ರಸ್ತೆಯಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಮೈಮುಟ್ಟಿ ವಿಕೃತಿ ಮೆರೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ ಮೂರರಂದು ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿ ಘಟನೆ ನಡೆದಿತ್ತು.
ಬೆಂಗಳೂರು (ಜು.09): ರಸ್ತೆಯಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಮೈಮುಟ್ಟಿ ವಿಕೃತಿ ಮೆರೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ ಮೂರರಂದು ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿ ಘಟನೆ ನಡೆದಿತ್ತು. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ವಿಕೃತ ಮನಸ್ಸಿನ ಗಂಗಾಧರ, ಕಾರ್ಯಕ್ರಮದ ನಂತರ ತೆರಳುತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಲ್ಲದೇ ರಸ್ತೆಯಲ್ಲಿ ಸಿಕ್ಕ ಎರಡು ಮೂವರು ಯುವತಿಯರಿಗೆ ಮೈ ಕೈ ಮುಟ್ಟಿ ದೌರ್ಜನ್ಯ ಕೂಡಾ ಎಸಗಿದ್ದ.
ಈ ಬಗ್ಗೆ ಸದಾಶಿವ ನಗರದಲ್ಲಿ ಕೇಸ್ ದಾಖಲಾಗಿತ್ತು. ಇಂದು ಬೆಳಗ್ಗೆ 6:24 ರ ಸಮಯದಲ್ಲಿ ಕೃತ್ಯ ಎಸಗಿದ್ದ ಆರೋಪಿಯನ್ನ ಸದ್ಯ ಅರೆಸ್ಟ್ ಮಾಡಿ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಅಲ್ಲದೇ ನಗರದ ಬೇರೆ ನೇರೆ ಭಾಗದಲ್ಲಿ ಸಹ ಇದೇ ರೀತಿ ಕೃತ್ಯ ಎಸಗಿರೊ ಬಗ್ಗೆ ವಿಚಾರಣೆಯನ್ನು ನಡೆಸಲಾಗುತ್ತಿದೆ. ಸದ್ಯ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬೃಹತ್ ಕಾರ್ಯಾಚರಣೆ
ಖತರ್ನಾಕ್ ಖದೀಮನ ಬಂಧನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಆರೋಪಿ ಸೇರಿದಂತೆ ಬಾಲಾಪರಾಧಿಯನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಬಾಗಲಗುಂಟೆಯ ಚಂದನ್.ಜೆ.(23)ಮತ್ತೋರ್ವ ಬಾಲಾಪರಾದಿ ಬಂಧನವಾಗಿದ್ದು, ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲುವ ಲಾರಿ, ಇತರೆ ಗೂಡ್ಸ್ ವಾಹನಗಳೇ ಇವರ ಟಾರ್ಗೆಟ್ ಆಗಿದ್ದು, ವಾಹನ ಚಾಲಕರಿಗೆ ಮತ್ತು ಕ್ಲೀನರ್‌ಗಳಿಗೆ ಪೆಪ್ಪರ್ ಸ್ಪ್ರೆ ಮಾಡಿ ಮೊಬೈಲ್ ಮತ್ತು ಹಣವನ್ನು ಸುಲಿಗೆ ಮಾಡುತ್ತಿದ್ದರು ಇದಲ್ಲದೆ ರಸ್ತೆ, ಫ್ಲೈಒವರ್ ಬಳಿ ನಿಲ್ಲಿಸಿದ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್ ಮುರಿದು ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.
Bengaluru: ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದವನ ಸೆರೆ
ನೆಲಮಂಗಲ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಚಂದನ್ ಸೇರಿದಂತೆ ಬಾಲಾಪರಾದಿಯನ್ನು ಬಂಧಿಸಿದ್ದು, ಬಂಧಿತರಿಂದ ಕದ್ದ ಸುಮಾರು 4.5 ಲಕ್ಷ ಮೌಲ್ಯದ 22 ಮೊಬೈಲ್‌ಗಳು ಮತ್ತು 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಚಂದನ್.ಜೆ. ಮೇಲೆ ಈಗಾಗಲೇ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
