Asianet Suvarna News Asianet Suvarna News

ಬೆಂಗಳೂರಲ್ಲೊಬ್ಬ ವಿಚಿತ್ರ ಕಳ್ಳ; ಎಳನೀರು ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ!

ಕಳ್ಳರೆಂದರೆ ಯಾವಾಗಲೂ ಶ್ರೀಮಂತರ ಮನೆ, ಶಾಪ್‌ಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಇವನು ಯಾರ ಮನೆಗೂ ನುಗ್ಗೋದಿಲ್ಲ. ನಗನಾಣ್ಯ ಕದಿಯೋದಿಲ್ಲ. ಆದರೆ ಇವನ ಕಣ್ಣಿಗೆ ಎಲ್ಲೇ ಎಳೆನೀರು ಕಂಡ್ರೂ ಕ್ಷಣಾರ್ಧದಲ್ಲಿ ಕದಿಯುತ್ತಾನೆ!

A strange thief in Bangalore Mohan was coming in a car to steal fresh water at madiwal bengaluru rav
Author
First Published Nov 22, 2023, 9:09 AM IST

ಬೆಂಗಳೂರು (ನ.22) ಕಳ್ಳರೆಂದರೆ ಯಾವಾಗಲೂ ಶ್ರೀಮಂತರ ಮನೆ, ಶಾಪ್‌ಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಇವನು ಯಾರ ಮನೆಗೂ ನುಗ್ಗೋದಿಲ್ಲ. ನಗನಾಣ್ಯ ಕದಿಯೋದಿಲ್ಲ. ಆದರೆ ಇವನ ಕಣ್ಣಿಗೆ ಎಲ್ಲೇ ಎಳೆನೀರು ಕಂಡ್ರೂ ಕ್ಷಣಾರ್ಧದಲ್ಲಿ ಕದಿಯುತ್ತಾನೆ!

ನಗರದಲ್ಲಿ ಎಳನೀರು ಕದಿಯುತ್ತಿದ್ದ ಮೋಹನ್ ಎಂಬ ವಿಚಿತ್ರ ಆಸಾಮಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನವನಾದ ಆರೋಪಿ ಮೋಹನ್, ಮಡಿವಾಳದಲ್ಲಿ ವಾಸವಾಗಿದ್ದ. ಕಳೆದ ಮೂರು ತಿಂಗಳಿಂದ ಎಳನೀರು ಕಳ್ಳತನ ಮಾಡುತ್ತಿದ್ದ ಮೋಹನ್. ಎಳನೀರು ಕದಿಯಲು ಬರುತ್ತಿದ್ದುದ್ದು ಮಾತ್ರ ಕಾರಿನಲ್ಲೇ! ರಾತ್ರಿ ವೇಳೆ ಕಾರಿನಲ್ಲಿ ಬಂದು ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ.

ಕಳ್ಳತನ ಮಾಡಿ ದಾನ, ಧರ್ಮ ಮಾಡುತ್ತಿದ್ದ ವಿಚಿತ್ರ ಕಳ್ಳ ಅರೆಸ್ಟ್!

ಇತ್ತೀಚೆಗೆ ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ರಾಜಣ್ಣ ಎಂಬುವರ 1150 ಎಳನೀರು ಕದ್ದಿದ್ದ ಆರೋಪಿ. ಈ ಬಗ್ಗೆ ರಾಜಣ್ಣ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಆಗಿತ್ತು. ರಾತ್ರಿವೇಳೆ ಕಾರಿನಲ್ಲಿ ಬಂದು ಎಳನೀರು ಕದಿಯುತ್ತಿದ್ದ ಆಸಾಮಿ ಮೋಹನ್ ಎಂಬುದು ಖಚಿತವಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರು. ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆದುಕೊಂಡ ಪೊಲೀಸರು. 

ಆನ್‌ಲೈನ್‌ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಆರೋಪಿ:

ಎಳನೀರು ಕದ್ದ ಪ್ರಕರಣ ಸಂಬಂಧ ಆರೋಪಿ ಮೋಹನ ವಿಚಾರಣೆ ಮಾಡುವ ವೇಳೆ ಎಳನೀರು ಕಳ್ಳನ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ. ಜೂಜಾಟದ ಹುಚ್ಚು ಹತ್ತಿಸಿಕೊಂಡಿದ್ದ ಆರೋಪಿ, ಆನ್‌ಲೈನ್‌ನಲ್ಲಿ ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ . ಆರೋಪಿ. ಇದರಿಂದ ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಪ್ರತಿದಿನ ರಾತ್ರಿ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಬರುತ್ತಿದ್ದ ಅಸಾಮಿ. ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್‌. ಹೀಗಾಗಿ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಮೊದಲಿಗೆ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ ಆರೋಪಿ ಬಳಿಕ ರಾತ್ರಿ ಆಗ್ತಿದ್ದಂತೆ ಕಾರು ಬಾಡಿಗೆ ಪಡೆದುಕೊಂಡು ಎಳನೀರು ಕದಿಯುವ ಕಾಯಕ ಮಾಡಿಕೊಂಡಿದ್ದ ಆರೋಪಿ.

ಮೈಗೆ ಎಣ್ಣೆ ಸವರಿಕೊಂಡು ಬೆತ್ತಲಾಗಿ ಕಳವಿಗೆ ಇಳಿಯುತ್ತಿದ್ದ ಖದೀಮ ಅಂದರ್

ಕದ್ದ ಎಳನೀರು ಮಾರಲು ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದ ಆಸಾಮಿ!

ಇವನೆಂಥ ಕಾನ್ಫಿಡೆಂಟ್ ಕಳ್ಳನೆಂದರೆ ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟಾಗಿ ಕಸ್ಟಮರ್‌ಗಳನ್ನ ಇಟ್ಟುಕೊಂಡಿದ್ದ ಎಂದರೆ ನಂಬ್ತೀರಾ? ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ. ಹೀಗೆ ದಿನಕ್ಕೆ 100-150 ಎಳನೀರು ಕದ್ದು ಮಾರಾಟ ಮಾಡ್ತಿದ್ದ.

Follow Us:
Download App:
  • android
  • ios