Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ
ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ (42) ಬಂಧಿತ ಆರೋಪಿ.
ಬೆಂಗಳೂರು (ಜ.23): ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ (42) ಬಂಧಿತ ಆರೋಪಿ. ಇದೇ ತಿಂಗಳು 10 ತಾರೀಖು ವಿಜಯ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ಆರೋಪಿಯು ನುಗಿದ್ದ. ಘಟನೆ ನಡೆದ 13 ದಿನಗಳ ಬಳಿಕ ಕೊನೆಗೂ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾಸ್ಟ್ರೊಲಜಿ ಖಾಯಿಲೆಯಿಂದ ಬಳಲುತ್ತಿದ್ದ ಅಜಯ್, ವಿಜಯ ಕಾಲೇಜು ಬಳಿ ತೆರಳುತಿದ್ದ. ಈ ವೇಳೆ ಗಡಿಬಿಡಿಯಲ್ಲಿ ಲೇಡಿಸ್ ಬಾತ್ ರೂಂಗೆ ತೆರಳಿದ್ದ.ಈ ವೇಳೆ ಹೆಣ್ಣುಮಕ್ಕಳನ್ನು ಕಂಡು ಗಾಬರಿಯಾಗಿ ಅವರ ಬಾಯಿ ಮುಚ್ಚಿ, ಬೆದರಿಕೆ ಹಾಕಿದ್ದ. ಸದ್ಯ ಆಡಳಿತ ಮಂಡಳಿ ದೂರಿನನ್ವಯ ಆರೋಪಿ ಅಜಯ್ ಬಂಧನವಾಗಿದೆ. ಜ. 10ರಂದು ವಿದ್ಯಾರ್ಥಿನಿಯೊಬ್ಬಳು ಶೌಚಾಗೃಹದ ಒಳಗೆ ಹೋಗಿದ್ದಳು. ಈ ವೇಳೆ ಅದೇ ಶೌಚಗೃಹದ ಒಳಗಡೆ ಯುವಕನೊಬ್ಬ ನುಗ್ಗಿದ್ದ. ಬಳಿಕ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ.
ಪ್ಲಾಸ್ಟಿಕ್ ರೇಷನ್ ಅಕ್ಕಿಯೆಂದು ಭಯಗೊಂಡ ಗ್ರಾಮಸ್ಥರು: ಅಡುಗೆ ಮಾಡಲು ಭಯ ಪಡುತ್ತಿರುವ ಮಹಿಳೆಯರು
ತಕ್ಷಣ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದಾಗ, ಆತ ಗಾಬರಿಯಿಂದ ಟಾಯ್ಲೆಟ್ನ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಈ ಘಟನೆ ಕಾಲೇಜು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿತ್ತು. ಘಟನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿದ ಕಾಲೇಜಿನ ಆಡಳಿತ ಮಂಡಳಿ ಜಯನಗರ ಪೊಲೀಸರಿಗೆ ದೂರು ನೀಡಿತ್ತು. ಇದೀಗ ಅಜಯ್ ಕುಮಾರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹನುಮಂತನಗರ ಎರಡನೇ ಹಂತದಲ್ಲಿ ಆರೋಪಿಯು ತಲೆ ಮರೆಸಿಕೊಂಡಿದ್ದ.