ಬೆಂಗಳೂರು(ಜ.  06)  ವಂಚಕ  ಯುವರಾಜ್ ನಿಂದ  ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪಗಳಿಗೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ರಾಧಿಕಾ, ಸ್ವಾಮಿ ಅಲಿಯಾಸ್ ಯುವರಾಜ್  ನನಗೆ 17 ವರ್ಷದ ಪರಿಚಯ, ತಂದೆಯ ಗೆಳೆಯ, ಜ್ಯೋತಿಷ್ಯ ಹೇಳ್ತಿದ್ರು. ಅವರು ಹೇಳಿದ್ದು‌ನಿಜ ಆಗ್ತಿತ್ತು. ಯುವರಾಜ್ ಅವರ ಪ್ರೋಡಕ್ಷನ್ ಹೌಸ್ ಇದೆ. ಐತಿಹಾಸಿಕ ಸಿನಿಮಾ ಮಾಡಲು ಮಾತುಕತೆ ನಡೆದಿತ್ತು. ನಮ್ಮ ತಂದೆ ವರ್ಷದಲ್ಲಿ ಸಾವನ್ನಪ್ಪುತ್ತಾರೆ ಅಂದಿದಿದ್ದರು. ಅದೇ ರೀತಿ ಆಯ್ತು ಎಂದರು.

ಕಳ್ಳ ಸ್ವಾಮಿಗೂ ರಾಧಿಕಾಗೂ ಏನು ನಂಟು?

ದೆಹಲಿಯಲ್ಲಿ ನಾನು ಇದ್ದಾಗ ಕರೆ ಮಾಡಿ ತಾಯಿ ಮಾತನಾಡಿಸಲು ಹೇಳಿದ್ದರು. ಸಿನಿಮಾ ವಿಚಾರವಾಗಿ 15 ಲಕ್ಷ  ಹಣ ಹಾಕಿದ್ದರು.  ನನ್ನ ಅಣ್ಣನಿಗೂ ವ್ಯವಹಾರಕ್ಕೂ ಸಂಬಂಧವಿಲ್ಲ.  ತುಂಬಾ ವಿಷಯ ಮಾತಾಡ್ತಾ ಇದ್ರು ಯುವರಾಜ್.  ತುಂಬಾ ರಾಜಕಾರಣಿಗಳನ್ನ ಭೇಟಿ ಮಾಡಿದ್ದೇನೆ ಎನ್ನುತ್ತಿದ್ದರು ಸಿನಿಮಾ ಬಿಟ್ಟು ಬೇರೆ ಯಾವುದೇ ಕೆಲಸ ಮಾಡಿಲ್ಲ. ನಿರ್ಮಾಪಕರ ಮೂಲಕ ಹಣ ಕೊಡಿಸಿದ್ದಾರೆ ಎಂದರು.

"

ಡಿಸೆಂಬರ್ ನಲ್ಲಿ ನಿಮ್ಮ ಸಮಯ ಸರಿಯಿಲ್ಲಾ ಅಂತ ಹೇಳಿದ್ರು. ಫೆಬ್ರವರಿಯಿಂದ ಒಳ್ಳೆಯ ಸಮಯ ಬರುತ್ತೆ ಅಂದಿದ್ರು ಆದ್ರೆ ಇಂತಹ ಸಮಯ ಬರುತ್ತೆ ಅಂತ ಗೊತ್ತಿರಲಿಲ್ಲ.  ನನ್ನ ಖಾತೆಗೆ ಹಣ  ಹಾಕಿದ ನಿರ್ಮಾಪಕ ಯಾರೂ ಅಂತಾನೂ ಗೊತ್ತಿಲ್ಲ. ಸಿನಿಮಾ ಬಗ್ಗೆ ಅಗ್ರಿಮೆಂಟ್ ಮಾಡಿಕೊಂಡಿರಲಿಲ್ಲ ಒಟ್ಟು 75 ಲಕ್ಷ ಬಂದಿದೆ ಅದರಲ್ಲಿ  ಸ್ವಾಮಿ ಅಕೌಂಟ್ ನಿಂದ 12 ಲಕ್ಷ ಬಂದಿದೆ. ಉಳಿದ  60  ಲಕ್ಷ ಯಾರಿಂದ ಬಂದಿದೆ ಎಂತಲೂ ಗೊತ್ತಿಲ್ಲ ಎಂದರು.

ಒಟ್ಟಿನಲ್ಲಿ ರಾಧಿಕಾ ಕುಮಾರಸ್ವಾಮಿ ಹಣ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದರೂ ಹಲವು ಅನುಮಾನಗಳಿಗೆ ಮಾತ್ರ ತೆರೆ ಬೀಳಲಿಲ್ಲ. 

"

"

"

"