Asianet Suvarna News Asianet Suvarna News

ಬಟ್ಟೆ ವ್ಯಾಪಾರಿಯಿಂದ 37 ಲಕ್ಷ ರು. ಸುಲಿಗೆ ಮಾಡಿದ್ದವನ ಬಂಧನ

ಆರೋಪಿಯಿಂದ 30.54 ಲಕ್ಷ ನಗದು ಹಾಗೂ ದ್ವಿಚಕ್ರ ವಾಹನ ಜಪ್ತಿ| ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು| ತಲೆಮರೆಸಿಕೊಂಡಿರುವ ಮತ್ತೊಬ್ಬನಿಗೆ ಜಾಲ ಬೀಸಿದ ಪೊಲೀಸರು| 

Accused Arrested for Extortion Case in Bengaluru grg
Author
Bengaluru, First Published Nov 20, 2020, 8:06 AM IST

ಬೆಂಗಳೂರು(ನ.20): ಇತ್ತೀಚಿಗೆ ಬಟ್ಟೆ ವ್ಯಾಪಾರಿಯೊಬ್ಬರನ್ನು ಬೆದರಿಸಿ 37.8 ಲಕ್ಷ ಸುಲಿಗೆ ಮಾಡಿದ್ದ ದುಷ್ಕರ್ಮಿಯನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಜೆ.ನಗರದ ಗೋರಿಪಾಳ್ಯದ ಅಸ್ಲಾಂ ಪಾಷ ಬಂಧಿತನಾಗಿದ್ದು, ಆರೋಪಿಯಿಂದ 30.54 ಲಕ್ಷ ನಗದು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಮಾಮೂಲ್‌ ಪೇಟೆಯ ಮೆಹ್ತಾ ಪ್ಲಾಜಾ ಬಳಿ ವಿ.ವಿ.ಪುರದ ಅಂಕಿತ್‌ ಕುಮಾರ್‌ ಅವರು, ಬಟ್ಟೆ ವ್ಯಾಪಾರದ ಹಣ ಪಡೆದುಕೊಂಡಿದ್ದರು. ಆಗ ಹಣದ ಬ್ಯಾಗ್‌ ಅನ್ನು ಸ್ಕೂಟರ್‌ ಡಿಕ್ಕಿಯಲ್ಲಿಡುವ ವೇಳೆ ಅಪರಿಚಿತರು ಕಬ್ಬಿಣದ ಸಲಾಕೆಯ ತೋರಿಸಿ ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. 

ಎಟಿಎಂ ಸರ್ವಿಸ್‌ ನೆಪದಲ್ಲಿ 50 ಲಕ್ಷ ಲೂಟಿ..!

ಈ ಬಗ್ಗೆ ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬನಿಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios