Asianet Suvarna News Asianet Suvarna News

ವಯಸ್ಸು ಮೂವತ್ತು ದಾಟಿದ್ರೂ ಮದುವೆಗೆ ಹೆಣ್ಣು ಸಿಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಿರಗಾಯಿ ಮನೆಯ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್‌ (32) ಆತ್ಮಹತ್ಯೆಗೆ ಶರಣಾಗಿದ್ದಾನೆ.

A young man committed suicide because he could not find bride in yalapur at uttara kannada rav
Author
First Published Jun 29, 2023, 11:41 AM IST

ಯಲ್ಲಾಪುರ (ಜೂ.29) ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಿರಗಾಯಿ ಮನೆಯ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್‌ (32) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯಲ್ಲಾಪುರದಲ್ಲಿ ಅಡಕೆ ವ್ಯಾಪಾರ ಮಾಡಿಕೊಂಡಿದ್ದು, ಜೂ. 27ರಂದು ಸಂಜೆ ಪೇಟೆಯಿಂದಲೇ ತನಗೆ ಬೇಕಾದ ಹಗ್ಗವನ್ನು ಖರೀದಿಸಿಕೊಂಡು ಮನೆಯ ಬಳಿಯಿರುವ ರಸ್ತೆಯ ಮೇಲೆ ತನ್ನ ಬೈಕ್‌ ನಿಲ್ಲಿಸಿ ಮರದ ಟೊಂಗೆಯೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ, ತಾಯಿ, ಬಂಧು-ಬಳಗದವರನ್ನು ಅಗಲಿದ್ದಾನೆ.

ವಿವಾಹವಾಗಿಲ್ಲ ಎನ್ನುವ ಕೊರಗಿನಲ್ಲಿ ತಾಳ್ಮೆ ಕಳೆದುಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದಾನೆ ಎಂದು ಸ್ಥಳೀಯರ ಹೇಳಿದ್ದಾರೆ. ಆದರೆ ಯುವಕ ಆತ್ಮಹತ್ಯೆಯ ಮಾಡಿಕೊಂಡಿರುವ ಕುರಿತು ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹುಡುಗ ಪಿಯುಸಿ ಫೇಲ್.. ಡಿಗ್ರಿ ಹುಡುಗಿ: ಪ್ರೀತಿ ಮಾಡಿದ ತಪ್ಪಿಗೆ ಜೀವ ಕಳೆದುಕೊಂಡ ಪ್ರೇಮಿಗಳು..!

ಸ್ಕೂಟರ್‌ ಡಿಕ್ಕಿ: ಇಬ್ಬರ ಸಾವು

ರಾಮನಗರ: ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂರ್ಟ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬಿಡದಿಯ ಕೆಂಪನಹಳ್ಳಿ ಗೇಚ್‌ ಸಮೀಪದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ರಾತ್ರಿ ನಡೆದಿದೆ. ಬೆಂಗಳೂರಿನ ಬಾಪೂಜಿ ನಗರದ ನಿವಾಸಿಗಳಾದ ಸನಾವುಲ್ಲಾ ಬೇಗಂ ಮತ್ತು ನೂರ್‌ ಜಹಾನ್‌ ಬೇಗಂ ಮೃತರು. ಕಾರ್ಯ ನಿಮಿತ್ತ ರಾಮನಗರಕ್ಕೆ ಬಂದಿದ್ದ ಇಬ್ಬರೂ, ರಾತ್ರಿ 7.30ರ ಸುಮಾರಿಗೆ ಬೆಂಗಳೂರಿಗೆ ಸ್ಕೂಟರ್‌ನಲ್ಲಿ ವಾಪಸ್ಸಾಗುತ್ತಿದ್ದರು. ವೇಗವಾಗಿ ಸ್ಕೂಟರ್‌ ಚಾಲನೆ ಮಾಡುತ್ತಿದ್ದ ಬೇಗ್‌ ಅವರು, ಕೆಂಪನಹಳ್ಳಿ ಗೇಚ್‌ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕæೂಂಡಿದ್ದಾರೆ.

Follow Us:
Download App:
  • android
  • ios