ಹೊಸಕೋಟೆ, ಸಾತನೂರು, ಮುಳಬಾಗಿಲು, ನಂದಿ, ಚಿಂತಾಮಣಿ, ಆಂಧ್ರ ಪ್ರದೇಶದ ವಿಕೋಟಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಟ್ರಾಕ್ಟರ್‌ ಕಳವು ಪ್ರಕರಣಗಳಿಗೆ ಸಂಭಂದಪಟ್ಟ ಒಟ್ಟು 11 ಟ್ರಾಕ್ಟರ್‌ ಹಾಗೂ ಟ್ರಾಲಿಗಳನ್ನು ಹೊಸಕೋಟೆ ವಶಪಡಿಸಿಕೊಂಡ ಪೊಲೀಸರು 

ಹೊಸಕೋಟೆ(ಆ.02):  ಭರ್ಜರಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು ರಾಜ್ಯ ಹಾಗೂ ಅಂತರ್‌ ರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ಕೋಟ್ಯಂತರ ಮೌಲ್ಯದ ವಾಹನ, ಮಾದಕ ವಸ್ತು ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಟ್ರಾಕ್ಟರ್‌, ಟ್ರಾಲಿ ವಶ ಇಬ್ಬರ ಬಂಧನ:

ನಗರದ ಕೆಇಬಿ ವೃತ್ತದಲ್ಲಿ ನಿಲ್ಲಿಸಿದ್ದ ಟ್ಯಾಕ್ಟರ್‌ ಹಾಗೂ ಟ್ರಾಲಿಯನ್ನು ಕಳ್ಳತನಮಾಡಿ ಅದರ ಸ್ವರೂಪವನ್ನು ಬದಲಿಸಿ ಬೇರೆಯವರಿಗೆ ಮಾರಾಟ ಮಾಡಿದ್ದ ಕೋಲಾರ ಮೂಲದ ಆರೋಪಿಗಳಾದ ಶಿವಾನಂದ್‌(28) ಹಾಗೂ ಆನಂದ್‌ (30) ಇಬ್ಬರನ್ನು ಬಂಧಿಸಿ, ರಾಜ್ಯದ ಹೊಸಕೋಟೆ, ಸಾತನೂರು, ಮುಳಬಾಗಿಲು, ನಂದಿ, ಚಿಂತಾಮಣಿ, ಆಂಧ್ರ ಪ್ರದೇಶದ ವಿಕೋಟಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಟ್ರಾಕ್ಟರ್‌ ಕಳವು ಪ್ರಕರಣಗಳಿಗೆ ಸಂಭಂದಪಟ್ಟ ಒಟ್ಟು 11 ಟ್ರಾಕ್ಟರ್‌ ಹಾಗೂ ಟ್ರಾಲಿಗಳನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ: ಅಧಿಕಾರಿಗಳಿಗೇ ಖೆಡ್ಡಾ, ಅಕ್ರಮ ಬೈಕ್‌ಗಳಿಗೆ ಸಕ್ರಮ ಮುದ್ರೆ ಒತ್ತುತ್ತಿದ್ದ ಆರ್‌ಟಿಒ ಸಿಬ್ಬಂದಿ ಬಂಧನ

ಮಾದಕ ವಸ್ತು ವಶ:

ಹೊಸಕೋಟೆಯ ಆರೋಪಿ ಸುಹೇಲ್‌ ಅಹಮದ್‌(30) ಬಂಧಿಸಿ, ನಿಷೇಧಿ​ತ ಮಾದಕ ವಸ್ತುವಾದ 5 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌ 80 ಗ್ರಾಮ್‌, ಎರಡು ಕೇಜಿ ಗಾಂಜಾ 9 ಲಕ್ಷ ವೆಚ್ಚದ ಮೂರು ಕೆಟಿಎಂ ಬೈಕ್‌ ಹಾಗೂ ಒಂದು ಲಕ್ಷ ವೆಚ್ಚದ ಒಂದು ಟಿವಿಎಸ್‌ ಎನ್‌ಟಿಓ ಆರ್‌ಕ್ಯೂ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಈ ವ್ಯಕ್ತಿ ನೈಜೀರಿಯನ್‌ ಪ್ರಜೆಗಳ ಜೊತೆ ಸೇರಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದು, ಮಾದಕ ವಸ್ತು ಖರೀದಿಸಲು ಬರುವ ವ್ಯಸನಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಬೈಕ್‌ ಕಳ್ಳತನ ಮಾಡುತಿದ್ದರು ಎಂದು ತಿಳಿದು ಬಂದಿದೆ.

ಅಕ್ರಮ ಗ್ಯಾಸ್‌ ರಿಫಿಲ್ಲಿಂಗ್‌ ದಂಧೆ ಮಾಡುತಿದ್ದ ಇಬ್ಬರ ಬಂದನ:

ತಾಲೂಕಿನ ಕುರುಬರಹಳ್ಳಿ ಗ್ರಾಮದ ಹೊರವಲಯದ ಕೋಳಿ ಫಾರಮ್‌ನಲ್ಲಿ ಅಕ್ರಮವಾಗಿ ಸರ್ಕಾರಿ ಖಾಸಗಿ ಗ್ಯಾಸ್‌ ಸಿಲಿಂಡರ್‌ ಗಳಿಗೆ ರಿಫಿಲ್ಲಿಂಗ್‌ ಮಾಡುತಿದ್ದ ಬಿಹಾರ ಮೂಲದ ವಿಕ್ರಮ್‌(25) ಹಾಗೂ ಬೆಂಗಳೂರು ಮೂಲದ ಅಜರ್‌ ಪಾಷ (27)ನನ್ನು ಬಂಧಿಸಿ ಆರೋಪಿಗಳಿಂದ 8 ಲಕ್ಷ ಮೌಲ್ಯದ 462 ಗ್ಯಾಸ್‌ ಸಿಲಿಂಡರ್‌, ಎರಡು ವಿದ್ಯುತ್‌ ಚಾಲಿತ ಮೋಟಾರ್‌ ಪಂಪ್‌, ವಿದ್ಯುತ್‌ ಚಾಲಿತ ತೂಕದ ಯಂತ್ರ ಹಾಗೂ ಸಿಲಿಂಡರ್‌ ಸಾಗಿಸುತಿದ್ದ ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ.

ಮೈಸೂರು: 4 ರಾಜ್ಯಗಳಲ್ಲಿ ಕೈ ಚಳಕ ತೋರಿಸಿದ್ದ ಖರ್ತನಾಕ್‌ ಖದೀಮ ಅರೆಸ್ಟ್‌..!

ಮನೆಗಳ್ಳನ ಬಂಧನ, 125 ಗ್ರಾಮ್‌ ಚಿನ್ನ ವಶ:

ಮನೆಗಳಿಗೆ ಬೀಗ ಹಾಕಿರುವುದನ್ನು ಹಗಲು ಸಮಯದಲ್ಲಿ ಗಮನಿಸಿ ರಾತ್ರಿ ಕಳ್ಳತನ ಮಾಡುತಿದ್ದ ಕೋಲಾರ ಮೂಲದ ಪ್ರದೀಪ್‌ (32) ಎಂಬ ಕಳ್ಳನನ್ನು ಪೊಲೀಸರು ಬಂಧಿಸಿ ಆರೋಪಿಯಿಂದ 8 ಲಕ್ಷ ಮೌಲ್ಯದ 125 ಗ್ರಾಮ್‌ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಅ​ಧೀಕ್ಷಕ ಮಲ್ಲಿಕಾರ್ಜುನ್‌ ಬಾಲದಂಡಿ, ಅಪರ ಪೊಲೀಸ್‌ ಅ​ಧೀಕ್ಷಕ ಪುರುಶೋತ್ತಮ್‌, ಹೊಸಕೋಟೆ ಉಪ ವಿಭಾಗದ ಡಿವೈಎÓ ಪಿ ಶಂಕರೇಗೌಡ ಅಣ್ಣಪ್ಪ ಸಾಹೇಬ್‌ ಪಾಟೀಲ್‌ ರವರ ಮಾರ್ಗದರ್ಶನದಲ್ಲಿ ಹೊಸಕೋಟೆ ಠಾಣೆಯ ಆರಕ್ಷಕ ನಿರೀಕ್ಷಕ ಬಿ.ಎಸ್‌ ಅಶೋಕ್‌ ರವರ ನೇತೃತ್ವದಲ್ಲಿ ಸಿಬ್ಬಂದಿಗಳದ ನಾಗರಾಜ್‌, ರಮೇಶ್‌, ಪ್ರಕಾಶ್‌ ಬಾಬು, ದತ್ತಾತ್ರೇಯ, ರಮೇಶ್‌, ಜೆರಾಲ್ಡ್‌, ಗೋಪಾಲ್‌ ಕೃಷ್ಣ ಮತಿವಣ್ಣನಾರಾಯಣ್‌, ರಮೇಶ್‌ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.