Asianet Suvarna News Asianet Suvarna News

ಸಾಲಬಾಧೆ ತಾಳದೆ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ!

ಸಾಲಬಾಧೆ ತಾಳಲಾರದೆ  ರೈತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಹಿರೇಮಣ ವ್ಯಾಪ್ತಿಯಲ್ಲಿ ನಡೆದಿದೆ.

a farmer commit suicide in lakshmeshwar at gadag district rav
Author
First Published Aug 31, 2024, 9:54 AM IST | Last Updated Aug 31, 2024, 10:01 AM IST

ಗದಗ (ಆ.31) ಸಾಲಬಾಧೆ ತಾಳಲಾರದೆ  ರೈತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಹಿರೇಮಣ ವ್ಯಾಪ್ತಿಯಲ್ಲಿ ನಡೆದಿದೆ.

ಶಂಕ್ರಣ್ಣ ಗೋಡಿ(54).ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರ್ಯಾಕ್ಟರ್ ಖರೀದಿ, ಬೆಳೆ ಸಾಲ, ಆಸ್ಪತ್ರೆ ವೆಚ್ಚಕ್ಕಾಗಿ ಹೀಗೆ  ಹಲವು ಬ್ಯಾಂಕ್ ಗಳಲ್ಲಿ ಸುಮಾರು 10 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ. ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಇತ್ತ ಐದು ಎಕರೆಯಲ್ಲಿ ಬೆಳೆದಿದ್ದ ಹೆಸರು, ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆ ಅತಿವೃಷ್ಟಿಯಿಂದ  ನಾಶವಾಗಿತ್ತು. ಇದರಿಂದ ಬ್ಯಾಂಕ್ ಸಾಲ, ಬೆಳೆ ನಷ್ಟದಿಂದ  ತೀವ್ರ ಮನನೊಂದು ಜಮೀನಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ರೈತ. ಸದ್ಯ ಪ್ರಕರಣ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತದಲ್ಲಿ ಆತಂಕಕಾರಿಯಾಗಿ ಏರುತ್ತಿದೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ.?

ನೇಣುಬಿಗಿದು ಯುವಕ ಆತ್ಮಹತ್ಯೆ

ಶಿಕಾರಿಪುರ: ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತ ಯುವಕನನ್ನು ಗಿರೀಶ್ (30) ಎಂದು ಗುರುತಿಸಲಾಗಿದ್ದು, ಈತ ಮದುವೆ, ವಿಶೇಷ ಸಮಾರಂಭಗಳಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ. ಪಟ್ಟಣದ ಮಂಗಳಭವನದ ಎದುರಿನ ಪಿಡಬ್ಯೂಡಿ ಕ್ವಾಟ್ರಸ್‌ನಲ್ಲಿನ ಮನೆಯಲ್ಲಿ ವಾಸವಿದ್ದ ಗಿರೀಶ್,  ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.

ಮೈಸೂರಿನ ಮಗಳ ಮನೆಗೆ ತೆರಳಿದ್ದ ಮೃತನ ತಂದೆ-ತಾಯಿ ಶುಕ್ರವಾರ ಬೆಳಿಗ್ಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಡೆತ್‌ನೋಟ್ ದೊರೆತಿದ್ದು, ‘ನನ್ನ ಆತ್ಮಹತ್ಯೆಗೆ ಯಾರೂ ಕಾರಣವಲ್ಲ’ ಎಂದು ಬರೆದಿರುವುದು ಪತ್ತೆಯಾಗಿದೆ. ಇಲ್ಲಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios