್ಕೆ ಬಾರದ ವೃದ್ಧೆಯನ್ನು ಬಿಟ್ಟು ತೆರಳಿದ ಬಸ್ ಡ್ರೈವರ್ ಚಾಲಕ. ಇತ್ತ ವೃದ್ಧೆಯ ಸಹಾಯಕ್ಕೆ ಬಾರದೆ ರಕ್ತಸಿಕ್ತವಾಗಿ ಕುಳಿತಿದ್ದ ವೃದ್ಧೆಯ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದ ಸಾರ್ವಜನಿಕರು

ಅಪಘಾತ ಸಂಭವಿಸಿ ಅರ್ಧಗಂಟೆ ಕಳೆದರೂ ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ, ಆಂಬಲೆನ್ಸ್ ಆಗಲಿ ಸ್ಥಳಕ್ಕೆ ಬರಲಿಲ್ಲ. ಬಸ್ ಚಾಲಕನ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಅನಂತರ ಸ್ಥಳಕ್ಕೆ ಆಂಬುಲೆನ್ಸ್ ಕರೆಸಿ ಸರ್ಕಾರಿ ಆಸ್ಪತ್ರೆಗೆ ವೃದ್ಧೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು. ಸದ್ಯ ಅಪಘಾತ ಘಟನೆ ಸಂಬಂಧ ರಾಣೇಬೆನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕುಟುಂಬಸ್ಥರು.

ಮನೆಮನೆ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ಸಾವು; ಬಿಜೆಪಿ ಆಕ್ರೋಶ

Follow Us:
Download App:
  • android
  • ios