*   500 ಮುಖಬೆಲೆಯ ಖೋಟಾ ನೋಟು, ಕಲರ್‌ ಪ್ರಿಂಡರ್‌, ಲ್ಯಾಪ್‌ಟಾಪ್‌ ಇತ್ಯಾದಿ ಜಪ್ತಿ*  ತಲೆಮರೆಸಿಕೊಂಡಿದ್ದ ಅಫೈಲ್‌*  ಆರೋಪಿ ಅಫೈಲ್‌ ಮಡಗಾಂವ್‌ನಲ್ಲಿ ಬಂಧನ

ಕಾರವಾರ(ಮೇ.20): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕೆಲವು ದಿನದ ಹಿಂದೆ ನಕಲಿ ಅಸಲಿ ನೋಟುಗಳ ಅದಲಿ ಬದಲಿಯಲ್ಲಿ ತೊಡಗಿದ್ದ ಪ್ರಮುಖ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಗರದ ಕೊಡಿಬಾಗದ ಮುಸ್ತಾಕ್‌ ಹಸನ್‌ ಬೇಗ್‌(43), ಅಫೈಲ್‌ ಹಸನ್‌ ಬೇಗ್‌(45), ಸೀಮಾ ಮುಸ್ತಾಕ್‌(40), ಅಸ್ಮಾ ಅಸ್ಟಲ್‌ ಬೇಗ್‌ (42) ಅವರನ್ನು ಗೋವಾ ರಾಜ್ಯದ ಮಡಗಾಂವನಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ಜತೆಗೆ 500 ಮುಖಬೆಲೆಯ ಖೋಟಾ ನೋಟು, ಕಲರ್‌ ಪ್ರಿಂಡರ್‌, ಲ್ಯಾಪ್‌ಟಾಪ್‌ ಇತ್ಯಾದಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಪ್ರಾಪ್ತೆಯ 'ಡಿಜಿಟಲ್ ರೇಪ್', 81 ವರ್ಷದ ವರ್ಣಚಿತ್ರಕಾರ ಅರೆಸ್ಟ್‌!

ಘಟನೆ ವಿವರ:

ಮೇ 5ರಂದು .500 ಮುಖಬೆಲೆಯ ಅಸಲಿ ಮತ್ತು ನಕಲಿ ನೋಟನ್ನು ಅದಲಿ ಬದಲಿ ಮಾಡಿಕೊಳ್ಳುತ್ತಿದ್ದ ವೇಳೆ ಅಂಕೋಲಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪ್ರವೀಣ ನಾಯರ್‌ ಕೋಡಿಬಾಗ, ಲೋಯ್ಡ್‌ ಲಾರೆನ್ಸ್‌ ಸ್ಟೇವಿಸ್‌ ಮಡಗಾಂವ್‌, ಲಾರ್ಸನ್‌ ಲೂಯಿಸ್‌ ಸಿಲ್ವಾಪತ್ರೋರಾ, ಕನೋಯ ಫನಾಂರ್‍ಡಿಸ್‌ ಅವರನ್ನು ಬಂಧಿಸಲಾಗಿತ್ತು.

ಖೋಟಾನೋಟು ಚಲಾವಣೆಯ ಪ್ರಮುಖರಾಗಿದ್ದ ಮುಸ್ತಾಕ್‌, ಅಫೈಲ್‌ ತಪ್ಪಿಸಿಕೊಂಡಿದ್ದರು. ಇವರ ಬಂಧನಕ್ಕೆ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಮಡಂಗಾವನಲ್ಲಿ ಬಂಧಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 400 ಕೆಜಿ ದನದ ಮಾಂಸ ವಶ

ಭಟ್ಕಳ: ಟೊಯೊಟಾ ಕಾರಿನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸ್‌ ಸುಮಾರು 400 ಕೆಜಿ ತೂಕದ ದನದ ಮಾಂಸವನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ.
ಜಾಲಿಯ ಬೆಂಡೆಕಾನ್‌ ನಿವಾಸಿ ಸೈಯದ್‌ ಮೊಹಿದ್ದೀನ್‌ ಅಲಿ ಸವಣೂರು ಬಂಧಿತ ಆರೋಪಿ. ಮೂವರು ತಪ್ಪಿಸಿಕೊಂಡಿದ್ದಾರೆ.

ಓರ್ವ ವಿದ್ಯಾರ್ಥಿಯಿಂದ ಆ್ಯಸಿಡ್ ನಾಗ ಪತ್ತೆ, ಇಲ್ಲಿದೆ ಬಂಧನದ ರೋಚಕ ಘಟನೆ

ಐಷಾರಾಮಿ ಟೊಯೊಟಾ ಕಾರಿನಲ್ಲಿ 400 ಕೆ.ಜಿ.ಯಷ್ಟುದನದ ಮಾಂಸವನ್ನು ಸಾಗಾಟ ಮಾಡಲಾಗುತ್ತಿತ್ತು. ಇವರ ಕಾರು ವೇಗವಾಗಿ ಬರುತ್ತಿರುವುದನ್ನು ಕಂಡು ಶಿರಾಲಿಯ ಚೆಕ್‌ ಪೋಸ್ಟ್‌ನಲ್ಲಿ ಗ್ರಾಮೀಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರತ್ನಾ ಕೆ.ಎಸ್‌. ಹಾಗೂ ಸಿಬ್ಬಂದಿ ನಿಲ್ಲಿಸಿ ಪರಿಶೀಲಿಸಿದರು. ಈ ವೇಳೆ ಕಾರಿನ ಡಿಕ್ಕಿಯಲ್ಲಿ ದನದ ಮಾಂಸ ಇರುವುದು ಕಂಡು ಬಂದಿದೆ.

ಆರೋಪಿಯನ್ನ ಬಂಧಿಸಿ, ವಾಹನ ಸ್ವಾಧೀನಪಡಿಸಿಕೊಂಡ ಪೊಲೀಸರು ಸುಮಾರು 80 ಸಾವಿರ ಮೌಲ್ಯದ ದನದ ಮಾಂಸ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌.ಪಿ. ಸುಮನ್‌ ಪೆನ್ನೇಕರ್‌, ಹೆಚ್ಚುವರಿ ಎಸ್‌ಪಿ., ಡಿ.ವೈ.ಎಸ್‌.ಪಿ. ಹಾಗೂ ಸಿ.ಪಿ.ಐ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮೀಣ ಸಬ್‌ ಇನ್ಸ್‌ಸ್ಪೆಕ್ಟರ್‌ ರತ್ನಾ ಎಸ್‌.ಕೆ. ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.