ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು(ಫೆ.04): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ಎನ್.ಆರ್‌ನರಸಿಂಹಯ್ಯ (58) ಎಂಬುವರು ನೇಣಿಗೆ ಶರಣಾಗಿದ್ದಾರೆ. ಆಟೋ ಚಾಲಕರಾಗಿದ್ದ ಇವರು ಇವರು ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಟ, ಎಲ್ ಅಂಡ್ ಟಿ, ಸ್ಪಂದನ, ಸಮಸ್ತ, ನವ ಚೈತನ್ಯ ಫೈನಾನ್ಸ್ ಕಂಪನಿಗಳಲ್ಲಿ ಒಟ್ಟು ₹3.5 ಲಕ್ಷ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಈಗ ಗೌರ್ನರ್ ಅಂಗಳಕ್ಕೆ: 3 ಅಲ್ಲ 10 ವರ್ಷ ಜೈಲು ಶಿಕ್ಷೆ!
ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. 3 ಬಾರಿ ಆಟೋವನ್ನೂ ಅಡವಿಟ್ಟು ಹಣ ಕಟ್ಟಿದ್ದಾರೆ. ಸೋಮವಾರ ಎಲ್ ಅಂಡ್ ಟಿ ಮತ್ತು ನವಚೈತನ್ಯ ಫೈನಾನ್ಸ್‌ಗಳಿಗೆ ಕಟ್ಟಲು ಹಣವಿಲ್ಲದ ಕಾರಣ ಬೇರೆಡೆ ಸಾಲ ಪಡೆ ದುಕೊಂಡುಬರುತ್ತೇನೆ ಎಂದು ತಿಳಿಸಿ, ಮನೆಯಿಂದತೆರಳಿದ್ದಾರೆ. ಮಧ್ಯಾಹ್ನವಾದರೂ ಮನೆಗೆ ಬಾರದ ಪತಿಯನ್ನು ಪತ್ನಿ ಹುಡುಕುತ್ತಾ ಜಮೀನಿನ ಕಡೆ ಬಂದಾಗ ಪತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.
ಕ್ಷೌರಿಕ ಸಾವು:
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅಡವಿ ಆಂಜನೇಯ ಬಡಾವಣೆ ನಿವಾಸಿ ಮಾಲತೇಶ ನಾಗಪ್ಪ ಅರಸಿಕೆರಿ (42) ಮೃತ ದುರ್ದೈವಿ ಮೃತ ಮಾಲತೇಶ ಕ್ಷೌರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ತಮ್ಮ ಹೆಸರಿನಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಮತ್ತು ಸಂಘ-ಸಂಸ್ಥೆಗಳಲ್ಲಿ 24 ಲಕ್ಷ ಸಾಲ ಪಡೆದಿದ್ದರು. ಸೋ ಮವಾರ ಸಾಲದ ಕಂತು ₹5500 ಕಟ್ಟಬೇಕಿತ್ತು. ಆದರೆ ಹಣವಿಲ್ಲದ ಕಾರಣ ಅವರ ಪತ್ನಿ ಹಣ ತೆಗೆದುಕೊಂಡು ಬರುವೆ ಎಂದು ಭಾನುವಾರ ದಾವಣಗೆರೆಗೆ ತೆರಳಿದ್ದರು. ಆದರೆ ಪತ್ನಿ ವಾಪ ಸ್ ಬರುವಷ್ಟರಲ್ಲಿ ಮನನೊಂದು ಮಾಲತೇಶ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ರೈತ ಬಲಿ:
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಂಟೇನಹಳ್ಳಿ ಗ್ರಾಮದ ಕೆ.ಡಿ ರವಿ (50) ನೇಣಿಗೆ ಶರಣಾದ ರೈತ. ಇವರು ವಿವಿಧ ಸಂಘ ಹಾಗೂ ಮೈಕ್ರೋ ಫೈನಾನ್ಸ್‌ನಲ್ಲಿ ಒಟ್ಟು 49 ಲಕ್ಷ ಸಾಲ ಪಡೆದಿದ್ದರು. ಸಾಲ ಮರು ಪಾವತಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಗೂ ಕಿರುಕುಳ ಹೆಚ್ಚಿದ ಕಾರಣ ಮನೆಯ ಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ.
ಮೈಕ್ರೋ ಫೈನಾನ್ಸ್‌ಗಳಿಂದ ಬಡವರಿಗೆ ತೊಂದರೆಯಾದರೇ ಸಹಿಸಲ್ಲ: ಸಚಿವ ತಂಗಡಗಿ
ಕಾರ್ಮಿಕ ನೇಣು:
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಕೂಲಿ ಕಾರ್ಮಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಗಿರೀಶ್ ಸ್ಪಂದನ, ಚೈತನ್ಯ ಫೈನಾನ್ಸ್ ಸೇರಿ ವಿವಿಧೆಡೆ ಕ4 ಲಕ್ಷ ಸಾಲ ಮಾಡಿದ್ದರು. ಕೋಟಕ್ ಮಹಿಂದ್ರ ಫೈನಾನ್ಸ್ ನಲ್ಲಿ ಟ್ರ್ಯಾಕ್ಟರ್‌ಖರೀದಿಸಿ 4 ಕಂತು ಕಟ್ಟಿದ್ದರು. ಬಳಿಕ ಸಾಲದ ಕಂತುಗಳನ್ನು ಸರಿಯಾಗಿ ಕಟ್ಟ ದೇ ಇದ್ದುದ್ದರಿಂದ ಫೈನಾನ್ಸ್ ಕಂಪನಿ ಟ್ರ್ಯಾಕ್ಟ ರ್‌ತೆಗೆದುಕೊಂಡು ಹೋಗಿತ್ತು. ಸಾಲದಿಂದ ಬೇಸತ್ತು ಭಾನುವಾರ ರಾತ್ರಿ ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡಿದ್ದಾರೆ.
ಬಳ್ಳಾರೀಲಿ ಮಹಿಳೆ ಆತ್ಮಹತ್ಯೆಗೆ ಯತ್ನ
ಕೊಟ್ಟೂರು(ಬಳ್ಳಾರಿ): ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದೆ. ಬಳ್ಳಾರಿ ಕ್ಯಾಂಪಿನ ನಿವಾಸಿ ಆಫ್ರಿನ್ ಆತ್ಮಹತ್ಯೆಗೆ ಯತ್ನಿಸಿದವರು. ಅವರನ್ನು ಆಸತ್ರೆಗೆ ದಾಖಲಾಗಿದೆ. ಮಹಿಳೆಯು ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 53 ಲಕ್ಷ ಸಾಲ ಪಡೆದಿದ್ದರು. ಈಗಾಗಲೇ ಕ2 ಲಕ್ಷ ಸಾಲ ಮರು ಪಾವತಿ ಮಾಡಿದ್ದಾರೆ. ಉಳಿದ ಹಣಕ್ಕಾಗಿ ಸಂಸ್ಥೆಯವರು ಒತ್ತಡ ತಂದಿದ್ದರು. ಹಾಗಾಗಿ ಜಿರಲೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
