Asianet Suvarna News Asianet Suvarna News

ಸಿಂಧನೂರು: ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ, ಕಾಮುಕನ ಹೆಡೆಮುರಿಕಟ್ಟಿದ ಪೊಲೀಸರು

ಜ.25ರಂದು ರಾತ್ರಿ ವೇಳೆ ತಾಲೂಕಿನ ಅರಳಹಳ್ಳಿ ಕ್ರಾಸ್‌ನಲ್ಲಿರುವ ಮನೆಯ ಮುಂದೆ ಮಲಗಿದ್ದ ಶರಣಮ್ಮ ಬಸವರಾಜ ಅವರನ್ನು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ಮಲ್ಲದಗುಡ್ಡ ಕ್ಯಾಂಪಿನ ಹತ್ತಿರವಿರುವ ಹೊಲದಲ್ಲಿ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ನಂತರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಜ.29ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Accused Arrested For Rape Case at Sindhanur in Raichur grg
Author
First Published Feb 1, 2024, 11:00 PM IST

ಸಿಂಧನೂರು(ಫೆ.01): ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗ್ರಾಮೀಣ ಪೊಲೀಸ್ ಠಾಣೆಯ ತಂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಜ.25ರಂದು ರಾತ್ರಿ ವೇಳೆ ತಾಲೂಕಿನ ಅರಳಹಳ್ಳಿ ಕ್ರಾಸ್‌ನಲ್ಲಿರುವ ಮನೆಯ ಮುಂದೆ ಮಲಗಿದ್ದ ಶರಣಮ್ಮ ಬಸವರಾಜ (40) ಅವರನ್ನು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ಮಲ್ಲದಗುಡ್ಡ ಕ್ಯಾಂಪಿನ ಹತ್ತಿರವಿರುವ ಹೊಲದಲ್ಲಿ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ನಂತರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಜ.29ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದುವೆಗೆ 1 ದಿನ ಮೊದಲು ವಧುವಿನ ಮೇಲೆ ಅತ್ಯಾಚಾರ, ವಿವಾಹ ರದ್ದುಗೊಳಿಸಿದ ವರನ ಕುಟುಂಬ!

ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಸಿಂಧನೂರು ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವೀರಾರೆಡ್ಡಿ ಎಚ್ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್‌ ಮಹ್ಮದ್ ಇಸಾಕ್, ಎಎಸ್ಐ ದೌಲತಸಾಬ, ಸಿಬ್ಬಂದಿ ವೀರೇಶ, ರಾಘವೇಂದ್ರ, ಶಿವಲಿಂಗಪ್ಪ, ಗೋಪಾಲ, ಅನಿಲಕುಮಾರ, ಶರಣಬಸವ, ತಿಪ್ಪಣ್ಣ, ಅಶೋಕ, ತಾಂತ್ರಿಕ ಸಿಬ್ಬಂದಿ ಅಜೀಮ್‌ ಬಾಷಾ ಹಾಗೂ ಸಿಡಿಆರ್ ಸೆಲ್ ಒಳಗೊಂಡ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ಯಮನೂರ ಯಮನಪ್ಪ ಕುಂಬಾರ ಯರಡೋಣ (27) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Follow Us:
Download App:
  • android
  • ios