Asianet Suvarna News Asianet Suvarna News

ಕೊಡಗಿನ ದೇವರಪುರದಲ್ಲಿ ಕಾರು ಅಡ್ಡಗಟ್ಟಿ ಕೇರಳದ ಗುತ್ತಿಗೆದಾರನಿಂದ 50 ಲಕ್ಷ ದರೋಡೆ: ಮನಸ್ಸೋ ಇಚ್ಛೆ ಹಲ್ಲೆ!

ಚಿನ್ನಾಭರಣ ಮಾರಾಟ ಮಾಡಿ 50 ಲಕ್ಷ ಹಣವನ್ನು ತಮ್ಮ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಮನಸ್ಸೋ ಇಚ್ಛೆ ಥಳಿಸಿ ಬಳಿಕ ಅವರ ಕಾರಿನಲ್ಲಿ ಇದ್ದ 50 ಲಕ್ಷ ಹಣವನ್ನು ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ದೇವರಪುರ ಬಳಿ ನಡೆದಿದೆ. 

a kerala mans car was intercepted near gonikoppalu and heist of 50 lakh gvd
Author
First Published Dec 9, 2023, 11:30 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.09): ಚಿನ್ನಾಭರಣ ಮಾರಾಟ ಮಾಡಿ 50 ಲಕ್ಷ ಹಣವನ್ನು ತಮ್ಮ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಮನಸ್ಸೋ ಇಚ್ಛೆ ಥಳಿಸಿ ಬಳಿಕ ಅವರ ಕಾರಿನಲ್ಲಿ ಇದ್ದ 50 ಲಕ್ಷ ಹಣವನ್ನು ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ದೇವರಪುರ ಬಳಿ ನಡೆದಿದೆ. ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಕೋಡಕ್ಕಾಡ್ ನ ಶಂಜ್ಜಾದ್ ಎಂಬುವರ ಕಾರನ್ನು ಅಡ್ಡಗಡ್ಡಿ ದರೋಡೆ ಮಾಡಲಾಗಿದೆ.  ಶಂಜ್ಜಾದ್ ಎಂಬುವರು ಕೇರಳದಲ್ಲಿ ಗುತ್ತಿಗೆದಾರರಾಗಿದ್ದು ಅವರಿಗೆ ಹಣದ ಅಗತ್ಯವಿದ್ದಿದ್ದರಿಂದ ತಮ್ಮ ಬಳಿ ಇದ್ದ ತಮ್ಮ ಮತ್ತು ತಮಮ್ಮ ಪತ್ನಿ ಚಿನ್ನಾಭರಣಗಳನ್ನು ಕೇರಳದಲ್ಲಿಯೇ ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಪರಿವರ್ತಿಸಿ ಹೆಚ್ಚಿನ ಬೆಲೆ ಸಿಗುತ್ತದೆ ಎನ್ನುವ ಮಾಹಿತಿ ಆಧಾರದಲ್ಲಿ ಅದನ್ನು ಮೈಸೂರಿನ ಅಶೋಕ ರಸ್ತೆಯಲ್ಲಿ ಚಿನ್ನದ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದಾರೆ. 

ಬಳಿಕ ತಮ್ಮ ಕಾರಿನಲ್ಲಿ ಸ್ನೇಹಿತ ಅಪ್ನು ಎಂಬಾತನೊಂದಿಗೆ ಆ ಹಣವನ್ನು ಕೇರಳಕ್ಕೆ ವಾಪಸ್ ಕೊಂಡೊಯ್ಯವ ವೇಳೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಸಮೀಪದ ದೇವರಪುರ ಎಂಬಲ್ಲಿ 3 ಕಾರುಗಳಲ್ಲಿ ಬಂದ 15 ಜನರ ತಂಡ ಶಂಜ್ಜಾದ್ ಅವರ ಕಾರನ್ನು ಅಡ್ಡಗಟ್ಟಿದೆ. ಬಳಿಕ ಹಣ ಕೊಡು, ಜೀವ ತೆಗೆಯುತ್ತೇವೆ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ಹಣ ಕೊಡದೇ ಇದ್ದಾಗ ಇವರಿಬ್ಬರನ್ನು ಬೇರೆ ಕಾರಿನಲ್ಲಿ ಕೂರಿಸಿಕೊಂಡು ಇವರ HR 26 C L 5200 ಸಂಖ್ಯೆಯ ಮಿನಿ ಕೂಪರ್ ಕಾರನ್ನು ಅಪರಿಸಿದ್ದಾರೆ. ನಂತರ ಹಣವನ್ನು ದೋಚಿ ಇವರು ಇಬ್ಬರನ್ನು ಇವರಿಗೆ ತಿಳಿಯದ ಸ್ಥಳದಲ್ಲಿ ಬಿಟ್ಟು ದರೋಡೆಕೋರ ತಂಡ ಪರಾರಿಯಾಗಿದೆ ಎನ್ನಲಾಗಿದೆ. 

ವಿರೋಧ ಪಕ್ಷಗಳು ಹತಾಶರಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ: ಯತೀಂದ್ರ ಸಿದ್ದರಾಮಯ್ಯ

ಇದಾದ ಬಳಿಕ ಇವರಿಬ್ಬರೂ ನಡೆದುಕೊಂಡೆ ಬಂದು ವಿರಾಜಪೇಟೆಯ ಮುಖ್ಯ ರಸ್ತೆಗೆ ಸೇರಿ ನಂತರ ಮುಂಜಾನೆ ಪೇಪರ್ ಸಾಗಿಸುವ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಆ ಕಾರಿನಲ್ಲಿ ಬಂದು ವಿರಾಜಪೇಟೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಘಟನೆ ನಡೆದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ಕೊಡಗು ಎಸ್ ಪಿ ರಾಮರಾಜನ್, ಎಎಸ್ಪಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೌಲ್ವಿ ಹಾಶ್ಮಿ ಜತೆ ನನಗೆ ಬಿಸಿನೆಸ್‌ ಇಲ್ಲ: ಶಾಸಕ ಬಸನಗೌಡ ಯತ್ನಾಳ್‌

ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ಡಿವೈಎಸ್ಪಿ, ಮೂರು ಇನ್ಸ್ಪೆಕ್ಟರ್, ಏಳು ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ. ದರೋಡೆ ಕೋರರು ಅಪಹರಿಸಿದ್ದ ಮಿನಿ ಕೂಪರ್ ಕಾರನ್ನು ಗೋಣಿಕೊಪ್ಪ ಸಮೀಪದ ಕೊಳತ್ತೋಡು ಬೈಗೂಡು ಸಮೀಪ ಬಿಟ್ಟು ಹೋಗಿದ್ದು ಶನಿವಾರ ಮಧ್ಯಾಹ್ನದ ಬಳಿಕ ಅಲ್ಲಿ ಕಾರು ಇರುವುದು ಪತ್ತೆಯಾಗಿದೆ. ಮೂರು ವಾಹನ, ಹಾಗೂ ಒಂದು ಗೂಡ್ಸ್ ವಾಹನದಲ್ಲಿ ಬಂದು ಇವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೈಸೂರಿನಲ್ಲಿ ಹಣ ಪಡೆದು ಕಾರಿನಲ್ಲಿ ಸಾಗಿಸುತ್ತಿರುವುದನ್ನು ಗಮನಿಸಿರುವ ದರೋಡೆ ಕೋರರು ಇವರನ್ನು ಹಿಂಬಾಲಿಸಿ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.

Follow Us:
Download App:
  • android
  • ios