ನಟ ದರ್ಶನ್‌ಗೆ ಶುರುವಾಯ್ತು ಶೇಕ್; ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಬಂದ ವಕೀಲರ ಹಿನ್ನೆಲೆ ಕೇಳಿ ಶಾಕ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ವಾದ ಮಂಡಿಸಲು ಸರ್ಕಾರದಿಂದ ಪ್ರಸನ್ನ ಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನಿಯೋಜನೆ ಮಾಡಲಾಗಿದೆ.  ಆದರೆ, ಪ್ರಸನ್ನ ಕುಮಾರ್ ಹಿನ್ನೆಲೆ ತಿಳಿದು ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ನಡುಕ ಶುರುವಾಗಿದೆ.

Actor Darshan started shaking Govt appointed public Prosecutor to plead Renuka Swamy case sat

ಬೆಂಗಳೂರು (ಜೂ.15): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಈಗ ನಡುಕ ಶುರುವಾಗಿದೆ. ಇದಕ್ಕೆ ಕಾರಣ ಹತ್ಯೆಗೀಡಾದ ರೇಣುಕಾಸ್ವಾಮಿಗೆ ನ್ಯಾಯ ಒದಗಿಸಲು ವಿಶೇಷ ಅಭಿಯೋಜಕರನ್ನಾಗಿ ಪಿ.ಪ್ರಸನ್ನ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಒದಗಿಸುವಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತೀವ್ರ ಕಟ್ಟೆಚ್ಚರವಹಿಸಿ ಕೊಲೆ ಪ್ರಕರಣದ 18 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆದರೆ, ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಹಲವು ವಕೀಲರು ಬಂದು ಅವರ ಪರವಾಗಿ ವಾದ ಮಂಡಿಸುತ್ತಾ ಪೊಲೀಸ್ ಕಸ್ಟಡಿಗೆ 15 ದಿನ ಒಪ್ಪಿಸುವುದನ್ನು ತಡೆದಿದ್ದರು. ಜೊತೆಗೆ, ಪ್ರತಿನಿತ್ಯ ವಕೀಲರು ಭೇಟಿ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹತ್ಯೆಗೀಡಾದ ರೇಣುಕಾಸ್ವಾಮಿ ಪರವಾಗಿ ವಾದ ಮಂಡಿಸಲು ಯಾವೊಬ್ಬ ವಕೀಲರೂ ಇರಲಿಲ್ಲ. ಆದರೆ, ಹತ್ಯೆಗೀಡಾದ ರೇಣುಕಾಸ್ವಾಮಿಗೆ ನ್ಯಾಯ ಕೊಡಿಸಲು ಮುಂದಾಗಿರುವ ಸರ್ಕಾರ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ವಾದ ಮಂಡಿಸಲು ವಿಶೇಷ ಅಭೀಯೋಜಕರನ್ನು ನೇಮಿಸಿದೆ.

ಕೊಲೆ ಆರೋಪಿ ನಟ ದರ್ಶನ್ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ; ನಟಿ ರಮ್ಯಾ

ಸರ್ಕಾರದಿಂದ ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ವಾದ ಮಂಡಿಸಲು ಪಿ. ಪ್ರಸನ್ನ ಕುಮಾರ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನಿಯೋಜಿಸಲಾಗಿದೆ. ಇನ್ನು ಪ್ರಸನ್ನ ಕುಮಾರ್ ಸಾಮಾನ್ಯ ವಕೀಲರೇನೂ ಅಲ್ಲ. ಪ್ರಸ್ತುತವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ ಎಸ್‌ಪಿಪಿ ಆಗಿ ಸರ್ಕಾರ ನೇಮಕ ಮಾಡಲಾಗಿದ್ದು, ಇದು ಕೊಲೆ ಆರೋಪಿ ದರ್ಶನ್ ಹಾಗೂ ಗ್ಯಾಂಗ್‌ಗೆ ನಡುಕ ಹುಟ್ಟಿಸುವಂತೆ ಮಾಡಿದೆ.

ರಾಜಕೀಯವಾಗಿ ಮಣಿಸಲು ನಮ್ಮಪ್ಪನ ಮೇಲೆ ಪೋಕ್ಸೋ ಕೇಸ್ ಆರೋಪ ಹೊರಿಸಿದ್ದಾರೆ; ಬಿ.ವೈ. ರಾಘವೇಂದ್ರ

ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸರೆಂಡರ್ ಆಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡಿದಾಗ ನಟ ದರ್ಶನ್, ಆತನ 2ನೇ ಹೆಂಡತಿ ಪವಿತ್ರಾಗೌಡ ಸೇರಿ ಒಟ್ಟು 19 ಆರೋಪಿಗಳು ಕೊಲೆಯಲ್ಲಿ ಭಾಗಿ ಆಗಿರುವುದು ಪತ್ತೆಯಾಗಿದೆ. ಈ ಪೈಕಿ ಒಟ್ಟು 18 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಆದರೆ, ನಟ ದರ್ಶನ್ ಬಂಧನವಾದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಒಟ್ಟು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದಿಗೆ 6 ದಿನಗಳ ಕಾಲಾವಕಾಶ ಮುಕ್ತಾಯವಾಗುತ್ತಿದ್ದು, ಇಂದು ಸಂಜೆಯೊಳಗೆ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ನಂತರ, ಕೋರ್ಟ್ ವಿಚಾರಣೆಯಲ್ಲಿ ಜೈಲಾ ಅಥವಾ ಬೇಲಾ ಎಂಬುದು ತಿಳಿಯಲಿದೆ.

Latest Videos
Follow Us:
Download App:
  • android
  • ios