20 ವರ್ಷ ಕಾರಾಗೃಹ ವಾಸ ಹಾಗೂ 25,000 ದಂಡ ವಿಧಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ ವಿಶೇಷ ಪೋಕ್ಸೋ ನ್ಯಾಯಾಲಯ 

ವಿಜಯಪುರ(ನ.25):  ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಾರಾಗೃಹ ವಾಸ ಹಾಗೂ 25,000 ದಂಡ ವಿಧಿಸಿ ವಿಶೇಷ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿಜಯಪುರದ ಸಾಧಿಕ ಉರ್ಫ ರಜಾಕ್‌ ಸಲೀಂ ಇನಾಮದಾರ ಶಿಕ್ಷೆಗೀಡಾದ ಆರೋಪಿ. ವಿಜಯಪುರ ನಗರದಲ್ಲಿ 23-3-2020ರಲ್ಲಿ ಗೆಳತಿ ಮನೆಗೆ ಹೊರಟಿದ್ದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಅಪ್ರಾಪ್ತರು ಗೆಳತಿ ಮನೆಗೆ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ ಸಾಧಿಕ ಇನಾಮದಾರ ಎಂಬುವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಸಾಧಿಕ ಹಾಗೂ ಇತರ ಇಬ್ಬರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. 

Crime News: ಆಸ್ಪತ್ರೆಯಲ್ಲಿ ನರ್ಸ್‌ ಕಟ್ಟಿಹಾಕಿ ಗ್ಯಾಂಗ್‌ ರೇಪ್‌; ಅಪ್ರಾಪ್ತ ಸೇರಿ ಮೂವರ ಬಂಧನ

ಈ ಬಗ್ಗೆ ವಿಜಯಪುರ ಮಹಿಳಾ ಪೊಲೀಸ್‌ ಠಾಣೆ ಪಿಎಸ್‌ಐ ಶಕೀಲಾ ಪಿಂಜಾರ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ವಿಶೇಷ ಪೋಕ್ಸೋ ನ್ಯಾಯಾಲಯದ ಪ್ರಾಪ್ತ ವಯಸ್ಸಿನ ಆರೋಪಿ ಸಾಧಿಕ ಉರ್ಫ ರಜಾಕ ಸಲೀಂ ಇನಾಮದಾರ ಮೇಲೆ ಸಲ್ಲಿಸಿದ ದೋಷಾರೋಪಣೆ ಪಟ್ಟಿಸಾಕ್ಷಿ, ಪುರಾವೆಗಳನ್ನು ಪರಿಶೀಲಿಸಿದರು. ಆಗ ಆರೋಪಿ ಆಪರಾಧ ಸಾಬೀಕತಾಗಿದ್ದರಿಂದಾಗಿ ಕವಿಶೇಷ ಪೋಕ್ಸೋ ನ್ಯಾಲಾಯದ ನ್ಯಾಯಾಧೀಶರಾದ ರಾಮ ನಾಯಕ ಅವರು ಆರೋಪಿ ಸಾಧಿಕನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 25000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಪರಾಧಿಗಳ ಬಗ್ಗೆ ಪ್ರತ್ಯೇಕ ದೋಷಾರೋಪಣೆ ಪತ್ರವನ್ನು ಬಾಲಾಪರಾಧಿ ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ವಿ.ಜಿ. ಹಗರಗುಂಡ ಅವರು ವಕಾಲತ್ತು ವಹಿಸಿದ್ದರು.