Asianet Suvarna News Asianet Suvarna News

ಬೆಂಗಳೂರಿನಲ್ಲಿ ಲಾಂಗ್ ತೋರಿಸಿ ಪುಂಡರ ದಾಂಧಲೆ: ಮಾರಕಾಸ್ತ್ರ ತೋರಿಸಿ ಸುಲಿಗೆ!

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ಮಿತಿ ಮೀರಿದೆ. ರಾಜರೋಷವಾಗಿ ಅಂಗಡಿಗಳಿಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಲಾಗ್ತಿದೆ. ಈ ನಡುವೆ ಏರಿಯಾಗಳಲ್ಲಿ ಜನ ಓಡಾಡೋಕು ಭಯ ಪಡುವ ಪರಿಸ್ಥಿತಿ ಉಂಟಾಗಿದೆ. 

accused extortion in shops at bengaluru gvd
Author
First Published Nov 22, 2023, 10:43 PM IST

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ನ.22): ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ಮಿತಿ ಮೀರಿದೆ. ರಾಜರೋಷವಾಗಿ ಅಂಗಡಿಗಳಿಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಲಾಗ್ತಿದೆ. ಈ ನಡುವೆ ಏರಿಯಾಗಳಲ್ಲಿ ಜನ ಓಡಾಡೋಕು ಭಯ ಪಡುವ ಪರಿಸ್ಥಿತಿ ಉಂಟಾಗಿದೆ. ಹೀಗೆ ಮತ್ತೊಂದ್ಕಡೆ ಅಂಗಡಿ ವಸ್ತುಗಳನ್ನ ಪುಡಿಗಡ್ತಿರೋ ದೃಶ್ಯವನ್ನೊಮ್ಮೆ ನೋಡಿ ಅದಲ್ಲದೆ ಲಾಂಗ್ ಹಿಡಿದು ಮನಬಂದಂತೆ ಅಟ್ಯಾಕ್ ಮಾಡುವ ದೃಶ್ಯ. ಬಾರ್ ಒಳಗೆ ನುಗ್ಗಿ ಲಾಂಗ್ ತೋರಿಸಿ ಹಣ ತೆಗೆದುಕೊಳ್ತಿರೋ ಆಸಾಮಿ. 

ಈ ನಡುವೆ ಎದ್ನೋ ಬಿದ್ನೋ ಅಂತ ಭಯದಿಂದ ಓಡ್ತಿರೋ ಮಂದಿ. ಅಷ್ಟಕ್ಕೂ ಈ ದೃಶ್ಯ ಕಂಡುಬಂದಿದ್ದು ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರೋಡ್ ಬಳಿ. ನಿನ್ನೆ ಮಧ್ಯರಾತ್ರಿ ಸಮಯ ಆರ್.ಟಿ.ನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಗಳಿಗೆ ನುಗ್ಗಿದ ಪುಂಡರ ಗ್ಯಾಂಗ್ ಮಾರಕಾಸ್ತ್ರ ತೋರಿಸಿ ಸರಣಿ ಹಣ ಸುಲಿಗೆ ಮಾಡಿದ್ದಾರೆ..ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಿನ್ನೂರು ಮುಖ್ಯರಸ್ತೆಯಲ್ಲಿ ಬಾರ್ ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ 40 ಸಾವಿರ  ಸುಲಿಗೆ ಮಾಡಿದ್ದಾರೆ. ಬಳಿಕ ಅದೇ ದಾರಿಯಲ್ಲಿ‌ ಬರುವಾಗ ಬಿಡಾ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಬೆದರಿಸಿದ್ದಾರೆ.‌ 

ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಯುವಕ ಆತ್ಮಹತ್ಯೆ!

ಇದಕ್ಕೆ‌ ನಿರಾಕರಿಸಿದಕ್ಕೆ ಆತನ ಮೇಲೆ‌ ಹಲ್ಲೆ‌ ಮಾಡಿದ್ದಾರೆ. ಮೋದಿ ರೋಡ್ ನಲ್ಲಿ ಟೀ ಇಲ್ಲ‌ ಅಂದಿದಕ್ಕೆ‌ ಅಂಗಡಿ ಗಾಜು  ಪುಡಿ-ಪುಡಿ ಮಾಡಿದ್ದಾರೆ. ಡಿ.ಜೆ.ಹಳ್ಳಿ‌ ಠಾಣೆ ರೌಡಿ ಇಮ್ರಾನ್ ಹಾಗೂ ಆತನ ಸಹಚರರು ಕೃತ್ಯ ಎಸಗಿರುವುದು ಗೊತ್ತಾಗಿದೆ. ಆರೋಪಿಗಳು ಪುಂಡಾಟ ಮೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರ್.ಟಿ.ನಗರ ಎರಡು ಹಾಗೂ ಡಿ.ಜೆ.ಹಳ್ಳಿಯಲ್ಲಿ ಒಂದು ಸೇರಿದಂತೆ‌ ಪ್ರತ್ಯೇಕ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು ಹುಡುಕಾಟ ನಡೆಸಲಾಗ್ತಿದೆ.

Follow Us:
Download App:
  • android
  • ios