* ಇನ್ಟ್ ಸ್ಟಾ ಗ್ರಾಮ್ ನಲ್ಲಿ  ನಿಂದನೆ ಮಾಡಿರುವ ವ್ಯಕ್ತಿ ವಿರುದ್ದ ದೂರು  * ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ* ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗ ಸಿಇಎನ್ ಠಾಣೆ

ಬೆಂಗಳೂರು(ಜೂ.09): ಕೆಲ ಸಮಯದಿಂದ ಸೈಲೆಂಟ್‌ ಆಗಿದ್ದ ಮೋಹಕತಾರೆ ರಮ್ಯಾ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಆಕ್ಟಿವ್ ಆಗಿದ್ದಾರೆ. ಆದರೆ ಹೀಗಿರುವಾಗಲೇ ಚಂದನವನದ ಕ್ವೀನ್ ಸೋಶಿಯಲ್ ಮೀಡಿಯಾ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಹೌದು ಇನ್ಸ್ಟಾ ಗ್ರಾಂನಲ್ಲಿ ನಿಂದನೆ ಮಾಡಿರುವ ವಿಚಾರವಾಗಿ ಕೆರಳಿರುವ ನಟಿ ರಮ್ಯಾ, ನಿಂದಿಸಿದ ವ್ಯಕ್ತಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ.

ರಮ್ಯಾ ಸಿನಿಮಾ ಲೈಫ್

ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ದಶಕಗಳ ಕಾಲ ಚಂದನವನವನ್ನು ಆಳಿದ ಮಂಡ್ಯದ ಬೆಡಗಿ ರಮ್ಯಾ ಬಳಿಕ ಸಿನಿ ಕ್ಷೇತ್ರದಿಂದ ಕೊಂಚ ದೂರವಾಗಿದ್ದರು. ನೋಡ ನೋಡುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದರು. ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಸೈ ಎನಿಸಿಕೊಂಡಿದ್ದ ರಮ್ಯಾ ಬಳಿಕ ಏಕಾಏಕಿ ಎರಡೂ ಕ್ಷೇತ್ರಗಳನ್ನು ತೊರೆದು ವಿದೇಶದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು. ಪುಟ್ಟ ಬ್ರೇಜ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

ಇತ್ತೀಚೆಗಷ್ಟೇ ನಡೆದ ಖಾಸಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ರಮ್ಯಾ ಸಾಧನೆಯನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿತ್ತು. ಈ ವೇಳೆ ಚಿತ್ರರಂಗಕ್ಕೆ ರಮ್ಯಾ ಮರಳುವ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟಿ, ಹೌದು ನಾನು ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ. ಒಂದೊಳ್ಳೆ ಪಾತ್ರ ಮತ್ತು ಚಿತ್ರಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.