ಪ್ರಕರಣದ  ತನಿಖೆಗೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಎಂಟ್ರಿಯಾದ್ಮೇಲೆ ಆರೋಪಿ ವಂಚನೆ ಬಯಲಿಗೆ ಬಂದಿದೆ. ಆರೋಪಿ ವಂಚನೆ ಕಥೆ ಕೇಳಿ ತಲೆಕೆಡಿಸಿಕೊಂಡಿದ್ದ ಬನಶಂಕರಿ ಠಾಣೆಯ ಪೊಲೀಸರು. 

ಬೆಂಗಳೂರು(ಡಿ.30): ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವಂಚಿಸುತ್ತಿದ್ದ ಖತರ್ನಾಕ್ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ. ಪಾಂಡೆ ಬಂಧಿತ ಆರೋಪಿಯಾಗಿದ್ದಾನೆ. ಎಡಗೈ ಮಾಡೋ ಕೆಲಸ ಬಲಗೈಗೆ ಗೊತ್ತಾಗದ ರೀತಿಯಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಬನಶಂಕರಿ ಪಾಂಡೆ. ಪ್ರಕರಣದ ತನಿಖೆಗೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಎಂಟ್ರಿಯಾದ್ಮೇಲೆ ಆರೋಪಿ ವಂಚನೆ ಬಯಲಿಗೆ ಬಂದಿದೆ. ಆರೋಪಿ ವಂಚನೆ ಕಥೆ ಕೇಳಿ ಬನಶಂಕರಿ ಠಾಣೆಯ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಹೀಗಾಗಿ ಸ್ವತಃ ಡಿಸಿಪಿ ಕೃಷ್ಣಕಾಂತ್ ಅವರೇ ತನಿಖೆಗಿಳಿದಿದ್ದರು. ತನಿಖೆಯಲ್ಲಿ ಆರೋಪಿಯ ಅಸಲಿಯತ್ತು ಬಯಲಾಗಿದೆ. ಹಿಂಗೂ ವಂಚನೆ ಮಾಡ್ಬೋದ ಅಂತ ಪೊಲೀಸ್ರು ಆಶ್ಚರ್ಯಪಟ್ಟಿದ್ದಾರೆ. 

ಬಂಧಿತ ಆರೋಪಿ ಕ್ರೆಡಿಟ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚನೆ ಮಾಡುತ್ತಿದ್ದನಂತೆ. ಆರೋಪಿ ಕಾನ್ಪುರದಲ್ಲಿ ಸಿವಿಲ್ ಇಂಜಿನಿಯರ್ ಮುಗಿಸಿ ಐಐಟಿಯಲ್ಲಿ ವ್ಯಾಸಾಂಗ ಮಾಡಿದ್ದನಂತೆ. ಬುದ್ದಿವಂತಿಕೆಯಿಂದ ಇದ್ದ ಕೆಲಸವನ್ನೂ ಬಿಟ್ಟು ವಂಚನೆ ಮಾಡಲು ಮುಂದಾಗಿದ್ದ ಬಂಧಿತ ಆರೋಪಿ. 

Mangaluru crime: ಸೌದಿಯಲ್ಲಿ ಅಪಘಾತ: ಮಂಗಳೂರಿನ ಯುವಕ ಮೃತ

ಜನರಿಗೆ ವಂಚಿಸಿ ತಿಂಗಳಿಗೆ 3 ರಿಂದ ನಾಲ್ಕು ಲಕ್ಷ ರೂ. ದುಡಿಯುತ್ತಿದ್ದನಂತೆ. ಕ್ರೆಡಿಟ್ ಕಾರ್ಡ್ ಗ್ರಾಹಕರ ದುಡ್ಡಿನಲ್ಲೇ ಇವನ ಆಟ ನಡೆಯುತ್ತಿತ್ತು. ಆದ್ರೆ ಗ್ರಾಹಕರಿಗೆ ಮಾತ್ರ ಇವನ ವಂಚನೆ ಗೊತ್ತಾಗುತ್ತಿರಲಿಲ್ಲ. ಕ್ರೆಡಿಟ್ ಲೋನ್ ಕೊಡಿಸಿ ಕ್ರೆಡಿಟ್ ರಿವಾರ್ಡ್ ಪಾಯಿಂಟ್ಸ್ ಜೊತೆಗೆ ಇಂಟ್ರೆಸ್ಟ್ ಹಣವನ್ನ ನುಂಗುತ್ತಿದ್ದ ಆರೋಪಿ. ಈತನ ಬುದ್ದಿವಂತಿಕೆ ಮಾರುಹೋಗಿದ್ದ 185 ಮಂದಿ ಕ್ರೆಡಿಟ್ ಕಾರ್ಡನ್ನೇ ಆರೋಪಿಗೆ ಕೊಟ್ಟಿದ್ದರು. ಮೊದಲ ಗ್ರಾಹಕರ ಬಿಲ್ಲನ್ನ ಎರಡನೆಯ ಗ್ರಾಹಕರ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿಸುತ್ತಿದ್ದ ಪಾಂಡೆ. ಎರಡನೆಯ ಗ್ರಾಹಕನ ಕ್ರೆಡಿಟ್ ಬಿಲ್ಲನ್ನ ಮೂರನೆ ಗ್ರಾಹಕನ ಬಳಿ ಮಾಡಿಸುತ್ತಿದ್ದ ಆರೋಪಿ. ಇದೇ ರೀತಿ ಹಲವರ ಬಿಲ್ ಪೇಮೆಂಟ್ ಮಾಡಿಸಿ ನಂಬಿಕೆ ಗಳಿಸುತ್ತಿದ್ದನಂತೆ. ಆದ್ರೆ ಆರೋಪಿ ಬಡ್ಡಿ ಹಣ ಜೊತೆಗೆ ರಿವಾರ್ಡ್ ಹಣ ಹೊಡೆಯುತ್ತಿದ್ದದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಆರೋಪಿಯನ್ನ ನಂಬಿದ ಗ್ರಾಹಕರು ಕ್ರೆಡಿಟ್ ಕಾರ್ಡ್ ಕೊಟ್ಟು ಹೋಗುತ್ತಿದ್ದರು. 

ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಆರೋಪಿ

ಬಂಧಿತ ಆರೋಪಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ, ಅದರಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡುತ್ತಿದ್ದನು. ಅದರಲ್ಲಿ ಬರುವ ರಿವಾರ್ಡ್ ಪಾಯಿಂಟ್ಸ್ ರೀಡಿಮ್ ಮಾಡಿ ಹಣ ಹೊಡೆಯುತ್ತಿದ್ದನು. ಹೋಟೆಲ್‌ವೊಂದರ ಹೆಸರಲ್ಲಿ ಸ್ವೈಪ್ ಮುಶಿನ್ ಖರೀದಿಸಿದ್ದ, ಪ್ರಕರಣ ಬೆಳಕಿಗೆ ಬಂದಿದ್ದೇ ಹೋಟೆಲ್ ಮಾಲೀಕರು ದೂರು ಕೊಟ್ಟ ಮೇಲೆ. ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು ಆತನ ಬ್ಯಾಂಕ್ ಅಕೌಂಟ್ ಪ್ರೀಜ್ ಮಾಡಿದ್ದಾರೆ. 

ಪಾಂಡೆ ಅಕೌಂಟ್‌ನಲ್ಲಿದ್ದ 4 ಲಕ್ಷ ಹಣ ಪ್ರೀಜ್ ಮಾಡಲಾಗಿದೆ. ಎಲ್ಲ ಕ್ರೆಡಿಟ್ ಕಾರ್ಡ್ ಹಣವನ್ನ ಒಟ್ಟಿಗೆ ಡ್ರಾ ಮಾಡಿ ಕೋಟಿ ರೂ. ಹಣ ಎಗರಿಸಲು ಪ್ಲಾನ್ ಮಾಡಿದ್ದನಂತೆ ಆರೋಪಿ. ಆದ್ರೆ ಅಷ್ಟರಲ್ಲಿ ಖದೀಮನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನಿಂದ 185 ಕ್ರೆಡಿಟ್ ಕಾರ್ಡ್, ನಾಲ್ಕು ಲ್ಯಾಪ್ ಟಾಪ್, 7 ಮೊಬೈಲ್ 2 ಸ್ವೈಪಿಂಗ್ ಮಶಿನ್‌ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯನ್ನ ಪೊಲೀಸರು ಮುಂದುವರಿಸಿದ್ದಾರೆ.