ಬಂಧಿತ ವ್ಯಕ್ತಿ ರಾತ್ರಿ ವೇಳೆ ಕೆಲ ಹೆಂಗಸರು, ಗಂಡಸರನ್ನು ಕರೆದಂದು ದಂಧೆ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಆತನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ತಳಿಸಿದ ನಂತರ ತಾವೇ ಮುಂದೆ ನಿಂತು ಚೇತನ್‌ ನಿರ್ಮಾಣ ಮಾಡಿದ್ದ ಶಡ್‌ನ ತೆರವು ಮಾಡಿದ್ದಾರೆ.

ಪೀಣ್ಯದಾಸರಹಳ್ಳಿ(ಜು.14): ತೃತೀಯ ಲಿಂಗಿ ಎಂದು ಹೇಳಿಕೊಂಡು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆ ಪಕ್ಕದಲ್ಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್‌ ಹಾಕಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಹಿಗ್ಗಾಮುಗ್ಗಾ ತಳಿಸಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸರಹಳ್ಳಿಯ ಮಂಜುನಾಥ ನಗರದ ನಿವಾಸಿ ಚೇತನ್‌ ಎನ್ನುವವರು ತೃತೀಯಲಿಂಗಿ ಎಂದು ಹೇಳಿಕೊಂಡು ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್‌ ರಸ್ತೆ ಪಕ್ಕದಲ್ಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಒಂದು ಶೆಡ್‌ ನಿರ್ಮಿಸಿಕೊಂಡು ವಾಸಮಾಡುತ್ತಿದ್ದರು. ಈ ವ್ಯಕ್ತಿ ರಾತ್ರಿ ವೇಳೆ ಕೆಲ ಹೆಂಗಸರು, ಗಂಡಸರನ್ನು ಕರೆದಂದು ದಂಧೆ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಆತನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ತಳಿಸಿದ ನಂತರ ತಾವೇ ಮುಂದೆ ನಿಂತು ಚೇತನ್‌ ನಿರ್ಮಾಣ ಮಾಡಿದ್ದ ಶಡ್‌ನ ತೆರವು ಮಾಡಿದ್ದಾರೆ.

ಶಿವಮೊಗ್ಗ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ: ಏಳು ಮಹಿಳೆಯರ ರಕ್ಷಣೆ

ಅಲ್ಲದೇ ತೃತೀಯಲಿಂಗಿ ಎಂದು ಹೆಳಿಕೊಂಡಿದ್ದ ಚೇತನ್‌ಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು, ಇದೇ ಮಂಜುನಾಥ ನಗರದಲ್ಲಿ ಮೂರು ಅಂತಸ್ಥಿನ ಮನೆಯಲ್ಲಿ ವಾಸವಾಗಿದ್ದ ಎಂದು ಸ್ಥಳಿಯ ನಿವಾಸಿಗಳು ತಿಳಿಸಿದ್ದಾರೆ. ನಾನು ತೃತೀಯ ಲಿಂಗಿ ಎಂದು ಸುಳ್ಳು ಹೇಳಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ಒಡಾಡುವವರ ಮೊಬೈಲ್‌ ಚೈನ್‌ ಕಿತ್ತುಕೊಳ್ಳುವುದು ಹಾಗು ಪ್ರಶ್ನೆ ಮಾಡಲು ಹೋದರೆ ದೌರ್ಜನ್ಯ ಮಾಡುತ್ತಿದ್ದ ಎಂದು ಮಂಜುನಾಥನಗರ ವಾಸಿಗಳು ಆರೋಪ ಮಾಡಿದ್ದಾರೆ. ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.