* ಬೀದಿ ನಾಯಿ ಮೇಲೆ ಆಸಿಡ್ ಎರಚಿದ ದುರುಳರು* ಬೆಂಗಳೂರಿನಲ್ಲೊಂದು ಪ್ರಾಣಿ ಹಿಂಸೆ ಪ್ರಕರಣ* ಆರೋಪಿಗಳ ಮೇಲೆ ದೂರು ದಾಖಲು* ಪ್ರಶ್ನೆ ಮಾಡಿದ ಹಿರಿಯ ನಾಗರಿಕರಿಕರಿಗೆ ಅವಾಜ್

ಬೆಂಗಳೂರು(ಮೇ 10) ಈ ಕ್ರೂರಿಗಳಿಗೆ ಯಾವ ಶಿಕ್ಷೆ ಆದರು ಕಡಿಮೆಯೇ. ಬೀದಿ ನಾಯಿ (stray dog) ಮೇಲೆ, ಮೂಕ ಪ್ರಾಣೀ ಮೇಲೆ ಆಸಿಡ್ ದಾಳಿ ಮಾಡಿದ್ದಾರೆ.

ಬೀದಿ ನಾಯಿ ಮೇಲೆ ಆಸಿಡ್ (Acid attack) ಎರಚಿದ್ದು ಅಲ್ಲದೇ ವೃದ್ಧೆಗೆ ಬೆದರಿಕೆ ಹಾಕಿದ್ದಾರೆ. ಶ್ವಾನ ರಕ್ಷಣಗೆ ಹೋದ ಹಿರಿಯ ನಾಗರಿಕರನ್ನು ಬೆದರಿಸಿದ್ದು ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇವರು ಒಂದು ತರಹ ಹುಚ್ಚು ಜನರೇ ಸರಿ. ಅಮಲಿನಲ್ಲಿ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುವ ಪುಂಡರು ತಮ್ಮನ್ನು ನೋಡಿ ಬೊಗಳುವ ಬೀದಿ ನಾಯಿಗಳ ಶಬ್ದವನ್ನು ಎಂಜಾಯ್ ಮಾಡ್ತಿದ್ದರಂತೆ! ಪೊಲೀಸರು ತನಿಖೆ ವೇಳೆ ಈ ವಿಚಾರ ಪತ್ತೆ ಮಾಡಿದ್ದಾರೆ .

ಮರಳಿ ಸಿಕ್ಕ ಬೀದಿ ನಾಯಿಗೆ ರಾಜಮರ್ಯಾದೆ... ಆರತಿ ಎತ್ತಿ ಸ್ವಾಗತಿಸಿದ ಜನ

ಮಾರ್ಚ್ 4 ರಂದು ನಾಲ್ಕರಿಂದ ಐದು ಜನ ಸೇರಿ ಬೀದಿ ನಾಯಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ನಾಯಿ ಮೇಲೆ ಪೆಟ್ರೋಲ್ ಮತ್ತು ಆಸಿಡ್ ಸುರಿದಿದ್ದಾರೆ.

ಇದೆಲ್ಲವನ್ನು ಗಮನಿಸಿದ ಐವತ್ತು ವರ್ಷದ ಮಹಿಳೆ ಮರುದಿನ ಹೋಗಿ ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಶ್ವಾನವನ್ನು ಅರ್ಧ ಜೀವ ಮಾಡಿದ್ದೇವೆ.. ಏನಾದರೂ ಮಾಡಿದರೆ ನಿಮ್ಮನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಶ್ವಾನವನ್ನು ಆರೈಕೆ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಐಪಿಸಿ ಸೆಕ್ಷನ್ 34 (ಹಲವು ವ್ಯಕ್ತಿಗಳಿಂದ ಮಾಡಿದ ಕ್ರಿಮಿನಲ್ ಆಕ್ಟ್), 428 (ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷಪೂರಿತಗೊಳಿಸುವುದು, ಅಂಗವಿಕಲಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ಮೂಲಕ ದುಷ್ಕೃತ್ಯ ಎಸಗುವವರು), 429 (ಜಾನುವಾರುಗಳನ್ನು ಕೊಂದು ಅಥವಾ ಊನಗೊಳಿಸುವುದು ಇತ್ಯಾದಿ) ಮತ್ತು 354 (ಯಾವುದಾದರೂ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಬೀದಿ ನಾಯಿ ಕಂಡರೆ ಆಗದ ಉದ್ಯಮಿ ಮೊಮ್ಮಗ: ಬೀದಿ ನಾಯಿಗಳ ಮೇಲೆ ಕಾರು ಹತ್ತಿಸುವುದನ್ನೇ ಈ ಹಣವಂತ ಹವ್ಯಾಸ ಮಾಡಿಕೊಂಡಿದ್ದ. ಈತನ ಮೇಲೆ ಎರಡು ಪ್ರಕರಣ ದಾಖಲಾಗಿತ್ತು. ಹೌದು ನಾವು ಹೇಳಿದ್ದು ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ ಬಗ್ಗೆ. 

ಜಯನಗರ (Jayanagar) ಮೊದಲ ಬ್ಲಾಕ್ ನಲ್ಲಿ ಬೀದಿ ನಾಯಿಗಳ ಮೇಲೆ ಹಲ್ಲೆ ಮತ್ತು ಕಾರು ಹತ್ತಿಸಲು ಯತ್ನಿಸಿರುವ ಆರೋಪ ಕೇಳಿಬಂದಿತ್ತು. ಇದನ್ನ ಪ್ರಶ್ನೆ ಮಾಡಿದ ಸ್ಥಳೀಯರ ಮೇಲೂ ಕಾರು ಹತ್ತಿಸಲು ಮುಂದಾಗಿದ್ದ.

ರಸ್ತೆ ಬದಿ ಮಲಗಿದ್ದ ಬೀದಿ ನಾಯಿ (Dog) ಮೇಲೆ ಕಾರು ಹತ್ತಿಸಿ ಸಾಯಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಉದ್ಯಮಿ ದಿವಂಗತ ಆದಿಕೇಶವಲು (Adikesavalu ) ಅವರ ಮೊಮ್ಮಗ ಆದಿಯನ್ನು ಬಂಧಿಸಿದ್ದ ಸಿದ್ದಾಪುರ ಠಾಣೆ (Bengaluru Police) ಪೊಲೀಸರು ವಿಚಾರಣೆ ನಡೆಸಿ ಠಾಣಾ ಬೇಲ್‌ ಮೇಲೆ ಬಿಡುಗಡೆ ಮಾಡಿದ್ದರು. ಶ್ವಾನ ಸಾವನ್ನಪ್ಪಿದ್ದು ಅಂತ್ಯ ಕ್ರಿಯೆಯಲ್ಲಿ ಮೋಹಕ ತಾರೆ ರಮ್ಯಾ ಪಾಲ್ಗೊಂಡಿದ್ದು ಕ್ರಮಕ್ಕೆ ಆಗ್ರಹಿಸಿದ್ದರು. ಶ್ವಾನದ ಮೇಲೆ ಕಾರು ಹತ್ತಿಸಿದ್ದು ಗೊತ್ತಾಗಿಲ್ಲ. ನಾನು ಆಗ ಮೊಬೈಲ್ ನೋಡುತ್ತಿದ್ದೆ ಎಂದು ಸಲ್ಲದ ಕತೆ ಹೇಳಿದ್ದ. 

ಪ್ರಾಣಿ ಹಿಂಸೆ ಪ್ರಕರಣಗಳು ವರದಿಯಾದಾಗ ಮನ ಮಿಡಿಯುವ ಸಮುದಾಯವೂ ದೊಡ್ಡದಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಒಂದಷ್ಟು ದಂಡ ಕಟ್ಟಿ ಪಾರಾಗಬಹುದು ಎಂಬ ನಿಯಮ ಬದಲಾವಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಮಾನವರ ಹಕ್ಕು ಸಂರಕ್ಷಣೆ ರೀತಿ ಪ್ರಾಣಿಗಳ ಹಕ್ಕು ಸಂರಕ್ಷಣೆಯೂ ನಿಜವಾದ ಮನುಕುಲದ ಆದ್ಯತೆಯಾಗಬೇಕು.